ಯುರೋಪ್‌ನಲ್ಲಿ ಮಹೀಂದ್ರ ಮಾಲೀಕತ್ವದ ಜಾವಾ ಮೋಟಾರ್‌ಸೈಕಲ್ ಬಿಡುಗಡೆಗೆ ತಯಾರಿ!

By Suvarna News  |  First Published May 3, 2020, 5:52 PM IST

ಭಾರತದಲ್ಲಿ ಜಾವಾ ಮೋಟಾರ್‌ಸೈಕಲ್ ಮತ್ತೆ ತನ್ನ ಖದರ್ ತೋರಿಸಿದೆ. ಡೆಲಿವರಿ ವಿಳಂಬ ಅನ್ನೋ ಆರೋಪ ಹೊರತು ಪಡಿಸಿದರೆ ಜಾವಾ ಬೈಕ್ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದೀಗ ಜಾವಾ ಮೋಟಾರ್ ಯೂರೋಪ್‌ನಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದೆ. ಜಾವಾ ಯೂರೋಪ್ ಸವಾರಿಗೆ ಇದೀಗ ರಾಯಲ್‌ ಎನ್‌ಫೀಲ್ಡ್ ಬೈಕ್‌ಗೆ ನಡುಕ ಶುರುವಾಗಿದೆ.


ಯುರೋಪ್(ಮೇ.03): ಮಹೀಂದ್ರ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ ಭಾರತದಲ್ಲಿ ಮತ್ತೆ ಜಾವಾ ಬೈಕ್ ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. 2018ರ ನವೆಂಬರ್ ತಿಂಗಳಲ್ಲಿ ಜಾವಾ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯಾಯಿತು. ಜಾವಾ 42 ಹಾಗೂ ಜಾವಾ ಕ್ಲಾಸಿಕ್ 2 ಮಾಡೆಲ್ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿತು. ಇದು ನೇರವಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮೇಲೆ ಪರಿಣಾಮ ಬೀರಿತು. 2019ರ ಅಂತ್ಯದಲ್ಲಿ ಜಾವಾ ಪೆರಾಕ್ ಬೊಬ್ಬರ್ ಬೈಕ್ ಕೂಡ ಬಿಡುಗಡೆಯಾಗಿದೆ.

ಭಾರತಕ್ಕೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!..

Latest Videos

undefined

1.55 ಲಕ್ಷ ರೂಪಾಯಿ ಹಾಗೂ 1.64 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಜಾವಾ ಮೋಟಾರ್‌ಸೈಕಲ್ BS6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಜಾವಾ ಮೋಟಾರ್‌ಸೈಕಲ್ 1.74 ಹಾಗೂ 1.83 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇದೀಗ ಜಾವಾ ಮೋಟಾರ್‌ಸೈಕಲ್ ಇದೀಗ ಯೂರೋಪ್‌ಗೆ ವಿಸ್ತರಣೆಯಾಗುತ್ತಿದೆ. ಯೂರೋಪ್‌ನಲ್ಲಿ ಕೊರೋನಾ ವೈರಸ್ ಆರ್ಭಟ ಮುಗಿದ ಬೆನ್ನಲ್ಲೇ ಜಾವಾ ಮೋಟಾರ್‌ಸೈಕಲ್ ಬಿಡುಗಡೆಯಾಗಲಿದೆ.

ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!.

ಯೂರೋಪ್‌ನಲ್ಲಿ 350 ಸಿಸಿ ಮೋಟಾರ್‌ಬೈಕ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಹೆಚ್ಚಿನ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಭಾರತದಲ್ಲಿನ ಶಾಕ್ ಬಳಿಕ ಯೂರೋಪ್‌ನಲ್ಲೂ ರಾಯಲ್ ಎನ್‌ಫೀಲ್ಡ್ ಚಿಂತೆಗೆ ಗುರಿಯಾಗಿದೆ. ಜಾವಾ ಯುರೋಪ್‌ನಲ್ಲೂ ಮೋಡಿ ಮಾಡಿದರೆ ರಾಯಲ್ ಎನ್‌ಫೀಲ್ಡ್‌ಗೆ ತೀವ್ರ ಪೈಪೋಟಿ ಎದುರಾಗಲಿದೆ ಅನ್ನೋ ಆತಂಕ ಶುರುವಾಗಿದೆ.

ಜಾವಾ ಬೈಕ್ 293 ಸಿಸಿ,ಲಿಕ್ವಿಡ್ ಕೂಲ್ಡ್, DOHC ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು,  27bhp ಪವರ್ ಹಾಗೂ  28Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇನ್ನು ಜಾವಾ ಪೆರಾಕ್ 334cc ಎಂಜಿನ್ ಹೊಂದಿದೆ.

click me!