ಹೊಂಡಾ ಸಿಟಿ ಕಾರಿಗೆ MLA ಪಾಸ್, ಲಾಕ್‌ಡೌನ್ ಉಲ್ಲಂಘಿಸಿದ 20ರ ಯುವಕ ಕೊನೆಗೂ ಅರೆಸ್ಟ್!

By Suvarna News  |  First Published May 3, 2020, 3:15 PM IST

ಲಾಕ್‌ಡೌನ್ ಕಾರಣ ರಸ್ತೆಗಳೆಲ್ಲಾ ಖಾಲಿ ಖಾಲಿ. ಹಲವರು ಪೊಲೀಸರ ಕಣ್ತಪ್ಪಿಸಿ ಲಾಂಗ್ ಡ್ರೈವ್ ಪ್ರಯತ್ನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ನಕಲಿ ಪೊಲೀಸ್ ಪಾಸ್ ಮೂಲಕ ತಿರುಗಾಡಿದ್ದಾರೆ. 20 ಯುವಕ ತನ್ನ ಹೊಂಡಾ ಸಿಟಿ ಕಾರಿಗೆ MLA ಪಾಸ್ ಅಂಟಿಸಿ ಲಾಕ್‌ಡೌನ್ ಉಲ್ಲಂಘಿಸಿದ್ದಾನೆ. ಆದರೆ ಯುವಕನ ಆಟ ಹೆಚ್ಚು ದಿನ ನಡೆಯಲಿಲ್ಲ.
 


ಮುಂಬೈ(ಮೇ.03): ಲಾಕ್‌ಡೌನ್ ಸಮಯದಲ್ಲಿ ತೆಪ್ಪಗೆ ಮನೆಯಲ್ಲಿರುವುದು ಬಿಟ್ಟು ಹಲವರಿಗೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವ ಬಯಕೆ. ಇದಕ್ಕಾಗಿ ಪೊಲೀಸರ ಕಣ್ತಪ್ಪಿಸಿ ಹಲವು ಪ್ರಯತ್ನಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದೀಗ ಮುಂಬೈನ ಅಂಧೇರಿಯ 20ರ ಯುವಕ ಸಬೆಟ್ ಅಸ್ಲಾಂ ಶಾ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಶಾಸಕನ ಪಾಸ್ ಕಾರಿಗೆ ಅಂಟಿಸಿ ತಿರುಗಾಟ ಆರಂಭಿಸಿದ್ದಾನೆ. ಆದರೆ ಕೊನೆಗೂ ಪೊಲೀಸರು ಅಸ್ಲಾಂ ಶಾ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಲಾಕ್‌ಡೌನ್ ವೇಳೆ BMW ಕಾರಿನಲ್ಲಿ ಜಾಲಿ ರೈಡ್, ಓವರ್ ಬಿಲ್ಡಪ್ ನೀಡಿ ಅರೆಸ್ಟ್ ಆದ ಯುವಕ!..

Tap to resize

Latest Videos

undefined

ಅಸ್ಲಾಂ ಶಾ ತನ್ನ ಹೊಂಡಾ ಸಿಟಿ ಕಾರಿಗೆ MLA ಸ್ಟಿಕ್ಕರ್ ಅಂಟಿಸಿದ್ದಾನೆ. ಬಳಿಕ ಲಾಕ್‌ಡೌನ್ ಸಮಯದಲ್ಲಿ ರಾಜಾರೋಷವಾಗಿ ತಿರುಗಾಟ ಆರಂಭಿಸಿದ್ದಾನೆ. ಮುಂಬೈ ಹೊರವಲಯದಲ್ಲಿ ಲಾಂಗ್ ಟ್ರಿಪ್ ಹೋಗಿದ್ದಾನೆ. ಮರಳಿ ಬರುವಾಗ ಕೆಲ ಚೆಕ್‌ಪೋಸ್ಟ್ ಸಲೀಸಾಗಿ ದಾಡಿದ ಅಸ್ಲಾಂ ಶಾ, ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇನಲ್ಲಿನ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಅನುಮಾನದಿಂದ ನಿಲ್ಲಿಸಿದ್ದಾರೆ.

ತೆಪ್ಪಗಿರುವುದು ಬಿಟ್ಟು ಲಾಕ್‌ಡೌನ್ ವೇಳೆ ಓವರ್ ಸ್ವೀಡ್; 4.5 ಲಕ್ಷ ವಾಹನ ಮೇಲೆ ಫೈನ್!

ಚಿಕ್ಕ ಹುಡುಗ, MLA ಸ್ಟಿಕ್ಕರ್ ಇರುವ ಕಾರು ಡ್ರೈವ್ ಮಾಡುತ್ತಿದ್ದಾನೆ. ಇಷ್ಟೇ ಅಲ್ಲ ಕಾರಿನಲ್ಲಿ ಯಾರೂ ಇಲ್ಲ. ಹೀಗಾಗಿ ಪೊಲೀಸರು ಅಸ್ಲಾಂ  ಕಾರು ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಆರಂಭದಲ್ಲಿ ತಾನು  MLA ಕಾರನ್ನು ಖರೀದಿಸಿದ್ದೇನೆ. ಹೀಗಾಗಿ ಸ್ಟಿಕ್ಕರ್ ಹಾಗೇ ಉಳಿದುಕೊಂಡಿದೆ. ತೆಗೆಯಲು ಸಾಧ್ಯವಾಗುತ್ತಿಲ್ಲ. ನೀವು ಟ್ರೈ ಮಾಡಿ ಎಂದು ಪೊಲೀಸರಿಗೆ ಹೇಳಿದ್ದಾನೆ. ಈತನ ಕಾರಣ ನೋಡಿ ಪೊಲೀಸರ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

ಕಾರಿನಿಂದ ಇಳಿಸಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ತಾನು ಉದ್ದೇಶಪೂರ್ವಕವಾಗಿ ಸ್ಟಿಕ್ಕರ್ ಅಂಟಿಸಿರುವುದಾಗಿ ಹೇಳಿದ್ದಾನೆ. ಇತ್ತ ಪೊಲೀಸರು ಲಾಕ್‌ಡೌನ್ ನಿಯಮ ಉಲ್ಲಂಘನೆ, ಉದ್ದೇಶ ಪೂರ್ವಕವಾಗಿ ಕೊರೋನಾ ವೈರಸ್ ಹರಡುವ ಪ್ರಯತ್ನ, ಸರ್ಕಾರಿ ಲಾಂಛನವನ್ನು ದುರುಪಯೋಗ, ಶಾಸಕನ ಅಧಿಕಾರವನ್ನು ದುರ್ಬಳಕೆ ಸೇರಿದಂತೆ ಹಲವು ಕೇಸ್ ದಾಖಲಿಸಿದ್ದಾರೆ. ಇಷ್ಟೇ ಅಲ್ಲ ದುಬಾರಿ ದಂಡ ಕೂಡ ಹಾಕಿದ್ದಾರೆ. 

ಅಸ್ಲಾಂ ಶಾನನನ್ನು ಬಂಧಿಸಿದ ಪೊಲೀಸ್ ಕಾರನ್ನು ಸೀಝ್ ಮಾಡಿದ್ದಾರೆ. ಬಳಿಕ ಬೇಲ್ ಮೇಲೆ ಬಿಡುಗಡೆ  ಮಾಡಿದ್ದಾರೆ. ಈ ವೇಳೆ ಯುವಕನಿಗೆ ಮಹಾರಾಷ್ಟ್ರದಲ್ಲಿನ ಕೊರೋನಾ ವೈರಸ್ ಪ್ರಕರಣ ಹಾಗೂ ನಿರ್ಲಕ್ಷ್ಯದಿಂದಾಗುವ ಅನಾಹುತಗಳ ಕುರಿತು 2 ಗಂಟೆ ಕ್ಲಾಸ್ ತೆಗೆದುಕೊಂಡಿದ್ದಾರೆ.

click me!