ಬೆಂಗಳೂರು(ಅ.15): ಇಸುಜು ಮೋಟರ್ಸ್ ಇಂಡಿಯಾ ಬಹುನಿರೀಕ್ಷಿತ BSVI ಮಾದರಿಯ ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಾಣಿಜ್ಯ ವಾಹನಗಳ ಶ್ರೇಣಿಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕಂಪನಿಯು 1,710 ಟನ್ ಡಿ-ಮ್ಯಾಕ್ಸ್ ಸೂಪರ್ ಸ್ಟ್ರಾಂಗ್ ಅನ್ನು ವಾಣಿಜ್ಯ ವಾಹನ ವಿಭಾಗದಲ್ಲಿ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಅನುಕೂಲಗಳನ್ನು ಮಾಡಿಕೊಡುತ್ತಿದೆ. ಈ ಹೊಸ ವಾಹನವನ್ನು ಸೇರ್ಪಡೆ ಮಾಡುವ ಮೂಲಕ ಇಸುಜು ಮೋಟರ್ಸ್ ಇಂಡಿಯಾ ಇದೀಗ ಫ್ಲ್ಯಾಟ್ ಡೆಕ್‍ನೊಂದಿಗೆ ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಹೈ-ರೈಡ್, ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್-ಚಾಸಿಸ್, ಎಸ್-ಕ್ಯಾಬ್ ಸ್ಟ್ಯಾಂಡರ್ಡ್-ರೈಡ್, ಎಸ್-ಕ್ಯಾಬ್ ಹೈ-ರೈಡ್ ಮತ್ತು ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಸೂಪರ್ ಸ್ಟ್ರ್ರಾಂಗ್ ವಾಹನಗಳನ್ನು ಇನ್ನೂ ಹೆಚ್ಚು ವೈಶಿಷ್ಟ್ಯತೆಗಳೊಂದಿಗೆ ವ್ಯವಹಾರಗಳು ಮತ್ತು ವೃತ್ತಿಪರ ಅಗತ್ಯತೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿದೆ.
ಡ್ರೈವಿಂಗ್ ಲೈಸೆನ್ಸ್ to ಕ್ರೆಡಿಟ್ ಕಾರ್ಡ್: ಬದಲಾದ 10 ನಿಯಮ!.
2.5 ಲೀಟರ್ ಇಸುಜು 4JA1 ಇಂಜಿನ್ ಶಕ್ತಿಯೊಂದಿಗೆ ಮೇಲ್ಮಟ್ಟಕ್ಕೆ ಹೆಚ್ಚಿಸಲಾಗಿರುವ ಈ ವಾಣಿಜ್ಯ ವಾಹನಗಳು ಆಕ್ರಮಣಕಾರಿ ಸಾಮಥ್ರ್ಯವನ್ನು ಹೊಂದಿವೆ. ಹೊಸ ಸ್ಟೈಲ್ ಮತ್ತು ರೀಫ್ರೆಶ್ ಆಗಿರುವ ವಿನ್ಯಾಸವನ್ನು ಹೊಂದಿವೆ. ಈ ವಿಭಾಗದಲ್ಲಿ ಬಿಡುಗಡೆಯಾಗಿರುವ ಈ ವಾಹನಗಳು ಹಲವಾರು ಪ್ರಥಮಗಳನ್ನು ಹೊಂದಿವೆ. ಡಿ-ಮ್ಯಾಕ್ಸ್ ರೆಗ್ಯುಲರ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಹೊಸ ಗೆಲೇನಾ ಗ್ರೇ ಬಣ್ಣದೊಂದಿಗೆ ಸ್ಲ್ಯಾಶ್ ವೈಟ್ ಮತ್ತು ಟೈಟಾನಿಯಂ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿವೆ. ಈ ಹೊಸ ಡಿ-ಮ್ಯಾಕ್ಸ್ ಸೂಪರ್ ಸ್ಟ್ರಾಂಗ್‍ನ ಬೆಲೆ ರೂ. 8,38,929/- (ಎಕ್ಸ್ ಶೋ ರೂಂ, ಮುಂಬೈ). ಈ ಹಬ್ಬದ ಸಂದರ್ಭದಲ್ಲಿ ಎಲ್ಲಾ ಡಿ-ಮ್ಯಾಕ್ಸ್ ಶ್ರೇಣಿಯ ವಾಹನಗಳಿಗೆ ಈ ಆಕರ್ಷಕ ಪರಿಚಯ ಬೆಲೆ ಇರುತ್ತದೆ.
ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ!
ಈ ರೀಫ್ರೆಶ್ಡ್ ಮಾಡೆಲ್‍ಗಳು ಒಳಾಂಗಣ ಮತ್ತು ಹೊರಾಂಗಣದ ಹೊಸ ವೈಶಿಷ್ಟ್ಯತೆಗಳಿಂದ ಕೂಡಿವೆ. ಇದರ ಹೊರಾಂಗಣದ ವಿನ್ಯಾಸವು ಹೆಚ್ಚು ಏರೋಡೈನಾಮಿಕ್ ಆಗಿದೆ. ಹೊಸ ಗ್ರಿಲ್, ಬಾನೆಟ್ ಮತ್ತು ಬಂಪರ್ ವಿನ್ಯಾಸಗಳು ಮತ್ತಷ್ಟು ಬೋಲ್ಡರ್ ಆಗಿವೆ. ಹೊಸ ಹೆಡ್‍ಲ್ಯಾಂಪ್ ವಿನ್ಯಾಸಗಳು ಆಕರ್ಷಕವಾಗಿದ್ದು, ಟರ್ನ್ ಇಂಡಿಕೇಟರ್‍ಗಳನ್ನು ಹೊಂದಿವೆ.
ಈ ವಿಭಾಗದಲ್ಲಿ ಮೊದಲು ಎನಿಸುವ ಇಸುಜುವಿನ ಎರಡೂ ವಾಹನಗಳು ವೇರಿಯೇಬಲ್ ಜಿಯೋವ್ಮೆಟ್ರಿಕ್ ಟರ್ಬೋಚಾರ್ಜರ್ ಅನ್ನು ಹೊಂದಿದ್ದು, ಪರಿಣಾಮಕಾರಿಯಾಗಿ ಇಂಧನವನ್ನು ಬರ್ನ್ ಮಾಡಲು ಸಹಕಾರಿಯಾಗುತ್ತದೆ. ಎಲ್‍ಎನ್‍ಟಿ (ಲೀನ್ ಎನ್‍ಒಎಕ್ಸ್ ಟ್ರ್ಯಾಪ್), ಡಿಪಿಡಿ(ಡೀಸೆಲ್ ಪರ್ಟಿಕ್ಯುಲರ್ ಡಿಫ್ಯೂಸರ್) ಮತ್ತು ಪಿ-ಎಸ್‍ಸಿಆರ್(ಪ್ಯಾಸಿವ್ ಸೆಲೆಕ್ಟಿವ್ ಕ್ಯಾಟಲಿಸ್ಟ್ ರಿಡಕ್ಷನ್) ನೊಂದಿಗೆ ಸುಸಜ್ಜಿತವಾದ ಆಫ್ಟರ್ ಟ್ರೀಟ್‍ಮೆಂಟ್ ಡಿವೈಸ್‍ಗಳನ್ನು ಹೊಂದಿವೆ. ಈ ವಾಹನಗಳು ಎಕ್ಸಾಸ್ಟ್ ಗ್ಯಾಸ್ ಮತ್ತು ಪರ್ಟಿಕ್ಯುಲೇಟ್ ಮ್ಯಾಟರ್ ಅನ್ನು ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಹೊಂದಿವೆ.
ಈ ಎರಡೂ ಮಾಡೆಲ್‍ಗಳು ಈಗ ಎಂಐಡಿ (ಮಿಡ್-ಇನ್‍ಫಾರ್ಮೇಶನ್ ಡಿಸ್‍ಪ್ಲೇ) ಯನ್ನು ಹೊಂದಿರುವ ವಾಹನಗಳಾಗಿವೆ. ಇದರಲ್ಲಿ ಜಿಎಸ್‍ಐ (ಗೇರ್ ಶಿಫ್ಟ್ ಇಂಡಿಕೇಟರ್) ಹೊಂದಿದ್ದು, ಯಾವುದೇ ಚಾಲನಾ ಪರಿಸ್ಥಿತಿಯಲ್ಲಿ ಚಾಲಕ ಸುಲಭವಾಗಿ ಸೂಕ್ತವಾದ ರೀತಿಯಲ್ಲಿ ಚಾಲನೆ ಮಾಡಬಹುದಾಗಿದೆ. ಇಸುಜುó ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಮತ್ತು ಎಸ್-ಕ್ಯಾಬ್‍ಗಳು ಮಾತ್ರ ಈ ವಿಭಾಗದಲ್ಲಿ ಎಲೆಕ್ಟ್ರಾನಿಕ್‍ನಲ್ಲಿ ನಿಯಂತ್ರಣ ಮಾಡುವ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸಕ್ರ್ಯುಲೇಷನ್) ಅನ್ನು ಹೊಂದಿರುವ ವಾಹನಗಳಾಗಿವೆ.
20 ದೇಶ, 25,000km, ಲಂಡನ್‌ನಿಂದ ಆರಂಭಿಸಿದ ಅತೀ ದೊಡ್ಡ ಟ್ರಿಪ್ ಬೆಂಗಳೂರಿನಲ್ಲಿ ಅಂತ್ಯ
ಇಸುಜು ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ವಿಸ್ತಾರವಾದ ಜಾಗ, ಶಕ್ತಿಶಾಲಿ ಮತ್ತು ಅತ್ಯುತ್ತಮವಾದ ಕಾರ್ಯದಕ್ಷತೆಯಿಂದಾಗಿ ಗ್ರಾಹಕರ ಮನ ಗೆದ್ದಿವೆ. ಈ ಮೂಲಕ ಅವರ ವ್ಯವಹಾರ ಮತ್ತು ಜೀವನಮಟ್ಟವನ್ನು ಮೇಲ್ಪಟ್ಟಕ್ಕೆ ಕೊಂಡೊಯ್ಯುತ್ತಿವೆ. ಇಸುಜುóವಿನಲ್ಲಿ ನಾವು ಭಾರತೀಯ ಮಾರುಕಟ್ಟೆಗೆ ವಿಶ್ವಾಸಾರ್ಹವಾದ ತಂತ್ರಜ್ಞಾನ ಮತ್ತು ತಾಂತ್ರಿಕತೆಯನ್ನು ನೀಡಲು ಬದ್ಧರಾಗಿದ್ದೇವೆ. ಇಸುಜು ತನ್ನ ಕಠಿಣ, ವಿಶ್ವಾಸಾರ್ಹ ಮತ್ತು ದೀರ್ಘ ಬಾಳಿಕೆಯ ವಾಹನಗಳನ್ನು ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿದೆ ಮತ್ತು ನಮ್ಮ ಹೊಸ ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಗುಣಲಕ್ಷ್ಷಣಗಳನ್ನು ನಿರೂಪಿಸುತ್ತವೆ‘‘ ಎಂದು ಇಸುಜು ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ತ್ಸುಗೋ ಫುಕುಮುರಾ ಹೇಳಿದರು.`
ವೇರಿಯೇಬಲ್ ಜಿಯೋಮೆಟ್ರಿ ಟರ್ಬೋಚಾರ್ಜರ್, ಬ್ರೇಕ್ ಓವರ್‍ರೈಡ್ ಸಿಸ್ಟಂ, ಹೊಸ ಮಲ್ಟಿ-ಇನ್‍ಫಾರ್ಮೇಶನ್ ಡಿಸ್‍ಪ್ಲೇ, ಗೇರ್ ಶಿಫ್ಟ್ ಇಂಡಿಕೇಟರ್, ಎಲೆಕ್ಟ್ರಾನಿಕ್ ನಿಯಂತ್ರಿತ ಇಜಿಆರ್ ಮತ್ತು ಸ್ಲೈಡಿಂಗ್ ಕೋ-ಡ್ರೈವರ್ ಸೀಟ್ ಸೇರಿದಂತೆ ಮತ್ತಿತರೆ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ನಮ್ಮ ವಾಹನಗಳು ಇಂತಹ ಸೌಲಭ್ಯಗಳನ್ನು ಹೊಂದಿರುವ ಮೊದಲ ವಾಹನಗಳೆಂಬ ಹೆಗ್ಗಳಿಕೆಯನ್ನು ಹೊಂದಿವೆ ಎಂದು ತ್ಸುಗೋ ಫುಕುಮುರಾ ಹೇಳಿದರು.
ನಮ್ಮ ವಾಹನಗಳು ಸ್ಟೈಲ್, ಶಕ್ತಿಶಾಲಿ ಮತ್ತು ರೋಡ್ ಪ್ರೆಸೆನ್ಸ್‍ಗೆ ಹೇಳಿ ಮಾಡಿಸಿದ ವಾಹನಗಳಾಗಿವೆ. ಇದರ ಜತೆಗೆ ಆರಾಮದಾಯಕತೆ ಮತ್ತು ಸುರಕ್ಷತೆಯನ್ನು ಹೊಂದಿರುವ ವಾಹನಗಳಾಗಿವೆ. ಭಾರತೀಯ ಆಟೋಮೋಟಿವ್ ಮಾರುಕಟ್ಟೆಯು ಬದಲಾವಣೆಯತ್ತ ಸಾಗುತ್ತಿದೆ ಮತ್ತು ಈ ದಿಸೆಯಲ್ಲಿ ನಾವು ನಮ್ಮ ಇತ್ತೀಚಿನ ಆಫರ್‍ಗಳನ್ನು ಭಾರತೀಯ ಗ್ರಾಹಕರಿಗೆ ನೀಡುತ್ತಿದ್ದೇವೆ. ಒಂದು ಹೊಣೆಗಾರಿಕೆಯ ಬ್ರ್ಯಾಂಡ್ ಆಗಿರುವ ನಮ್ಮ ವಾಹನಗಳು ಹೊಸ ಪೀಳಿಗೆಗೆ ಹೊಂದಿಕೊಳ್ಳುವ ರೀತಿಯಲ್ಲಿ ವಾಹನಗಳನ್ನು ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ರೀಫ್ರೆಶ್ಡ್ ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಃSಗಿI ಅನುಸರಣೆಗಳ ಜೊತೆಗೆ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಮೇಲ್ದರ್ಜೆಯಲ್ಲಿವೆ ಎಂದು ಇಸುಜು ಮೋಟರ್ಸ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ ಕೆನ್ ತಕಾಶಿಮಾ ಹೇಳಿದರು.