‌ಸ್ಥಗಿತಗೊಂಡಿದ್ದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆರಂಭ; ಮಾಸ್ಕ್ ಕಡ್ಡಾಯ!

By Suvarna News  |  First Published Jun 10, 2020, 3:44 PM IST

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿಡ್ಡ ರ‍್ಯಾಪಿಡೋ  ಬೈಕ್ ಟ್ಯಾಕ್ಸಿ ಮತ್ತೆ ಆರಂಭಗೊಳ್ಳುತ್ತಿದೆ. 100 ನಗರಗಳಲ್ಲಿ ರ‍್ಯಾಪಿಡೋ ಮತ್ತೆ ಸೇವೆ ಆರಂಭಿಸುತ್ತಿದೆ. ಈ ಬಾರಿ ಕೆಲ ಮಾರ್ಗಸೂಚಿಗಳನ್ನು ರ‍್ಯಾಪಿಡೋ ಅನುಸರಿಸುತ್ತಿದೆ. ಈ ಮೂಲಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ.


ನವದೆಹಲಿ(ಜೂ.10): ಕೊರೋನಾ ವೈರಸ್ ಕಾರಣ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜನತಾ ಕರ್ಫ್ಯೂದಿಂದಿಂದ ಸ್ಥಗಿತಗೊಂಡಿದ್ದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಇದೀಗ ಆರಂಭಗೊಳ್ಳುತ್ತಿದೆ. ಭಾರತದ 100 ನಗರಗಳಲ್ಲಿ ರ‍್ಯಾಪಿಡೋ  ಪುನರ್ ಆರಂಭಗೊಂಡಿದೆ. ಆದರೆ ಆರೋಗ್ಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ರ‍್ಯಾಪಿಡೋ ಮಾಸ್ಕ್ ಕಡ್ಡಾಯ ಸೇರಿದಂತೆ ಕಲ ಮಾರ್ಗಸೂಚಿನಗಳನ್ನು ಪಾಲಿಸುತ್ತಿದೆ.

ಒಂದು ವರ್ಷದಲ್ಲಿ ಒಂದು ಲಕ್ಷ; ದಾಖಲೆ ಬರೆದ ಬೌನ್ಸ್‌ ರೈಡ್‌!

Latest Videos

undefined

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡುವ ಗ್ರಾಹಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇಷ್ಟೇ ಅಲ್ಲ ಆರೋಗ್ಯ ಸೇತು ಆ್ಯಪ್ ಇನ್ಸ್‌ಸ್ಟಾಲ್ ಮಾಡಿರಬೇಕು. ಆರೋಗ್ಯ ಸೇತು ಆ್ಯಪ್ ಮಾಹಿತಿಯನ್ನು ರ‍್ಯಾಪಿಡೋ  ಪರಿಗಣಿಸಲಿದೆ. ಬುಕ್ ಮಾಡಿದ ಗ್ರಾಹಕರು ಮಾಸ್ಕ್ ಧರಿಸದಿದ್ದರೆ, ಫ್ರೀ ರೈಡ್ ಕ್ಯಾನ್ಸಲೇಶನ್ ಅವಕಾಶ ನೀಡಿದೆ. 

ಸ್ಯಾನಿಟೈಸರ್ ಬಳಕೆ, ಹೆಲ್ಮೆಟ್ ಒಳಗಿನ ನೆಟ್ ಕೂಡ ಕಡ್ಡಾಯವಾಗಿದೆ. ಇನ್ನು ಪ್ರತಿ ರೈಡ್‌ಗೂ ಮೊದಲು ಹಿಂಬದಿ ಸವಾರರ ಸೀಟನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. 100 ನರಗಳಲ್ಲಿ ರ‍್ಯಾಪಿಡೋ  ಆರಂಭವಾಗುತ್ತಿರು ಕಾರಣ ಈ ಮೂಲಕ ಆದಾಯ ಗಳಿಸುತ್ತಿದ್ದ 3 ಲಕ್ಷ ಮಂದಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಲಿದೆ ಎಂದು ರ‍್ಯಾಪಿಡೋ  ಹೇಳಿದೆ.

click me!