ಭಾರತದ ಹಳೇ ಸಾರಿಗೆ ಸೈಕಲ್ ರಿಕ್ಷಾ ಇದೀಗ ಹೊಸ ರೂಪ ಪಡೆದಿದೆ. ಇದರೊಂದಿಗೆ ಬೆವರು ಸುರಿಸಿ ದುಡಿಯುತ್ತಿದ್ದ ಸೈಕಲ್ ರಿಕ್ಷಾ ಚಾಲಕರು ಇದೀಗ ಕೊಂಚ ಆರಾಮದಾಯಕವಾಗಿ ಸಂಪಾದನೆ ಮಾಡುತ್ತಿದ್ದಾರೆ.
ಕೋಲ್ಕತಾ(ಅ.30): ಸೈಕಲ್ ರಿಕ್ಷಾ ಭಾರತದ ಅತ್ಯಂತ ಹಳೇಯ ಸಾರಿಗೆ. ಬ್ರಿಟೀಷರ ಕಾಲದಲ್ಲಿ ಸೈಕಲ್ ರಿಕ್ಷಾ ಹೆಚ್ಚು ಪ್ರಸಿದ್ದಿಯಾಗಿತ್ತು. ಸ್ವತಂತ್ರ ಭಾರತ ಆರಂಭದಲ್ಲಿ ಸೈಕಲ್ ರಿಕ್ಷಾವೇ ನಗರದ ಪ್ರಮಖ ಖಾಸಗಿ ಸಾರಿಗೆ ವ್ಯವಸ್ಥೆ. ಆದರೆ ಬರು ಬರುತ್ತಾ ಸೈಕಲ್ ರಿಕ್ಷಾ ಸ್ಥಾನವನ್ನು ಆಟೋ ರಿಕ್ಷಾ ಆಕ್ರಮಿಸಿಕೊಂಡಿತು. ಆದರೂ ಕೋಲ್ಕತಾ ನಗರದಲ್ಲಿ ಹೆಚ್ಚಾಗಿ ಸೈಕಲ್ ರಿಕ್ಷಾ ಕಾಣಸಿಗುತ್ತೆ. ಇದೀಗ ಸೈಕಲ್ ರಿಕ್ಷಾ ಕೂಡ ಆಧುನೀಕರಣಗೊಂಡಿದೆ.
ಇದನ್ನೂ ಓದಿ: ಕೈನೆಟಿಕ್ ಸಫರ್ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ!
ಕೋಲ್ಕತಾದಲ್ಲಿನ ಸೈಕಲ್ ರಿಕ್ಷಾ ಇದೀಗ ಎಲೆಕ್ಟ್ರಿಕ್ ಸೈಕಲ್ ರಿಕ್ಷಾ ಆಗಿ ಬದಲಾಗಿದೆ. ಇಷ್ಟು ದಿನ ಸೈಕಲ್ ತುಳಿದು ಸಂಪಾದನೆ ಮಾಡುತ್ತಿದ್ದ ಸೈಕಲ್ ರಿಕ್ಷಾ ಚಾಲಕರು ಇದೀಗ ಬ್ಯಾಟರಿ ಚಾರ್ಜ್ ಮಾಡಿ, ಹಿಂದಿಗಿಂತ ಸುಲಭವಾಗಿ ಸಂಪಾದನೆ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ದಿನದಿಂದ ದಿನಕ್ಕೆ ಸೈಕಲ್ ರಿಕ್ಷಾಗಳು ಇ ರಿಕ್ಷಾ ಆಗಿ ಬದಲಾಗುತ್ತಿದೆ.
ಇದನ್ನೂ ಓದಿ: ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ-ಪ್ರತಿ ಕಿ.ಮೀಗೆ 50 ಪೈಸೆ!
ಭಾರತದಲ್ಲಿ ಸದ್ಯ 15 ಲಕ್ಷ ಬ್ಯಾಟರಿ ಚಾಲಿತ ರಿಕ್ಷಾಗಳಿವೆ. ಇದಲ್ಲಿ ಇ ಸೈಕಲ್ ರಿಕ್ಷಾ ಅಧೀಕೃತ ಸಂಖ್ಯೆ ಬಹಿರಂಗವಾಗಿಲ್ಲ. ಆದರೆ ದಿನದಿಂದ ದಿನಕ್ಕೆ ಇ ಸೈಕಲ್ ರಿಕ್ಷಾ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರ ಸುಳ್ಳಲ್ಲ. ಇದಕ್ಕೆ ಹಲವು ಕಾರಣಗಳಿವೆ. ಇ ರಿಕ್ಷಾ ಬೆಲೆ ಮಾತ್ರವಲ್ಲ, ಪ್ರಯಾಣದ ಬೆಲೆಯೂ ಕಡಿಮೆ. ಕೋಲ್ಕತಾದಲ್ಲಿ ಆಟೋ ರಿಕ್ಷಾಗಳು ಕನಿಷ್ಠ 12 ರೂಪಾಯಿ ಚಾರ್ಜ್ ಮಾಡಿದರೆ(ಶೇರ್ ಆಟೋ), ಇ ರಿಕ್ಷಾ 10 ರೂಪಾಯಿ ಚಾರ್ಜ್ ಮಾಡುತ್ತದೆ.