5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!

Published : Dec 14, 2018, 04:08 PM IST
5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!

ಸಾರಾಂಶ

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ. ಮೊದಲ ಬುಕ್ ಮಾಡುವವರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಕಡಿಮೆ ಬೆಲೆ, ಮನೆಯಲ್ಲೇ ಚಾರ್ಜಿಂಗ್ ಮಾಡುವ ವ್ಯವಸ್ಥೆ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೋಟರ್‌ನಲ್ಲಿದೆ.  

ನವದೆಹಲಿ(ಡಿ.14): 2019 ರಿಂದ ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟ ಹೆಚ್ಚಾಗಲಿದೆ. ಇದೀಗ 2019ರ ಜನವರಿಯಲ್ಲಿ ಜಪಾನ್ ಮೂಲದ ಒಕಿನಾವ ಸಂಸ್ಥೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಇಂದಿನಿಂದ(ಡಿ.14) ಒಕಿನಾವ ಐ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ.

 

 

ಕೇವಲ 5,000  ರೂಪಾಯಿಗೆ ನೂತನ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಬಹುದು. ಮೊದಲ ಹಂತದಲ್ಲಿ 500 ಸ್ಕೂಟರ್ ಗ್ರಾಹಕರನ್ನ ತಲುಪಲಿದೆ.  ಹೀಗಾಗಿ ಮೊದಲ ಬುಕಿಂಗ್ ಮಾಡುವವರಿಗೆ ಹೆಚ್ಚಿನ ಅದ್ಯತೆ ಸಿಗಲಿದೆ.

ಇದನ್ನೂ ಓದಿ: 2019 ರಿಂದ ಆಟೋ ರಿಕ್ಷಾಗೆ ಹೊಸ ನೀತಿ- ಸಂಕಷ್ಟದಲ್ಲಿ ಮಾಲೀಕರು!

ನೂತನ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜಿಂಗ್ ಮಾಡಲು 2 ರಿಂದ 3 ಗಂಟೆ ಸಮಯ ಸಾಕು. ಒಂದು ಬಾರಿ ಚಾರ್ಜ್ ಮಾಡಿದರೆ 160 ರಿಂದ 180 ಕೀ.ಮಿ ಪ್ರಯಾಣ ಮಾಡಬುಹುದಾಗಿದೆ. ಗರಿಷ್ಠ ವೇಗ 77KMPH.

ಇದನ್ನೂ ಓದಿ: ಶೀಘ್ರದಲ್ಲೇ ಬಿಡುಗಡೆಯಾಗಲಿಗೆ 4 ಹ್ಯಾಚ್‌ಬ್ಯಾಕ್ ಕಾರು-ನಿಮ್ಮ ಆಯ್ಕೆ ಯಾವುದು?

ಒಕಿನಾವ ಪ್ರೈಸ್ ಬೆಲೆ 69,789 ರೂಪಾಯಿ(ಎಕ್ಸ್ ಶೋ ರೂಂ) ಆದರೆ ಒಕಿನಾವ ಐ ಪ್ರೈಸ್ ಬೆಲೆ ಸ್ವಲ್ಪ ಹೆಚ್ಚಾಗಲಿದೆ. ಆದರೆ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದು ಕಡಿಮೆ. ಹೀಗಾಗಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

1100 ಕಿ.ಮೀ ಮೈಲೇಜ್, ಭಾರತದ JSW ನಿಂದ ಜೆಟೂರ್ ಪ್ಲಗ್ ಇನ್ ಹೈಬ್ರಿಡ್ ಕಾರು ಡಿ.3ಕ್ಕೆ ಅನಾವರಣ
ಜನ 80000 EV ಖರೀದಿಸಿದರು, ಈಗ ಅದೇ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಎಂಟ್ರಿ! ಇತರೆ ಕಂಪನಿಗಳು ಶೇಕ್