ಭಾರತದ ಕವಾಸಕಿ ಮೋಟಾರ್ BS6 ಕವಾಸಕಿ Z900 ಬೈಕ್ ಬಿಡುಗಡೆ ಮಾಡಿದೆ. BS4 ಮಾಡೆಲ್ ಬೈಕ್‌ನಿಂದ 29,000 ರೂಪಾಯಿ ಅಧಿಕವಾಗಿದೆ. ಮಾರ್ಚ್‍ನಲ್ಲಿ ಬಿಡುಗಡೆಯಾಗಬೇಕಿದ್ದ ಈ ನೂತನ ಬೈಕ್ ಕೊರೋನಾ ವೈರಸ್ ಕಾರಣ ತಡವಾಗಿ ಭಾರತದಲ್ಲಿ ಲಾಂಚ್ ಆಗಿದೆ.
ನವದೆಹಲಿ(ಸೆ.08): ಕೊರೋನಾ ವೈರಸ್ ಕಾರಣ ಹಲವು ವಾಹನಗಳ ಲಾಂಚ್ ತಡವಾಗಿದೆ. ಆದರೆ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡ ಬಳಿಕ ಹಲವು ವಾಹನಗಳು ಬಿಡುಗಡೆಯಾಗಿದೆ. ಇದೀಗ ಹೊಚ್ಚ BS6 ಕವಾಸಕಿ Z900 ಬೈಕ್ ಬಿಡುಗಡೆಯಾಗಿದೆ. ಭಾರತದಲ್ಲಿ ಇದರಲ್ಲಿ ಬೆಲೆ 7.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಕವಾಸಕಿ ನಿಂಜಾ ZX-6R ಬೈಕ್ ಬಿಡುಗಡೆ--ಬೆಲೆ 10.49 ಲಕ್ಷ
undefined
BS6 ಕವಾಸಕಿ Z900 ಬೈಕ್‌ನಲ್ಲಿ ಹಲವು ಫೀಚರ್ಸ್ ಸೇರಿಕೊಂಡಿದೆ. ವಿಶೇಷವಾಗಿ ರೈಡ್ ಮೊಡ್ ಹಾಗೂ ಬ್ಲೂಟೂಥ್ ಕನೆಕ್ಟಿವಿಟಿ. ಸ್ಪೋರ್ಟ್, ರೈನ್, ರೋಡ್ ಹಾಗೂ ಮಾನ್ಯುಯೆಲ್ ಎಂಬ ನಾಲ್ಕು ರೈಡಿಂಗ್ ಮೊಡ್ ಈ ಬೈಕ್‌ನಲ್ಲಿದೆ. ಇದರ ಜೊತೆಗೆ 3 ಲೆವೆಲ್ ಟ್ರಾಕ್ಷನ್ ಕಂಟ್ರೋಲ್ ಹಾಗೂ ಎರಡು ಪವರ್ ಮೊಡ್ ಈ ಬೈಕ್‌ನಲ್ಲಿದೆ.
BS6 ಕವಾಸಕಿ Z900 ಬೈಕ್‌ನಲ್ಲಿ 4.2 ಇಂಚಿನ TFT ಇನ್ಸುಟ್ರುಮೆಂಟ್ ಕನ್ಸೋಲ್ ಹಾಗೂ ಹೊಸ ಕಲರ್ ಡಿಸ್‌ಪ್ಲೇ ಹೊಂದಿದೆ. ಹ್ಯಾಲೋಜಿನ್ ಯುನಿಟ್ ಬದಲು LED ಹೆಡ್‌ಲ್ಯಾಂಪ್ಸ್ ಬಳಸಲಾಗಿದೆ. ಇನ್ನು LED ಟರ್ನ್ ಇಂಡಿಕೇಟರ್ ಹಾಗೂ ಟೈಲ್ ಲೈಟ್ ಹೊಂದಿದೆ.
BS6 ಕವಾಸಕಿ Z900 ಬೈಕ್ 948cc, 4 ಸಿಲಿಂಡರ್ ಹೊಂದಿದ್ದು, 123 bhp ಪವರ್ ಹಾಗೂ 98.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.