ಲಾಂಗ್ ಬೈಕ್ ರೈಡ್ ಮಾಡುವವರು ಕೆಲ ವಿಚಾರಗಳನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಮೂಲಕ ಮತ್ತೆ ಮತ್ತೆ ರೈಡ್ ಮಾಡೋ ಅವಕಾಶ ನಿಮ್ಮದಾಗಿರುತ್ತೆ. ಒಂದು ಸಣ್ಣ ತಪ್ಪಿಗೂ ಭಾರಿ ದಂಡ ತೆರೆಬೇಕಾಗುತ್ತೆ. ಹೀಗಾಗಿ ಲಾಂಗ್ ಬೈಕ್ ರೈಡರ್ಸ್‌ಗೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.
ಬೆಂಗಳೂರು(ನ.23): ಕೆಲ ವರ್ಷಗಳ ಹಿಂದೆ ಲಾಂಗ್ ರೈಡ್ ಸವಾರಿ ಮಾಡಲು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನ ಬಳಸುತ್ತಿದ್ದರು. ಇದೀಗ KTM duke, ಕವಾಸಕಿ, ಹೊಂಡಾ ಸೇರಿದಂತೆ ಹಲವು ಸ್ಪೋರ್ಟ್ಸ್ ಬೈಕ್‌ಗಳು ಲಾಂಗ್ ರೈಡರ್ಸ್‌ಗೆ ಹೇಳಿ ಮಾಡಿಸಿದಂತಿದೆ. ಬೈಕ್ ಯಾವುದೇ ಆಗರಲಿ, ಲಾಂಗ್ ರೈಡ್ ಮಾಡೋ ಮುನ್ನ ಮುಂಜಾಗ್ರತೆ ವಹಿಸಬೇಕು. ಲಾಂಗ್ ರೈಡ್ ಮಾಡುವವರಿಗೆ ಕೆಲ ಟಿಪ್ಸ್ ನೀಡಲಾಗಿದೆ.
ಬೇಗನೆ ಆರಂಭಿಸಿ, ಕತ್ತಲೆಯೊಳಗೆ ಮುಗಿಸಿ
ಲಾಂಗ್ ಬೈಕ್ ರೈಡ್ ಮಾಡುವವರು ಬೆಳಗ್ಗೆ ಬೇಗನೆ ಆರಂಭಿಸುವುದು ಸೂಕ್ತ. ಬಳಿಕ ಕತ್ತಲೆಯೊಳಗೆ ರೈಡ್ ಮುಗಿಸುವುದು ಇನ್ನೂ ಸೂಕ್ತ. ರಾತ್ರಿ ಬೈಕ್ ರೈಡ್ ಒಳಿತಲ್ಲ. ಟ್ರಕ್ ಹಾಗೂ ಘನ ವಾಹನಗಳು ರಾತ್ರಿ ವೇಳೆ ಪ್ರಯಾಣ ಮಾಡುತ್ತವೆ. ಇಷ್ಟೇ ಅಲ್ಲ ರಾತ್ರಿ ಬೈಕ್‌ನಲ್ಲಿ ಅಥವಾ ಸವಾರರಿಗೆ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ ಸಹಾಯಕ್ಕೆ ಹತ್ತಿರ ಯಾರು/ಯಾವುದೂ ಇರುವುದಿಲ್ಲ.
undefined
ಇಂಧನ ರಿವಸರ್ವ್ ಬಿದ್ದ ಕೂಡಲೇ ಭರ್ತಿ ಮಾಡಿ
ಲಾಂಗ್ ರೈಡ್ ಮಾಡುವವರು ಆರಂಭಕ್ಕೂ ಮೊದಲು ಸಹಜವಾಗಿ ಇಂಧನ ಭರ್ತಿ ಮಾಡುತ್ತಾರೆ. ಆದರೆ ಲಾಂಗ್ ರೈಡ್ ವೇಳೆ ಇಂಧನ ರಿಸರ್ವ್ ಬಿದ್ದರೆ ಅಥವಾ ರಿಸರ್ವ್‌ನಲ್ಲಿದ್ದರೆ, ಕೂಡಲೇ ಭರ್ತಿ ಮಾಡಿಕೊಳ್ಳುವುದು ಒಳಿತು. ಸಂಪೂರ್ಣ ಖಾಲಿಯಾಗುವವರೆಗೆ ಕಾಯಬೇಡಿ. ಕೆಲವೊಮ್ಮೆ ನೀವು ಪ್ರಯಾಣ ಮಾಡೋ ದಾರಿಯಲ್ಲಿ ಹೆಚ್ಚು ಪೆಟ್ರೋಲ್ ಬಂಕ್ ಇರುವುದಿಲ್ಲ.
ರೈಡ್ ವೇಳೆ ಸಣ್ಣ ವಿಶ್ರಾಂತಿ ಅಗತ್ಯ
ಲಾಂಗ್ ರೈಡ್ ಮಾಡುವವರು ಆರಂಭದಲ್ಲೇ ಕೆಲ ಸ್ಟಾಪ್ ನೀಡುತ್ತಾರೆ. ಆದರೆ ಬಳಿಕ ಒಂದೇ ಸಮನೆ ರೈಡ್ ಮಾಡಿ ಗುರಿ ತಲುಪುವ ಸಾಹಸಕ್ಕೆ ಇಳಿಯುತ್ತಾರೆ. ಇದು ತಪ್ಪು. ನಿಮ್ಮ ಲಾಂಗ್ ರೈಡ್‌ನಲ್ಲಿ ಹೆಚ್ಚು ಸ್ಟಾಪ್‌ಗಳಿರಲಿ. ಹೆಚ್ಚು ನೀರು ಕುಡಿಯಿರಿ. ಬೈಕ್ ಜೊತೆಗೆ ನಿಮ್ಮ ದೇಹದಲ್ಲಿ ನೀರು ಕಡಿಮೆಯಾಗದಂತೆ ನೋಡಿಕೊಳ್ಳಿ.
ರೈಡ್‌ಗೂ ಮುನ್ನ ಬೈಕ್ ಚೆಕ್ ಮಾಡಿಸಿಕೊಳ್ಳಿ
ರೈಡ್ ಆರಂಭಿಸುವ ಮುನ್ನ ಮೆಕಾನಿಕ್ ಜೊತೆ ನಿಮ್ಮ ಬೈಕ್ ಪರೀಕ್ಷಿಸಿ. ಯಾವುದೇ ತಾಂತ್ರಿಕ ಸಮಸ್ಯೆ, ಚಕ್ರದ ಗಾಳಿ, ಎಂಜಿನ್ ಆಯಿಲ್, ಚೈನ್ ಸಾಕೆಟ್, ಹೆಡ್ ಲೈಟ್, ಇಂಡಿಕೇಟರ್ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳ ಕುರಿತು ಮೆಕಾನಿಕ್‌ನಿಂದ ಪರೀಕ್ಷಿಸಿ.
ರೈಡಿಂಗ್ ಜಾಕೆಟ್ /ಫುಲ್ ಜಾಕೆಟ್ ಬಳಸಿ
ಲಾಂಗ್ ರೈಡ್ ಮಾಡುವವರು ರೈಡಿಂಗ್ ಜಾಕೆಟ್ ಬಳಸುವುದು ಸೂಕ್ತ. ರೈಡಿಂಗ್ ಜಾಕೆಟ್ ಇಲ್ಲದಿದ್ದರೆ, ಫುಲ್ ಜಾಕೆಟ್ ಬಳಸಿ. ಬ್ರಾಂಡೆಡ್ ಜಾಕೆಟ್ ಖರೀದಿಸುವುದು ಒಳಿತು. ಜಾಕೆಟ್ ಮೇಲೆ ಒಂದು ಬಾರಿ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಸುರಕ್ಷೆತೆ ಸಿಗಲಿದೆ. ಸಹಜವಾಗಿ ರೈಡಿಂಗ್ ಜಾಕೆಟ್ ಸಾಮಾನ್ಯ ಬೈಕ್ ಜಾಕೆಟ್‌ಗಿಂತ ದುಬಾರಿಯಾಗಿರುತ್ತೆ.
ಲಗೇಜ್ ಕಡಿಮೆ ಇರಲಿ
ಬೈಕ್ ರೈಡ್ ಮಾಡುವವರು ಹೆಚ್ಚಿನ ಲಗೇಜ್ ಅಥವಾ ಹೆಚ್ಚಿನ ಲಗೇಜ್ ಭಾರ ಒಯ್ಯುವುದು ಸೂಕ್ತವಲ್ಲ. ನಿಮ್ಮ ಪ್ರಯಾಣ 3 ಅಥವಾ 4 ದಿನಕ್ಕಿಂತ ಹೆಚ್ಚಿದ್ದರೂ ಹೆಚ್ಚಿನ ಲಗೇಜ್ ಬೈಕ್‌ನಲ್ಲಿಡುವುದು ಸೂಕ್ತವಲ್ಲ. ಇದರಿಂದ ನಿಮಗೂ ಹಾಗೂ ಬೈಕ್‌ಗೂ ಹೆಚ್ಚಿನ ಶ್ರಮ.