ಸಣ್ಣ ಕಾರು ವಿಭಾಗದಲ್ಲಿ ಕ್ರಾಂತಿ ಮಾಡುವ ಸೂಚನೆ ನೀಡಿರುವ ಮಾರುತಿ ಸುಜುಕಿಯ ಮಿನಿ SUV ಕಾರು, ಇದೀಗ 10 ದಿನದಲ್ಲಿ ದಾಖಲೆ ಬರೆದಿದೆ. ನೂತನ ಕಾರಿನ ದಾಖಲೆ ಹಾಗೂ ಇತರ ವಿವರ ಇಲ್ಲಿದೆ.
ನವದೆಹಲಿ(ಅ.12): ಮಾರುತಿ ಸುಜುಕಿ ಮಿನಿ SUV ಕಾರು S ಪ್ರೆಸ್ಸೋ ಬಿಡುಗಡೆಯಾದ 10 ದಿನದಲ್ಲೇ ದಾಖಲೆ ಬರೆದಿದೆ. ಬಹುನಿರೀಕ್ಷಿತ S ಪ್ರೆಸ್ಸೋ ಕಾರು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿತ್ತು. ಇದೀಗ ಅಕ್ಟೋಬರ್ 10ಕ್ಕೆ ಬರೊಬ್ಬರಿ 10,000 ಕಾರುಗಳು ಬುಕಿಂಗ್ ಆಗಿವೆ. ಕಡಿಮೆ ಅವದಿಯಲ್ಲಿ ಗರಿಷ್ಟ ಬುಕಿಂಗ್ ಆದ ಸಣ್ಣ ಕಾರು ಅನ್ನೋ ಹೆಗ್ಗಳಿಕೆಗೆ S ಪ್ರೆಸ್ಸೋ ಪಾತ್ರವಾಗಿದೆ.
ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!
undefined
ಮಾರುತಿ ಅಲ್ಟೋ, ರೆನಾಲ್ಟ್ ಕ್ವಿಡ್ ಸೆಗ್ಮೆಂಟ್ ರೇಂಜ್ ಕಾರು ಇದಾಗಿದೆ. ಆದರೆ ಮಿನಿ SUV ಲುಕ್ ನೀಡಲಾಗಿದೆ. ಮಾರುತಿ ಬ್ರೆಜಾ ಕಾರಿನಂತೆ ಹೋಲುತ್ತಿರುವ ನೂತನ ಕಾರು, ಸಣ್ಣ ಕಾರು ವಿಭಾಗದಲ್ಲಿ ಕ್ರಾಂತಿ ಮಾಡುವ ಸೂಚನೆ ನೀಡಿದೆ.
ಇದನ್ನೂ ಓದಿ: ವರ್ನಾ, ಹೊಂಡಾ ಸಿಟಿ ಹಿಂದಿಕ್ಕಿ ದಾಖಲೆ ಬರೆದ ಮಾರುತಿ ಸಿಯಾಝ್!
ಮಾರುತಿ S ಪ್ರೆಸ್ಸೋ ಕಾರಿನ ಬೆಲೆ 3.62 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಟಾಪ್ ವೇರಿಯೆಂಟ್ ಬೆಲೆ 4.94 ಲಕ್ಷ ರೂಪಾಯಿಎಕ್ಸ್ ಶೋ ರೂಂ). ಇತರ ಸಣ್ಣ ಕಾರುಗಳಿಗೆ ಹೋಲಿಸಿದರೆ, ಹೆಚ್ಚು ಸ್ಥಳವಕಾಶ, ಬೂಟ್ ಸ್ಪೇಸ್, ರೆಡ್ ರೂಂ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಉತ್ತಮವಾಗಿದೆ.
ಇದನ್ನೂ ಓದಿ: ಮಾರುತಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ!
ಆಲ್ಟೋ ಕೆ10 ಕಾರಿನಲ್ಲಿ ಬಳಲಾಗಿರುವ 1.0 ಲೀಟರ್ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. 67 bhp ಪವರ್ ಹಾಗೂ 90 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. BS6 ಎಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ AMT ಆಯ್ಕೆಯೂ ಲಭ್ಯವಿದೆ.