ಟಾಟಾ ಮೋಟಾರ್ಸ್ ಕಾರುಗಳ ಬೆಲೆ ಹೆಚ್ಚಳವಾಗುತ್ತಿದೆ. 10 ಸಾವಿರ ರೂಪಾಯಿಂದ 50 ಸಾವಿರ ರೂಪಾಯಿ ವರೆಗೆ ಕಾರಿನ ಬೆಲೆ ಹೆಚ್ಚಳವಾಗಲಿದೆ. ಬೆಲೆ ಹೆಚ್ಚಳ ಮಾಹಿತಿ ಇಲ್ಲಿದೆ.
ಮುಂಬೈ(ಡಿ.07): ಕಿಯಾ ಮೋಟಾರ್ಸ್ ಘೋಷಣೆ ಬೆನ್ನಲ್ಲೇ ಇದೀಗ ಟಾಟಾ ಮೋಟಾರ್ಸ್ ಕೂಡ ಪ್ಯಾಸೆಂಜರ್ ವಾಹನಗಳ ಬೆಲೆ ಹೆಚ್ಚಳ ಮಾಡುತ್ತಿದೆ. 2020ರ ಜನವರಿಯಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಟಾಟಾ ಮೋಟಾರ್ ಪ್ಯಾಸೆಂಜರ್ ವಾಹನ ಅಧ್ಯಕ್ಷ ಮಯಾಂಕ್ ಪರೀಕ್ ಬೆಲೆ ಹೆಚ್ಚಳ ಕುರಿತು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಡಿ.17ಕ್ಕೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅನಾವರಣ; ಬೆಂಗಳೂರಿನಲ್ಲಿ ಲಭ್ಯ!.
undefined
ಟಾಟಾ ಟಿಯಾಗೋ, ಟಿಗೋರ್, ನೆಕ್ಸಾನ್, ಹ್ಯಾರಿಯರ್ ಸೇರಿದಂತೆ ಎಲ್ಲಾ ಟಾಟಾ ಪ್ಯಾಸೆಂಜರ್ ವಾಹನದ ಬೆಲೆ ಹೆಚ್ಚಳವಾಗಗಲಿದೆ. 10,000 ರೂಪಾಯಿಗಳಿಂದ ಗರಿಷ್ಠ 50,000 ರೂಪಾಯಿ ವರೆಗೆ ಬೆಲೆ ಹೆಚ್ಚಳವಾಗೋ ಸಾಧ್ಯತೆ ದಟ್ಟವಾಗಿದೆ. ಬೆಲೆ ಹೆಚ್ಚಳದಿಂದ ಟಾಟಾ ಹ್ಯಾರಿಯರ್ ಹಾಗೂ ಟಾಟಾ ಹೆಕ್ಸಾ ಮತ್ತಷ್ಟು ದುಬಾರಿಯಾಗಲಿದೆ.
ಇದನ್ನೂ ಓದಿ: ಬಲೆನೊ, ಐ20 ಕಾರಿನ ಪ್ರತಿಸ್ಪರ್ಧಿ; ಟಾಟಾ ಅಲ್ಟ್ರೋಜ್ ಕಾರಿನ ವಿಡಿಯೋ ಬಹಿರಂಗ!
ಕಚ್ಚಾ ವಸ್ತುಗಳ ಬೆಲೆ ಏರಿಕೆ, ಆಮದು ಸುಂಕ, GST(ತೆರಿಗೆ) ಹಾಗೂ BS6 ಎಂಜಿನ್ ಅಪ್‌ಗ್ರೇಡ್‌ನಿಂದ ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಬೇಕಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಟಾಟಾ ಈಗಾಗಲೇ ಅಲ್ಟ್ರೋಝ್ ಕಾರು ಅನಾವರಣ ಮಾಡಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಬೆಲೆ ಹೆಚ್ಚಳದಿಂದ ಅಲ್ಟ್ರೋಜ್ ಕಡಿಮೆ ಬೆಲೆ ಹಣೆ ಹಟ್ಟಿ ಕೈತಪ್ಪುವ ಸಾಧ್ಯತೆ ಇದೆ.