ಕಳ್ಳರ ಮಾಸ್ಟರ್ ಪ್ಲಾನ್- ಶೋ ರೂಂನಿಂದ ಹ್ಯುಂಡೈ ಕ್ರೆಟಾ ಕಳ್ಳತನ!

Published : May 16, 2019, 03:58 PM IST
ಕಳ್ಳರ ಮಾಸ್ಟರ್ ಪ್ಲಾನ್- ಶೋ ರೂಂನಿಂದ ಹ್ಯುಂಡೈ ಕ್ರೆಟಾ ಕಳ್ಳತನ!

ಸಾರಾಂಶ

ಹ್ಯುಂಡೈ ಕ್ರೆಟಾ ಶೋ ರೂಂ ನಿಂದಲೇ ಕ್ರೆಟಾ ಕಾರನ್ನು ಕದ್ದ ಘಟನೆ ನಡೆದಿದೆ. ಕಾರು ಖರೀದಿಸೋ ನೆಪದಲ್ಲಿ ಶೋ ರೂಂ ಪ್ರವೇಶಿಸಿದ ಕಳ್ಳರು, ಕಾರು ಕದ್ದಿದ್ದು ಹೇಗೆ? ಇಲ್ಲಿದೆ ವಿವರ.

ಗ್ರೆಟರ್ ನೊಯ್ಡಾ(ಮೇ.16): ಅದೆಷ್ಟೇ ಎಚ್ಚರದಿಂದ ಇದ್ದರೂ ಚಾಲಾಕಿ ಕಳ್ಳರು ಯಾಮಾರಿಸಿ ಕಳ್ಳತನ ಮಾಡುತ್ತಾರೆ. ಟೆಸ್ಟ್ ಡ್ರೈವ್ ನೆಪದಲ್ಲಿ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ ಕಾರನ್ನೇ ಕದ್ದ ಘಟನೆ ನಡೆದಿದೆ. ಗ್ರೇಟರ್ ನೋಯ್ಡಾದ ಹ್ಯಂಡೈ ಶೋ ರೂಂನಲ್ಲಿ ಈ ಘಟನೆ ನಡೆದಿದೆ. 

ಇದನ್ನೂ ಓದಿ: ನ್ಯೂಜನರೇಶನ್ BMW X5 ಕಾರು ಬಿಡುಗಡೆಗೆ!

ಕ್ರೆಟಾ ವಾಹನ ಖರೀದಿಸುವ ನೆಪದಲ್ಲಿ ಶೋ ರೂಂ ಒಳ ಹೊಕ್ಕ  ಮೂವರು ಯುವಕರು, ಕ್ರೆಟಾ ವಾಹನ ಪರಿಶೀಲಿಸಿದ್ದಾರೆ. ವಾಹನ ಸ್ಟಾರ್ಟ್ ಮಾಡಲು ಹೇಳಿದ್ದಾರೆ. ಅಷ್ಟರಲ್ಲೇ ಪಿಸ್ತೂಲ್ ತೆಗೆದ ಯುವಕರು ಸೇಲ್ಸ್‌ಮ್ಯಾನ್ ಹೆದರಿ ಕಾರು ಹತ್ತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಇಲ್ಲದಿದ್ರೆ ಪೆಟ್ರೋಲ್ ಕೂಡ ಸಿಗಲ್ಲ- ಜೂನ್ 1 ರಿಂದ ಹೊಸ ನೀತಿ!

ಕಂಗಾಲಾದ ಶೋ ರೂಂ ಸಿಬ್ಬಂದಿ ತಕ್ಷಣ ಮಾಲೀಕರಿಗೆ ವಿಚಾರ ತಿಳಿಸಿದ್ದಾರೆ. ಅಷ್ಟೇ ಅಲ್ಲ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕಾರ್ಯಚಣೆಗೆ ಇಳಿದಿರುವ ಪೊಲೀಸರು ಶೀಘ್ರದಲ್ಲೇ ಕಾರು ಹಾಗೂ ಕಳ್ಳರನ್ನು ಬಂಧಿಸುವುದಾಗಿ ಹೇಳಿದ್ದಾರೆ. 
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ