ಡ್ರೈವಿಂಗ್ ಲೈಸೆನ್ಸ್ ಅರ್ಹತೆ ಗಿಟ್ಟಿಸಿಕೊಳ್ಳೋ ಮೊದಲೇ ವಾಹನ ಚಲಾಯಿಸಿದರೆ ಭಾರಿ ದಂಡ ಕಟ್ಟಬೇಕಾಗುತ್ತೆ. ಇಲ್ಲಿ ಪ್ರಕರಣ ಮಕ್ಕಳ ಮೇಲೆ ಮಾತ್ರವಲ್ಲ ಪೋಷಕರ ಮೇಲೂ ದಾಖಲಾಗುತ್ತೆ. ಇದೀಗ 172 ಮಂದಿ ಹುಡುಗರ ವಿರುದ್ದ ಕೇಸ್ ದಾಖಲಾಗಿದೆ.
ಹೈದರಾಬಾದ್(ಏ.29): ಭಾರತದಲ್ಲಿ ಬೈಕ್, ಸ್ಕೂಟರ್ ಅಥವಾ ಮೋಟಾರು ವಾಹನ ಚಲಾಯಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಆದರೆ ಹಲವರು ಈ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಾರೆ. ಇನ್ನೂ ಲೈಸೆನ್ಸ್ ಸಿಗದೆ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಪರಿಣಾಮ ಬರೋಬ್ಬರಿ 172 ಹುಡುಗರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ: ಹ್ಯುಂಡೈ ವೆನ್ಯು to ಟಾಟಾ ಅಲ್ಟ್ರೋಜ್- ಬಿಡುಗಡೆಯಾಗಲಿದೆ ಟಾಪ್ 5 ಕಾರು!
undefined
ಹೈದರಾಬಾದ್ ನಗರದಲ್ಲಿ ನಿಗಿಧಿತ ವಯಸ್ಸಿನ ಕೆಳಗಿನ ಯುವಕರು ಬೈಕ್, ಸ್ಕೂಟರ್ ಮೇಲೆ ಸವಾರಿ ಮಾಡುವುದು ಹೆಚ್ಚಾಗಿದೆ. ಇದಕ್ಕೆ ಕಡಿಣವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ನಗರದ ಬಹುತೇಕ ಕಡೆಗಳಲ್ಲಿ ಕಾದು ಕುಳಿತ ಪೊಲೀಸರು ವಯಸ್ಕರಲ್ಲದ, ಲೈಸೆನ್ಸ್‌ಗೆ ಅರ್ಹರಾಗದೇ ವಾಹನ ಚಲಾಯಿಸುತ್ತಿದ್ದ 172 ಹುಡುಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ to ಜಾಕ್ವೆಲಿನ್: ಸೆಲೆಬ್ರೆಟಿಗಳಿಗೆ ಜೀಪ್ ಮೇಲೆ ಪ್ರೀತಿ ಯಾಕೆ?
18 ವರ್ಷಕ್ಕಿಂತ ಮೊದಲೇ ವಾಹನ ಚಲಾಯಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಾಗುತ್ತೆ. 500 ರೂಪಾಯಿ ದಂಡ ಅಥವಾ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತೆ. ಇನ್ನು ಲೈಸೆನ್ಸ್ ಇಲ್ಲದ ಮಕ್ಕಳ ಕೈಗೆ ವಾಹ ನೀಡಿದ ಪೋಷಕರ ಮೇಲೆ ಪ್ರಕರಣ ದಾಖಲಾಗುತ್ತೆ. ಕನಿಷ್ಠ 1000 ರೂಪಾಯಿ ದಂಡ ಅಥವಾ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಎಚ್ಚರ ವಹಿಸುವುದು ಸೂಕ್ತ.