2022ಕ್ಕೆ ಹೊಂಡಾ ಯುಕೆ ಕಾರು ಘಟಕ ಸ್ಥಗಿತ - 3500 ಉದ್ಯೋಗ ಕಡಿತ!

By Web DeskFirst Published Feb 20, 2019, 12:40 PM IST
Highlights

ಹೊಂಡಾ ಕಾರು ಕಂಪೆನಿಯ ಒಂದು ಘಟಕ ಸ್ಥಗಿತಗೊಳ್ಳುತ್ತಿದೆ. ಇದರಿಂದ 3500 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಹೊಂಡಾ ಕಂಪೆನಿಯ ಯಾವ ಕಾರು ಘಟಕ ಸ್ಥಗಿತಗೊಳ್ಳುತ್ತಿದೆ? ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.
 

ಲಂಡನ್(ಫೆ.20): ಜಪಾರ್ ಕಾರು ಕಂಪೆನಿ ಹೊಂಡಾ 2022ಕ್ಕೆ ಲಂಡನ್‌ನಲ್ಲಿರುವ ಕಾರು ಉತ್ಪಾದನ ಘಟಕವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆಧುನಿಕ ತಂತ್ರಜ್ಞಾನದ ಹೊಸ ವಾಹನಗಳ ಉತ್ಪಾದನೆಗಾಗಿ ಲಂಡನ್‌ನಲ್ಲಿರುವ ಸ್ವಿಂಡನ್ ಫ್ಯಾಕ್ಟರಿಯನ್ನ ಸ್ಥಗಿತಗೊಳಿಸಲು ಹೊಂಡಾ ನಿರ್ಧರಿಸಿದೆ.

ಇದನ್ನೂ ಓದಿ: ರಿಜಿಸ್ಟ್ರೇಶನ್, ರೋಡ್ ಟ್ಯಾಕ್ಸ್ ಇಲ್ಲ- ಎಲೆಕ್ಟ್ರಿಕ್ ಕಾರಿಗೆ ಕೇಂದ್ರದ ಬಂಪರ್ ಗಿಫ್ಟ್!

ಸ್ವಿಂಡನ್ ಫ್ಯಾಕ್ಟರಿಯಲ್ಲಿ ಪ್ರತಿ ವರ್ಷ 1.60 ಲಕ್ಷ ಕಾರುಗಳ ಉತ್ಪಾದನೆಯಾಗುತ್ತಿತ್ತು. ಆದರೆ ಫ್ಯಾಕ್ಟರಿ ಹಲವು ಸವಾಲುಗಳನ್ನ ಎದುರಿಸುತ್ತಿದೆ. ಡೀಸೆಲ್ ವಾಹನಕ್ಕೆ ಕಡಿಮೆಯಾದ ಬೇಡಿಕೆ, ಕಟ್ಟು ನಿಟ್ಟಿನಿಯ, ಎಮಿಶನ್ ನಿಯಮ ಬದಲಾವಣೆ ಸೇರಿದಂತೆ ಹಲವು ಸಮಸ್ಯೆಗಳು ಹೊಂಡಾಗೆ ಕಾಡುತ್ತಿದೆ. ಹೀಗಾಗಿ 2022ಕ್ಕೆ ಹೊಂಡಾ ಸ್ವಿಂಡನ್ ಫ್ಯಾಕ್ಟರಿ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ತಾಯಿಗೆ 1.87 ಕೋಟಿ ರೂ ಕಾರು ಗಿಫ್ಟ್ ನೀಡಿದ ಸಲ್ಮಾನ್ - ದುಬಾರಿ ಕಾರಿನ ವಿಶೇಷತೆ ಇಲ್ಲಿದೆ!

ಸ್ವಿಂಡನ್ ಫ್ಯಾಕ್ಟರಿ ಸ್ಥಗಿತಗೊಳ್ಳೋ ಕಾರಣ ಇದರಲ್ಲಿರುವ 3500 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಒಟ್ಟು 4 ವರ್ಷ ಸ್ವಿಂಡನ್ ಫ್ಯಾಕ್ಟರಿ ಕಾರ್ಯನಿರ್ವಹಿಸಲಿದೆ. ಅಷ್ಟರಲ್ಲೇ ಕಂಪೆನಿ ಈಗಾಗಲೇ ಆರ್ಡರ್ ಕಾರುಗಳನ್ನ ಉತ್ಪಾದಿಸಲಿದೆ. 2022ಕ್ಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಹೊಂಡಾ ಹೇಳಿದೆ.
 

click me!