ಪಲ್ಸರ್, R15ಗೆ ಪೈಪೋಟಿ - ಎಪ್ರಿಲಿಯಾ 150 ಸಿಸಿ ಸೂಪರ್ ಬೈಕ್!

Published : Feb 20, 2019, 11:26 AM IST
ಪಲ್ಸರ್, R15ಗೆ ಪೈಪೋಟಿ - ಎಪ್ರಿಲಿಯಾ 150 ಸಿಸಿ ಸೂಪರ್ ಬೈಕ್!

ಸಾರಾಂಶ

ಎಪ್ರಿಲಿಯಾ ಸ್ಕೂಟರ್ ಜನಪ್ರಿಯವಾದ ಬೆನ್ನಲ್ಲೇ, ಇದೀಗ 150 ಸಿಸಿ ಸೂಪರ್ ಬೈಕ್ ಬಿಡುಗಡೆಗೆ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಸೂಪರ್ ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.

ನವದೆಹಲಿ(ಫೆ.20):  ಪಿಯಾಗ್ಗೊ ಮೋಟರ್‌ಸೈಕಲ್ ಇದೀಗ ಭಾರತದಲ್ಲಿ ಸೂಪರ್ ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ. ಈಗಾಗಲೇ ಎಪ್ರಿಲಿಯಾ ಸ್ಕೂಟರ್ ಭಾರತದಲ್ಲಿ ಭಾರತಿ ಜನಪ್ರಿಯತೆಗಳಿಸಿದೆ. ಇದರ ಬೆನ್ನಲ್ಲೇ 150 ಸಿಸಿ ಸೂಪರ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇಟಲಿ ಮೂಲದ ಎಪ್ರಿಲಿಯಾ ಇದೀಗ ಇತರ ದುಬಾರಿ ಬೆಲೆಯ ಸೂಪರ್ ಬೈಕ್‌ಗೆ ಸೆಡ್ಡು ಹೊಡೆಯಲು ನಿರ್ಧರಿಸಿದೆ.

ಇದನ್ನೂ ಓದಿ: ರಿಜಿಸ್ಟ್ರೇಶನ್, ರೋಡ್ ಟ್ಯಾಕ್ಸ್ ಇಲ್ಲ- ಎಲೆಕ್ಟ್ರಿಕ್ ಕಾರಿಗೆ ಕೇಂದ್ರದ ಬಂಪರ್ ಗಿಫ್ಟ್!

ಮೂರು ಮಾಡೆಲ್‌ಗಳಲ್ಲಿ ಎಪ್ರಿಲಿಯಾ 150 ಸಿಸಿ ಸೂಪರ್ ಬೈಕ್ ಬಿಡುಗಡೆ ಮಾಡಲಿದೆ. ಇದು  ಬಜಾಜ್ ಪಲ್ಸರ್ ಹಾಗೂ ಯಮಹಾ R15, ಟಿವಿಎಸ್ ಅಪಾಚೆ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿದೆ. 2018ರ ಆಟೋ ಎಕ್ಸ್ಪೋದಲ್ಲಿ ಸೂಪರ್ ಬೈಕ್ ಅನಾವರಣ ಮಾಡಲಾಗಿತ್ತು.

ಇದನ್ನೂ ಓದಿ: ರೆಡ್ ಸಿಗ್ನಲ್ ದಾಟಿದರೆ ಏನಾಗುತ್ತೆ? - ರಸ್ತೆ ಸಾರಿಗೆ ಇಲಾಖೆ ಹೇಳಿದ ಸತ್ಯ!

2020ರ ವೇಳೆಗೆ ಭಾರದದಲ್ಲಿ ಎಪ್ರಿಲಿಯಾ 150 ಸಿಸಿ ಸೂಪರ್ ಬೈಕ್ ಬಿಡುಗಡೆಯಾಗಲಿದೆ. ಸದ್ಯ ಉತ್ಪಾದನೆಯಲ್ಲಿ ತೊಡಗಿರುವ ಎಪ್ರಿಲಿಯಾ ಪಲ್ಸಾರ್ ಹಾಗೂ ಯಮಹಾ R15 ಬೆಲೆಗೆ ಪೈಪೋಟಿಯಾಗಿ ಬೆಲೆ ನಿರ್ಧರಿಸಲಿದೆ ಎಂದು ಕಂಪೆನಿ ಹೇಳಿದೆ.

PREV
click me!

Recommended Stories

ಸುಜುಕಿ ಇ ಆ್ಯಕ್ಸೆಸ್ vs ಎಥರ್ 450, ಯಾವ ಎಲೆಕ್ಟ್ರಿಕ್ ಸ್ಕೂಟರ್ ಬೆಸ್ಟ್?
ಕೇರಳದಿಂದ ಓದಲು ಬಂದು ಇಲ್ಲಿ ಬೇರೆಯದೇ ಕಾರುಬಾರು: ಕಾರಿನ ಬೆಲೆಗಿಂತಲೂ ದುಬಾರಿ ದಂಡ ವಿಧಿಸಿದ ಪೊಲೀಸರು