ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!

Suvarna News   | Asianet News
Published : Jun 10, 2020, 02:44 PM ISTUpdated : Jun 10, 2020, 02:59 PM IST
ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!

ಸಾರಾಂಶ

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೇತನ ಕಡಿತ, ವ್ಯಾಪಾರ-ವಹಿವಾಟು ಕುಂಠಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಕಾರು ಮಾರಾಟ ಉತ್ತೇಜಿಸಲು ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಾಲ ಸೌಲಭ್ಯ, ಇಎಂಐ ಸೇರಿದಂತೆ ಹಲವು ಆಫರ್ ಘೋಷಿಸುತ್ತಿದೆ. ಇದೀಗ ಹೊಂಡಾ ಕೇವಲ 999 ರೂಪಾಯಿ ಇಎಂಐ ಹಾಗೂ ಸುಲಭ ಸಾಲ ಆಫರ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ನವದೆಹಲಿ(ಜೂ.10): ಹೊಂಡಾ ಕಾರು ಕಂಪನಿ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ. ಗ್ರಾಹಕರು ಸುಲಭವಾಗಿ ಕಾರು ಖರೀದಿಸಲು ಬೇಕಾದ ಎಲ್ಲಾ ಸೌಲಭ್ಯವನ್ನು ಹೊಂಡಾ ಮಾಡಿದೆ ಕೋಟಕ್ ಮಹೀಂದ್ರ ಜೊತೆ ಒಪ್ಪಂದ ಮಾಡಿಕೊಂಡಿರುವ ಹೊಂಡಾ ಮೋಟಾರ್, ಕಡಿಮೆ ಬಡ್ಡಿ, ಕೇವಲ 999 ರೂಪಾಯಿ ತಿಂಗಳ ಕಂತು, ಹಾಗೂ ಸುಲಭ ಸಾಲದ ಆಫರ್ ನೀಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿಗೆ 5 ಸ್ಟಾರ್, ಸೆಕ್ಯೂರಿಟಿ ಸಿಸ್ಟಂನಲ್ಲಿ ಎಲ್ಲರಿಗಿಂತ ಮುಂದೆ!...

ಹೊಂಡಾ ಕಾರು ಖರೀದಿಸುವ ಗ್ರಾಹಕರಿಗೆ 5 ವರ್ಷಗಳ ಸುದೀರ್ಘ ಸಾಲ ಹಾಗೂ 6.99 ಶೇಕಡಾ ಬಡ್ಡಿಯಲ್ಲಿ ಸಾಲ ನೀಡಲಿದೆ. ಆರಂಭಿಕ 3 ತಿಂಗಳ ಕಂತು 1 ಲಕ್ಷ ರೂಪಾಯಿ ಸಾಲಕ್ಕೆ 999 ರೂಪಾಯಿ ಕಂತಿನ ಆಫರ್ ನೀಡಲಾಗಿದೆ. ಇಷ್ಟೇ ಅಲ್ಲ ತಮ್ಮಲ್ಲಿರುವ ಹಳೇ ಕಾರನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ.

BS6 ಹೊಂಡಾ ಅಮೇಜ್ ಬಿಡುಗಡೆ; ಬೆಲೆ 6.10 ಲಕ್ಷ ರೂ!. 

HDFC ಬ್ಯಾಂಕ್ ಜೊತೆಗೂ ಒಪ್ಪಂದ ಮಾಡಿಕೊಂಡಿರುವ ಹೊಂಡಾ ಮೋಟಾರ್, 7 ವರ್ಷಗಳ ಸುದೀರ್ಘ ಸಾಲ, ಬ್ಯಾಲೋನ್ ಇಎಂಐ ಸೇರಿದಂತೆ ವಿಶೇಷ ಆಫರ್ ಘೋಷಿಸಿದೆ. ಹೊಂಡಾ ಜೊತೆಗಿನ ವ್ಯವಹಾರಗಳಲ್ಲಿ  ಕೊರೋನಾ ವೈರಸ್‌ ತಗುಲದಂತೆ ಎಚ್ಚರ ವಹಿಸಲು ಎಲ್ಲಾ ಮುಂಜಾಗ್ರತ ಕ್ರಮಕೈಗೊಳ್ಳಲಿದೆ ಎಂದು ಹೊಂಡಾ ಹೇಳಿದೆ.

ಗ್ರಾಹಕರ ಸುರಕ್ಷತೆ ಅಷ್ಟೇ ಮುಖ್ಯ ಎಂದು ಹೋಡಾ ಹೇಳಿದೆ. ಇಷ್ಟೇ ಅಲ್ಲ ಸುರಕ್ಷಿತ ಪ್ರಯಾಣಕ್ಕೆ ಹೊಂಡಾ ಕಾರು ಸಹಕಾರಿಯಾಗಿದೆ ಎಂದು ಹೊಂಡಾ ಕಂಪನಿ ಹೇಳಿದೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ