ಭಾರತದಿಂದ ಯುರೋಪ್ ಮಾರುಕಟ್ಟೆಗೆ ರಫ್ತು, ಹೊಸ ದಾಖಲೆ ನಿರ್ಮಿಸಿದ ಹೋಂಡಾ!

By Suvarna NewsFirst Published Oct 23, 2020, 5:50 PM IST
Highlights
  • ರಫ್ತು ವಹಿವಾಟಿನಲ್ಲಿ ಹೊಸ ದಾಖಲೆ ಸಾಧಿಸಿದ ಹೋಂಡಾ 2ವೀಲರ್ಸ್ 
  • ಎಸ್‍ಪಿ125 ಬಿಡಿಭಾಗಗಳ ರಫ್ತು (ಸಿಕೆಡಿ ಕಿಟ್ಸ್) ಮೂಲಕ ಯುರೋಪ್ ಮಾರುಕಟ್ಟೆಗೆ  ವಹಿವಾಟು ವಿಸ್ತರಣೆ

ನವದೆಹಲಿ(ಅ.23): ಯುರೋಪ್ ಮಾರುಕಟ್ಟೆಗೆ ತನ್ನ ಹೊಸ ತಲೆಮಾರಿನ ಸುಧಾರಿಸಿದ ಮತ್ತು ಆಕರ್ಷಕ ನೋಟದ 125ಸಿಸಿ  ಮೋಟರ್ ಸೈಕಲ್ ಎಸ್‍ಪಿ125 (SP125) ರಫ್ತು ಆರಂಭಿಸಿರುವುದಾಗಿ ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‍ಎಂಎಸ್‍ಐ) ಪ್ರಕಟಿಸಿದೆ.

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ!.

 ಈ ಮೋಟರ್ ಸೈಕಲ್ ಅನ್ನು  ಸುಸಜ್ಜಿತ ವಾಹನದ ಬದಲಿಗೆ ಬಿಡಿಭಾಗಗಳ ವಿಧಾನದಲ್ಲಿ (CKD ರೂಟ್) ರಫ್ತು ಮಾಡಲಾಗಿದೆ. ಈ ಸಾಧನೆ ಬಗ್ಗೆ ಮಾತನಾಡಿರುವ ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಆಗಿರುವ ಅತುಶಿ ಒಗಾಟಾ, ‘BS4 ನಿಂದ BS6ಗೆ ಬದಲಾಗುವುದು ಭಾರತದ ವಾಹನ ತಯಾರಿಕೆ ಉದ್ದಿಮೆಯ ಪಾಲಿಗೆ ದೊಡ್ಡ ಸವಾಲಿನ ಹಂತವಾಗಿತ್ತು. ಹೋಂಡಾ 2ವೀಲರ್ಸ್ ಇಂಡಿಯಾ, ಈ ಸವಾಲನ್ನು ಮುಂದುವರೆದ ದೇಶಗಳಿಗೆ ರಫ್ತು ಮಾಡುವ ಸದವಕಾಶವನ್ನಾಗಿ ಪರಿವರ್ತಿಸಿತ್ತು ಎಂದರು. 

ಹಬ್ಬದ ಪ್ರಯುಕ್ತ ಸೂಪರ್ 6 ಕೊಡುಗೆ ಘೋಷಿಸಿದ ಹೊಂಡಾ, ಗರಿಷ್ಠ ಉಳಿತಾಯ!

ನಮ್ಮ 125 ಸಿಸಿ ಮೋಟರ್ ಸೈಕಲ್ ಎಸ್‍ಪಿ125 ಅನ್ನು ಈಗ ಯುರೋಪ್‍ಗೆ ರಫ್ತು ಮಾಡಲಾಗುತ್ತಿದೆ.  ಇದು ನಮ್ಮ ಸರ್ವಶ್ರೇಷ್ಠ ಗುಣಮಟ್ಟ, ತಂತ್ರಜ್ಞಾನ ಮತ್ತು ಜಾಗತಿಕ ಮಾರುಕಟ್ಟೆಗೆ   ವಹಿವಾಟು ವಿಸ್ತರಿಸುವ ಬದ್ಧತೆಗೆ ದೊರೆತಿರುವ ಪ್ರಮಾಣಪತ್ರವಾಗಿದೆ. ಭವಿಷ್ಯದಲ್ಲಿಯೂ ಇನ್ನೂ ಅನೇಕ ಹೊಸ ಮಾರುಕಟ್ಟೆಗಳಿಗೆ ನಮ್ಮ ವಹಿವಾಟು ವಿಸ್ತರಣೆಯನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು  ಅತುಶಿ ಒಗಾಟಾ ಹೇಳಿದ್ದಾರೆ.

ಹೊಸ ತಲೆಮಾರಿನ 2000ಕ್ಕೂ ಹೆಚ್ಚು  125 ಸಿಸಿ ಮೋಟರ್ ಸೈಕಲ್ SP125 ನ  ಸಿಕೆಡಿ ಕಿಟ್ಸ್‍ಗಳನ್ನು (ಬಿಡಿಭಾಗಗಳನ್ನು) 2020ರ ಆಗಸ್ಟ್‍ನಿಂದ ಯುರೋಪ್ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದೆ.   SP125 - ಭಾರತದಲ್ಲಿ  (2019ರ ನವೆಂಬರ್‍ನಲ್ಲಿ) ಹೋಂಡಾ ಮೊದಲ ಬಾರಿಗೆ ಪರಿಚಯಿಸಿದ ಬಿಎಸ್6 ಮೋಟರ್ ಸೈಕಲ್ ಇದಾಗಿದೆ. 19 ಹೊಸ ಪೇಟೆಂಟ್ ಅಪ್ಲಿಕೇಷನ್ಸ್‍ಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಹೊಸ ಬ್ರ್ಯಾಂಡ್‍ನ SP125 ಬಿಎಸ್6 ಸಂಪೂರ್ಣವಾಗಿ ಹೊಸ 125ಸಿಸಿ ಎಚ್‍ಇಟಿ ಎಂಜಿನ್, ಜತೆಗೆ ಶೇ 16ರಷ್ಟು ಹೆಚ್ಚು ಮೈಲೇಜ್ ನೀಡುವ ಇಎಸ್‍ಪಿ (eSP) ತಂತ್ರಜ್ಞಾನ ಒಳಗೊಂಡಿದೆ. ಇದಲ್ಲದೆ, ಈ ವಲಯದಲ್ಲಿ ಮೊದಲ ಬಾರಿಗೆ ಪರಿಚಯಿಸಿದ 9 ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು  SP125 ಒಳಗೊಂಡಿದೆ. (ಸಂಪೂರ್ಣ ಡಿಜಿಟಲ್ ಮೀಟರ್, ಎಷ್ಟು ದೂರ ಕ್ರಮಿಸಿದರೆ ಇಂಧನ ಖಾಲಿಯಾಗುವ ಮಾಹಿತಿ, ಸರಾಸರಿ ಇಂಧನ ದಕ್ಷತೆ, ವಾಸ್ತವಿಕ ನೆಲೆಯಲ್ಲಿ ಇಂಧನ ದಕ್ಷತೆ, ಎಲ್‍ಇಡಿ ಡಿಸಿ ಹೆಡ್‍ಲ್ಯಾಂಪ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಸ್ವಿಚ್, ಇಂಟಗ್ರೇಟೆಡ್ ಹೆಡ್‍ಲ್ಯಾಂಪ್ ಬೀಮ್/ ಪಾಸಿಂಗ್ ಸ್ವಿಚ್, ಇಕೊ ಇಂಡಿಕೇಟರ್, ಗೇರ್ ಪೊಸಿಷನ್ ಇಂಡಿಕೇಟರ್ ಒಳಗೊಂಡಿದೆ).

ಸದ್ಯಕ್ಕೆ SP125 ಬಿಎಸ್6 ಮೋಟರ್ ಸೈಕಲ್ ಅನ್ನು ರಾಜಸ್ಥಾನದ ಟಪುಕಡಾ ಹೋಂಡಾ 2ವೀಲರ್ಸ್ ಘಟಕದಲ್ಲಿ ತಯಾರಿಸಲಾಗುತ್ತಿದೆ. ವಿಶ್ವದಾದ್ಯಂತ ರಫ್ತು ಹೋಂಡಾ 2ವೀಲರ್ಸ್ ಇಂಡಿಯಾ, ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಿದ್ದ ಆ್ಯಕ್ಟಿವಾ ಮೂಲಕ 2001ರಲ್ಲಿ ಭಾರತದಿಂದ ತನ್ನ ರಫ್ತು ವಹಿವಾಟನ್ನು ಆರಂಭಿಸಿದೆ. ಸದ್ಯಕ್ಕೆ ಹೋಂಡಾ, 25 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವುದಕ್ಕೆ ಹೆಮ್ಮೆ ಪಡುತ್ತದೆ. ರಫ್ತು ವಹಿವಾಟಿನಲ್ಲಿ ದ್ವಿಚಕ್ರ ವಾಹನಗಳ 18 ಮಾದರಿಗಳನ್ನು ಹೊಂದಿದೆ. ಏಷ್ಯಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕದ 25 ವಿಭಿನ್ನ ಮಾರುಕಟ್ಟೆಗಳಿಗೆ ದ್ವಿಚಕ್ರ ವಾಹನಗಳನ್ನು ರಫ್ತು ಮಾಡುತ್ತಿದೆ.

click me!