ಮಾರಾಟದಲ್ಲಿ ಆ್ಯಕ್ಟಿವಾ ಹಿಂದಿಕ್ಕಿದೆ ಈ ಬೈಕ್!

By Web Desk  |  First Published Mar 23, 2019, 3:55 PM IST

ಫೆಬ್ರವರಿ ತಿಂಗಳ ಬೈಕ್, ಸ್ಕೂಟರ್ ಮಾರಾಟ ಅಂಕಿ ಅಂಶ ಬಿಡುಗಡೆಯಾಗಿದೆ. ವಿಶೇಷ ಅಂದರೆ ಆ್ಯಕ್ಟೀವಾ ಸ್ಕೂಟರ್ ಗರಿಷ್ಠ ಮಾರಾಟ ದಾಖಲೆ ಉಳಿಸಿಕೊಂಡಿತ್ತು. ಆದರೆ ಆ್ಯಕ್ಟಿವಾಗೆ ಬೈಕ್ ತೀವ್ರ ಪೈಪೋಟಿ ನೀಡುತ್ತಿದೆ. ಇಷ್ಟೇ ಅಲ್ಲ ಮಾರಾಟದಲ್ಲೂ ಶಾಕ್ ನೀಡಿದೆ.
 


ನವದೆಹಲಿ(ಮಾ.23): ಮಾರಾಟದಲ್ಲಿ ಹೊಂಡಾ ಆ್ಯಕ್ಟಿವಾ ಪ್ರತಿ ತಿಂಗಳು ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಆ್ಯಕ್ಟಿವಾ ಸ್ಕೂಟರ್ ಹೀರೊ ಸ್ಪ್ಲೆಂಡರ್ ಭಾರಿ ಪೈಪೋಟಿ ನೀಡಿದೆ. ಇಷ್ಟೇ ಅಲ್ಲ ಮಾರಾಟದಲ್ಲೂ ಆ್ಯಕ್ಟೀವಾ ಸ್ಕೂಟರ್ ಹಿಂದಿಕ್ಕಿದೆ. ಫೆಬ್ರವರಿಯಲ್ಲಿನ ಆ್ಯಕ್ಟೀವಾ ಹಾಗೂ ಸ್ಲೆಂಡರ್ ಮಾರಾಟ ಅಂಕಿ ಅಂಶ ಬಿಡುಗಡೆಯಾಗಿದೆ.

ಇದನ್ನೂ ಓದಿ: ಭಿಕ್ಷುಕರ ವೇಷದಲ್ಲಿ ಪೊಲೀಸ್- ನಿಯಮ ಪಾಲಿಸದವರಿಗೆ ನಡು ರಸ್ತೆಯಲ್ಲೇ ಶಿಕ್ಷೆ!

Tap to resize

Latest Videos

undefined

ಫೆಬ್ರವರಿಯಲ್ಲಿ 2,44,241 ಹೀರೋ ಸ್ಪ್ಲೆಂಡರ್ ಬೈಕ್ ಮಾರಾಟವಾಗಿದ್ದರೆ, ಆ್ಯಕ್ಟೀವಾ 20,5,239 ಸ್ಕೂಟರ್ ಮಾರಾಟವಾಗಿದೆ. ಕನಿಷ್ಠ 40,000 ಅಂತರವಿದೆ. ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳಲ್ಲಿ ಗರಿಷ್ಠ ಮಾರಾಟ ದಾಖಲೆಯನ್ನು ಹೊಂದಿರುವು ಸ್ಪೆಂಡರ್ ಇದೀಗ ಇತರ ಎಲ್ಲಾ ಬೈಕ್‌ಗಳಿಗೆ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ: ಬೈಕ್-ಸ್ಕೂಟರ್ ಬದಲಾಯಿಸುತ್ತೀರಾ?- ಇಲ್ಲಿದೆ ಅತ್ಯುತ್ತಮ ಆಯ್ಕೆ!

ಸ್ಪ್ಲೆಂಡರ್ Plus i3S,iSmart ಬೈಕ್ ಬೆಲೆ 49,060 ರೂಪಾಯಿ(ಎಕ್ಸ್  ಶೋ ರೂಂ) ಆರಂಭಗೊಳ್ಳುತ್ತಿದೆ. ಗರಿಷ್ಠ ಬೆಲೆ ಸ್ಪ್ಲೆಂಡರ್ 125 ಬೈಕ್ ಬೆಲೆ  58,800 ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳಲಿದೆ.  ಹೊಂಡಾ ಆ್ಯಕ್ಟಿವಾ ಬೆಲೆ Rs. 51,804 ರೂಪಾಯಿಂದ ಆರಂಭಗೊಳ್ಳಲಿದ್ದು, ಗರಿಷ್ಠ ಬೆಲೆ Rs. 61,539 ರೂಪಾಯಿ(ಎಕ್ಸ್ ಶೋ ರೂಂ).  ಬೆಲೆ ಕೂಡ ಕಡಿಮೆ, ಆ್ಯಕ್ಟಿವಾಗಿಂತ ಹೆಚ್ಚಿನ ಮೈಲೇಜ್  ಕೂಡ ನೀಡಲಿದೆ. 

click me!