ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಕಾರು ಕಾಪಿ- ಚೀನಾ ವಿರುದ್ಧ ಕೇಸ್ ಗೆದ್ದ JLR!

By Web DeskFirst Published Mar 22, 2019, 9:16 PM IST
Highlights

ಟಾಟಾ ಮಾಲೀಕತ್ವ ಜಾಗ್ವಾರ್ ಲ್ಯಾಂಡ್ ರೋವರ್ ಕಾರನ್ನು ನಕಲು ಮಾಡಿದ ಚೀನಾ ಕಾರು ಕಂಪನಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಚೀನಾ ಡೂಪ್ಲಿಕೇಟ್ ಕಾರು ಹಾಗೂ ಪ್ರಕರಣದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಚೀನಾ(ಮಾ.22): ನಕಲು ಉತ್ಪನ್ನಗಳನ್ನ ಮಾಡೋದರಲ್ಲಿ ಚೀನಾ ಎತ್ತಿದ ಕೈ. ಬ್ರ್ಯಾಂಡೆಡ್ ಪ್ರಾಡಕ್ಟ್‌ಗಳನ್ನೇ ಹೋಲುವ ಡೂಪ್ಲಿಕೇಟ್ ಪ್ರಾಡಕ್ಟ್‌ಗಳು ಚೀನಾದಲ್ಲಿ ತಯಾರಾಗುತ್ತೆ. ಇದೀಗ ಈ ಡೂಪ್ಲಿಕೇಟ್ ಯುಗ ಕಾರು ಉತ್ಪಾದನೆಗೂ ಕಾಲಿಟ್ಟಿದೆ. ಇದೀಗ ಚೀನಾದ ಜಿಯಾಂಗ್ಲಿಂಗ್ ಮೋಟಾರ್ ಕಾರ್ಪ್ ನಕಲು ಮಾಡಿ ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ: ನೀರವ್ ಮೋದಿಗೆ ಮತ್ತೊಂದು ಶಾಕ್- 11 ಕಾರು ಹರಾಜಿಗೆ!

ಟಾಟಾ ಮಾಲೀಕತ್ವದ ಬ್ರಿಟೀಷ್ ಕಾರು ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ನೂತನ ಲ್ಯಾಂಡ್ ರೋವರ್ ಇವೋಕ್ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರನ್ನೇ ಹೋಲುವ ಹಾಗೂ ಹಲವು ಫೀಚರ್ಸ್‌ಗಳನ್ನು ನೇರವಾಗಿ ನಕಲು ಮಾಡಿರುವ ಜಿಯಾಂಗ್ಲಿಂಗ್ ಮೋಟಾರ್ ಕಾರ್ಪ್ ಲ್ಯಾಂಡ್‌ವಿಂಡ್ X7 ಕಾರು ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ಹೊಸ ಅವತಾರದಲ್ಲಿ ದಾಟ್ಸನ್ ರೆಡಿ ಗೋ ಕಾರು-ಕೇವಲ 2.75 ಲಕ್ಷ ರೂ!

ಲೋಗೋ, ಕಾರಿನ ಮುಂಭಾಗ, ಬಾಡಿ, ವಿಂಡೋ, ರೂಫ್, ಟೈಲ್ ಲೈಟ್ಸ್, ಕ್ಯಾರೆಕ್ಟರ್ ಲೈನ್, ಸೈಡ್ ಪ್ಯಾನಲಿಂಗ್ ಸೇರಿದಂತೆ ಕಾರಿನ ಬಹುತೇಕ ಎಲ್ಲವನ್ನೂ ಕಾಪಿ ಮಾಡಲಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದ ಜಾಗ್ವಾರ್ ಲ್ಯಾಂಡ್ ರೋವರ್ ಬೀಜಿಂಗ್‌ನ ಚಯೊಂಗ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲ ತಕ್ಷಣವೇ ಲ್ಯಾಂಡ್‌ವಿಂಡ್ X7 ಮಾರಾಟ ಹಾಗೂ ಉತ್ಪಾದನೆ ನಿಲ್ಲಸಬೇಕು, ಹಾಗೂ ಜಾಗ್ವಾರ್ ಲ್ಯಾಂಡ್ ರೋವರ್‌ಗೆ ಪರಿಹಾರ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.

click me!