ಆಧುನಿಕ ತಂತ್ರಜ್ಞಾನ, ವಿನ್ಯಾಸ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ಹೀರೋ ಸ್ಪ್ಲೆಂಡರ್ i ಸ್ಮಾರ್ಟ್ ಬಿಡುಗಡೆಯಾಗಿದೆ. ಬೈಕ್ ಬೆಲೆ, ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ನ.07): ಹೀರೋ ಮೋಟಾರ್ ಕಾರ್ಪ್ ತನ್ನ ಸ್ಪ್ಲೆಂಡರ್ i ಸ್ಮಾರ್ಟ್ ಬೈಕನ್ನು ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ನೂತನ i ಸ್ಮಾರ್ಟ್ ಬೈಕ್ BS6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಬಿಡುಗಡೆಯಾಗಿದೆ. ಎಪ್ರಿಲ್ 1, 2020ರಿಂದ ಬಿಡುಗಡೆಯಾಗುವು ಎಲ್ಲಾ ವಾಹನಗಳು ಭಾರತ್ ಸ್ಟೇಜ್ 6 ಎಂಜಿನ್ ಹೊಂದಿರಬೇಕು. ಇದಕ್ಕೂ ಮೊದಲೆ ಹೀರೋ i ಸ್ಮಾರ್ಟ್BS6 ಎಂಜಿನ್ ಬೈಕ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ ರೆಬೆಲ್ ಬೈಕ್ ಅನಾವರಣ!
undefined
ನೂತನ ಬೈಕ್ ಬೆಲೆ 64,900 ರೂಪಾಯಿ(ಎಕ್ಸ್ ಶೋ ರೂಂ). 110 cc, ಫ್ಯುಟೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 9 bhp ಪವರ್ ಹಾಗೂ 9.89 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮುಂಭಾಗದ ಸಸ್ಪೆಶನ್ 15mmಗೆ ಏರಿಕೆ ಮಾಡಲಾಗಿದ್ದು, ವೀಲ್ಹ್ ಬೇಸ್ 36mm ಮಾಡಲಾಗಿದೆ. ಗ್ರೌಂಡ್ ಕ್ಲೀಯರೆನ್ಸ್ ಕೂಡ ಅಧಿಕವಾಗಿದ್ದು, ಸದ್ಯ 180mmಗೆ ಏರಿಕೆ ಮಾಡಲಾಗಿದೆ.
Behold the Splendor iSmart – India’s First BS-VI Motorcycle with Programmed FI pic.twitter.com/QG2pZspH5O
— Hero MotoCorp (@HeroMotoCorp)ಇದನ್ನೂ ಓದಿ: ರೊವ್ವೆಟ್ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಬಿಡುಗಡೆ!
ಎರಡು ವೇರಿಯೆಂಟ್‌ಗಳಲ್ಲಿ ಹೀರೋ ಸ್ಪ್ಲೆಂಡರ್ i ಸ್ಮಾರ್ಟ್ ಬೈಕ್ ಲಭ್ಯವಿದೆ. ಡ್ರಂ ಕಾಸ್ಟ್ ಹಾಗೂ ಸೆಲ್ಫ್ ಕಾಸ್ಟ್ ವೇರಿಯೆಂಟ್ ಲಭ್ಯವಿದೆ. ಡೈಮಂಡ್ ಚಾಸಿ ಹೊಂದಿರು ನೂತನ ಬೈಕ್ ಹೆಚ್ಚು ಬಲಿಷ್ಠ ಹಾಗೂ ಬಾಳಿಕೆ ಬರಲಿದೆ. ಕೆಲ ದಿನಗಳಲ್ಲಿ ದೆಹಲಿ ಶೋ ರೂಂಗಳಲ್ಲಿ ನೂತನ ಬೈಕ್ ಲಭ್ಯವಾಗಲಿದೆ. ಇನ್ನು ಒಂದು ವಾರದಲ್ಲಿ ಭಾರತದಾದ್ಯಂತ ನೂತನ ಬೈಕ್ ಲಭ್ಯವಾಗಲಿದೆ.