ಸತತ 11 ಗಂಟೆ, 800 ಕಿ.ಮೀ- ಮತದಾನಕ್ಕಾಗಿ ಜೀಪ್ ಕಂಪಾಸ್ ಸಾಹಸ!

By Web Desk  |  First Published May 8, 2019, 10:21 PM IST

ಸ್ವಾತಂತ್ರ್ಯ ಬಂದು 72 ವರ್ಷಗಳೇ ಕಳದರೂ ಆ ಹಳ್ಳಿಗೆ ರಸ್ತೆಯೇ ಇಲ್ಲ. ಹೀಗಾಗಿ ವಾಹನಗಳೇ ಇಲ್ಲ. ಹೀಗಾಗಿ  ಪ್ರತಿ ಚುನಾವಣೆಯಲ್ಲೂ ಇವರು ಮತದಾನದಿಂದ ವಂಚಿತರಾಗಿದ್ದರು. ಆಧರೆ 2019ರ ಲೋಕಸಭಾ ಚುನಾವಣೆಯಲ್ಲಿ ಇವರ ಕನಸು ಕೈಗೂಡಿದೆ. ಇದಕ್ಕೆ ಜೀಪ್ ಕಂಪಾಸ್ ಕಾರು ಸಹಾಯ ಮಾಡಿದೆ.


ಮತದಾನ ಪ್ರತಿಯೊಬ್ಬ ನಾಗರೀಕನ ಹಕ್ಕು. ಆದರೆ ಹಲವು ಕಾರಣಗಳಿಂದ ಭಾರತದ ಅನೇಕ ಹಳ್ಳಿಗಳು ಪ್ರಜಾತಂತ್ರದ ಬಹುದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ಈಗಲೂ ದೇಶದ ಹಲವು ಹಳ್ಳಿಗಳು ರಸ್ತೆ, ವಿದ್ಯುತ್ ಸಂಪರ್ಕ ಕಂಡಿಲ್ಲ. ಇಂತಹ ಹಳ್ಳಿಯನ್ನು ಗುರುತಿಸಿ ಹಳ್ಳಿಯ ಜನರನ್ನು ಮತದಾನಕ್ಕೆ ಕರೆತರಲು ಜೀಪ್ ಕಂಪಾಸ್ ಕಾರು ವಿಶೇಷ ಪ್ರಯತ್ನ ಮಾಡಿ ಯಶಸ್ವಿಯಾಗಿದೆ.

Tap to resize

Latest Videos

undefined

ಇದನ್ನೂ ಓದಿ: ಶೀಘ್ರದಲ್ಲೇ ಪೆಟ್ರೋಲ್ ಮಾರುತಿ ಬ್ರೆಜಾ ಬಿಡುಗಡೆ- ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ!

ಜೀಪ್ ಕಂಪಾಸ್ SUV ಕಾರು ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ. ಆದರೆ ಈ ವೀಡಿಯೋದಲ್ಲಿ ಹಳ್ಳಿ ಹಾಗೂ ರಾಜ್ಯದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಜೀಪ್ ಕಂಪಾಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.  ಮತದಾನ ಕೇಂದ್ರ ಹಳ್ಳಿಯಿಂದ ಸರಿಸುಮಾರು 15 ಕಿ.ಮೀ ದೂರದಲ್ಲಿದೆ. ಸರಿಯಾದ ರಸ್ತೆಯಿಲ್ಲ. ಕಾಲ್ನಡಿಗೆಯಲ್ಲಿ ಹೋಗಿ ಮತದಾನ ಮಾಡುವುದು ಯುವಕರನ್ನು ಹೊರತು ಪಡಿಸಿದರೆ ಇನ್ಯಾರಿಗೂ ಸಾಧ್ಯವಿಲ್ಲ. ಈ ಹಳ್ಳಿಯನ್ನು ಗುರುತಿಸಿ ಜೀಪ್ ಕಂಪಾಸ್, ಈ ಹಳ್ಳಿ ಜನರಿಗೆ ಮತದಾನ ಮಾಡೋ ಅವಕಾಶ ಮಾಡಿತು.
 
ಜೀಪ್ ಕಂಪಾಸ್‌ನಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳಲು ಹಳ್ಳಿ ಜನರಿಗೆ ಸಾಧ್ಯವಾಗಿದೆ. ಮತದಾನದ ದಿನ ನಾಲ್ಕೈದು ಜೀಪ್ ಕಂಪಾಸ್ ಕಾರು ಹಳ್ಳಿಗೆ ತಲುಪಿತು. ಬಳಿಕ ಹಳ್ಳಿ ಜನರನ್ನು  ಜೀಪ್ ಕಂಪಾಸ್ ಕಾರಿನಲ್ಲಿ ಮತದಾನ ಕೇಂದ್ರಕ್ಕೆ ಕರೆತಂದು ಮತದಾನ ಮಾಡಿಸಿ ಬಳಿಕ ಹಳ್ಳಿಗೆ ಬಿಡಲಾಯಿತು. ಹಳ್ಳಿ ಜನರ ಸಂತಸ ಹೇಳತೀರದು. ಕಾರಿನಲ್ಲಿ ಕುಳಿತು ಹೋಗುವ ಕನಸು ಕಂಡಿದ್ದ ಈ ಮುಗ್ದ ಜನಕ್ಕೆ ದೀಢೀರ್ ಕಾರು ಕಂಡಾಗ ಸಂಭ್ರಮ ಇಮ್ಮಡಿಕೊಂಡಿತ್ತು. 

ಇದನ್ನೂ ಓದಿ: ಸೌತ್ ಆಫ್ರಿಕಾದಲ್ಲಿ ಭಾರತದ ಕಾರಿಗೆ ಭಾರೀ ಬೇಡಿಕೆ!

ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ಕಾರಿನಲ್ಲಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದ್ದಾರೆ. ಈ ಹಳ್ಳಿ ಜನ ಯುವಕರಿದ್ದಾ ಕಾಲ್ನಡಿಗೆಯಲ್ಲಿ ಮತದಾನ ಮಾಡಿದ್ದಾರೆ. ಆದರೆ ವಯಸ್ಸು ಮೀರುತ್ತಿದ್ದಂತೆ ಮತದಾನದ ಆಸೆ ಕೈಬಿಡಬೇಕಾಯಿತು. ಇನ್ನು ಹೆಣ್ಣು ಮಕ್ಕಳು ಮತದಾನದಿಂದ ವಂಚಿತರಾಗಿದ್ದರು. ಆದರೆ ಜೀಪ್ ಕಂಪಾಸ್ ಈ ಹಳ್ಳಿ ಜನರ ಹಕ್ಕನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದೆ.

click me!