7.41 ಮೀಟರ್‌ ಎತ್ತರದ ಸೈಕಲ್‌ ನಿರ್ಮಿಸಿ ರೈಡಿಂಗ್‌... ವಿಡಿಯೋ ನೋಡಿ

By Suvarna News  |  First Published Jan 19, 2022, 4:30 PM IST
  • ಅತೀ ಎತ್ತರದ ಸೈಕಲ್‌ ನಿರ್ಮಿಸಿ ರೈಡಿಂಗ್‌
  • ಗಿನ್ನಿಸ್ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ವ್ಯಕ್ತಿ
  • 7.41 ಮೀ. ಎತ್ತರದ ಸೈಕಲ್‌ ನಿರ್ಮಾಣ

ದಾಖಲೆ ಮಾಡುವುದಕ್ಕಾಗಿ ಜನ ಏನೆಲ್ಲಾ ಮಾಡುತ್ತಾರೆ. ಜನ ಮಾಡುವ ಚಿತ್ರ ವಿಚಿತ್ರ ದಾಖಲೆಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಹಾಗೆಯೇ ವ್ಯಕ್ತಿಯೊಬ್ಬ ಭಾರಿ ಎತ್ತದ ಸೈಕಲೊಂದನ್ನು ನಿರ್ಮಿಸಿ ಅದನ್ನು ರೈಡ್ ಮಾಡಿದ್ದು, ಈ ವಿಡಿಯೋವನ್ನು ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನ ವಾವ್‌ ಎನ್ನುತ್ತಿದ್ದಾರೆ.

ಅದ್ಭುತ ವಿಶ್ವ ದಾಖಲೆಗಳ ಇಂದಿನ ಆವೃತ್ತಿಯಲ್ಲಿ, ವ್ಯಕ್ತಿಯೊಬ್ಬರು ವಿನ್ಯಾಸಗೊಳಿಸಿದ ಅತಿ ಎತ್ತರದ ಸೈಕಲ್‌ ಅನ್ನು ವ್ಯಕ್ತಿಯೊಬ್ಬರು ಸವಾರಿ ಮಾಡುತ್ತಿರುವ ದೃಶ್ಯವಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ಈ ವಿಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ ಮಾಡಿದೆ. ಈ ಸೈಕಲ್‌ನ ಎತ್ತರ 7.41 ಮೀ. ಅದರೆ 24 ಅಡಿ 3.73 ಇಂಚು. ಆಡಮ್ ಝ್ಡಾನೋವಿಚ್ (Adam Zdanowicz)ಈ ದಾಖಲೆ ನಿರ್ಮಿಸಿದವರಾಗಿದ್ದಾರೆ. 

 
 
 
 
 
 
 
 
 
 
 
 
 
 
 

Latest Videos

undefined

A post shared by Guinness World Records (@guinnessworldrecords)

 

ತಮ್ಮ ಈ ಬೃಹತ್‌ ಗಾತ್ರದ ಸೈಕಲ್‌ ನಿರ್ಮಾಣದ ಬಗ್ಗೆ ಮಾತನಾಡಿದ ಆಡಮ್ ಅವರು, ಇದು ಅವರು ಇದುವರೆಗೆ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಅತಿದೊಡ್ಡ ಸೈಕಲ್‌ ಎಂದು ಹೇಳುತ್ತಾರೆ. ಇದನ್ನು ಸವಾರಿ ಮಾಡುವುದು ಸವಾಲು ಮತ್ತು ದೊಡ್ಡ ಸಾಹಸ ಎಂದು ಅವರು ವಿವರಿಸಿದರು. ದೊಡ್ಡದಾದ ಪ್ರಾಜೆಕ್ಟ್‌ಗಳನ್ನು ಮಾಡುವುದರಲ್ಲಿ ಅವರಿಗೆ ಅತೀವವಾದ ಆಸಕ್ತಿಯಂತೆ. ನನ್ನ ಆಲೋಚನೆಗಳನ್ನು ಹೊಸ ಎತ್ತರಕ್ಕೆ ಏರಿಸುವುದು ನನಗೆ ದೊಡ್ಡ ಸಂತೃಪ್ತಿ ಹಾಗೂ ಸಂಪೂರ್ಣತೆಯನ್ನು ನೀಡುತ್ತದೆ.

Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

ನನ್ನ ಕನಸುಗಳನ್ನು ನನಸಾಗಿಸುವುದೇ ನನಗೆ ಹೊಸ ಅದ್ಭುತವಾದ ವಿಷಯಗಳನ್ನು ಪ್ರಯತ್ನಿಸಲು ಸ್ಫೂರ್ತಿ ನೀಡುತ್ತದೆ ಮತ್ತು ಎತ್ತರದ ಸವಾರಿ ಮಾಡಬಹುದಾದ ಬೈಸಿಕಲ್ ನನ್ನ ಕಾರ್ಯ ವಿಧಾನ ಮತ್ತು ನಂಬಿಕೆಗಳಿಗೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ. ಈ ಎತ್ತರದ ಬೈಸಿಕಲ್‌ನ ಯೋಜನೆ ಹಾಗೂ ವಿನ್ಯಾಸವನ್ನು ರೂಪಿಸಲು ಸುಮಾರು ಒಂದು ತಿಂಗಳು ತೆಗೆದುಕೊಂಡಿತು. ಕ್ರಿಯಾತ್ಮಕ ಬೈಸಿಕಲ್ ನಿರ್ಮಾಣಕ್ಕೆ ಸುಮಾರು ಮೂರು ವಾರ ತೆಗೆದುಕೊಳ್ಳುತ್ತದೆ. ಅಲ್ಲದೇ ಈ ಸೈಕಲ್‌ ನಿರ್ಮಿಸಲು ತಾನು ಮರು ಬಳಕೆಯ ವಸ್ತುಗಳನ್ನೇ ಬಳಸಿದ್ದೇನೆ ಎಂದು ಅವರು ಹೇಳಿದರು. 

Royal Enfield Classic 500: ಗಮನ ಸೆಳೆಯುತ್ತಿದೆ ಸೆಳೆಯುತ್ತಿದೆ ವೈಯಕ್ತೀಕರಿಸಿದ ರಾಯಲ್ ಎನ್ಫೀಲ್ಡ್!

ಈ ವೀಡಿಯೊವನ್ನು ಒಂದು ದಿನದ ಹಿಂದೆ ಪೋಸ್ಟ್ ಮಾಡಲಾಗಿದ್ದು ಇದನ್ನು  57,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಇದೊಂದು ಅದ್ಭುತ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಹಾವು ಕಂಡರೆ ಸಾಕು ಮಾರುದ್ದ ಹೋಗುವವರೇ ಹೆಚ್ಚು. ಅಂತಹದರಲ್ಲಿ ವೃದ್ಧನೋರ್ವ ಹಾವನ್ನು ಯಾವುದೇ ಭಯವಿಲ್ಲದೆ ಗಂಟೆಗಟ್ಟಲೇ ಕೊರಳಲ್ಲಿ ಹಾಕಿಕೊಂಡು ಸೈಕಲ್‌ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಮನೆಯೊಳಗೆ ಬಂದಿದ್ದ ಹಾವನ್ನು ವೃದ್ಧನೋರ್ವ ಕೊರಳಲ್ಲಿ ಸುತ್ತಿಕೊಂಡು ಸೈಕಲ್‌ ಸವಾರಿ ಮಾಡಿದ್ದಾನೆ. ಅಲ್ಲದೇ ಆ ಹಾವನ್ನು ಕೊರಳಲ್ಲಿ ಸುತ್ತಿಕೊಂಡೇ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾನೆ. 

ಹಾವನ್ನು ಕೊರಳಿಗೆ ಹಾಕಿಕೊಂಡು ಸೈಕಲ್‌ ಸವಾರಿ ಮಾಡಿದ್ದಾಗ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಈತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವೃದ್ಧನ ಧೈರ್ಯಕ್ಕೆ ಜನ ಬೆರಗಾಗಿದ್ದಾರೆ.

click me!