ಗ್ಯಾಸ್ ಸ್ಟೌ, ಟಿವಿ ಡಿಶ್ ಸೇರಿದಂತೆ ಇತರ ಗುಜುರಿ ವಸ್ತುಗಳಿಂದ ನಿರ್ಮಿಸಲಾದ ಪುಟ್ಟ ಆಟೋ ರಿಕ್ಷಾ ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಈ ಆಟೋದಲ್ಲಿನ ಟೈಯರ್, ಬಾಡಿ, ಎಂಜಿನ್, ಸೌಂಜ್ ಸಿಸ್ಟಮ್ ಸೇರಿದಂತೆ ಪ್ರತಿಯೊಂದನ್ನೂ ಕೂಡ ಸ್ವತಃ ತಾವೇ ನಿರ್ಮಿಸಿದ್ದಾರೆ. ಈ ಆಟೋ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಇಡುಕ್ಕಿ(ಜ.20): ಪುಟ್ಟ ಮಕ್ಕಳಿಗೆ ಕಾರು, ಜೀಪು ವಾಹನಗಳು ಕೌತುಕದ ವಿಷಯ. ಇದಕ್ಕಾಗಿ ಮಾರುಕಟ್ಟೆಯಲ್ಲಿ ವಿವಿದ ರೀತಿಯ ವಾಹನಗಳು ಲಭ್ಯವಿದೆ. ಆದರೆ ಕೇರಳದ ಇಡುಕ್ಕಿಯ ಅರುಣ್ ಕುಮಾರ್ ಪುರುಷೋತ್ತಮ್ ತನ್ನ ಇಬ್ಬರು ಮಕ್ಕಳಿಗಾಗಿ ಸ್ವತಃ ಆಟೋ ರಿಕ್ಷಾವೊಂದನ್ನ ನಿರ್ಮಿಸಿದ್ದಾರೆ. ವಿಶೇಷ ಅಂದರೆ ಬ್ಯಾಟರಿ ಚಾಲಿತ ಈ ಆಟೋ ರಿಕ್ಷಾ ಎಲ್ಲಾ ಸೌಲಭ್ಯಗಳನ್ನೂ ಹೊಂದಿದೆ.
ಇದನ್ನೂ ಓದಿ: ಹ್ಯುಂಡೈ ಎಲೈಟ್ ಐ20 ಕಾರು ಬಿಡುಗಡೆ-ಬಲೆನೋಗೆ ಪೈಪೋಟಿ!
ಇಡುಕ್ಕಿ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಅರುಣ್ ಕುಮಾರ್ ಪುರುಷೋತ್ತಮ್, ಆಟೋಮೊಬೈಲ್ ಕ್ಷೇತ್ರದಲ್ಲೂ ಜ್ಞಾನಹೊಂದಿದ್ದಾರೆ. ಹೀಗಾಗಿ ತನ್ನ ಇಬ್ಬರು ಮಕ್ಕಳಿಗೆ ಪುಟ್ಟ ಆಟೋ ರಿಕ್ಷಾ ನಿರ್ಮಿಸಿಕೊಟ್ಟಿದ್ದಾರೆ. ಗುಜುರಿ ವಸ್ತುಗಳು, ಟಿವಿ ಡಿಶ್, ಗ್ಯಾಸ್ ಸ್ಟೌ ಸೇರಿದಂತೆ ಇತರ ವಸ್ತುಗಳಿಂದ ಅತ್ಯಂತ ಸುಂದರ ಆಟೋ ರಿಕ್ಷಾ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಎಪ್ರಿಲಿಯಾ 300 ಸಿಸಿ ಆಟೋಮ್ಯಾಟಿಕ್ ಸ್ಕೂಟರ್!
ಈ ಆಟೋ ರಿಕ್ಷಾ ಬ್ಯಾಟರಿ ಚಾಲಿತ ಡಿಸಿ ಮೋಟಾರ್ ಅಳವಡಿಸಲಾಗಿದೆ. ರಿಕ್ಷಾ ಟೈಯರ್, ಬಾಡಿ ಬಿಲ್ಡ್, ಸೀಟ್ ಸೇರಿದಂತೆ ಎಲ್ಲಾ ವಸ್ತುಗಳನ್ನ ಸ್ವತಃ ತಾವೇ ತಯಾರಿಸಿದ್ದಾರೆ. ವಿಶೇಷ ಅಂದರೆ ಬ್ಲೂಟೂಥ್ ಆಡಿಯೋ, ಪೆನ್ ಡ್ರೈವ್ ಆಡಿಯೋ ಸಿಸ್ಟಮ್ ಕೂಡ ಇದೆ. ಇನ್ನು ಹೆಡ್ ಲೈಟ್, ಪಾರ್ಕ್ ಲೈಟ್, ಇಂಡೀಕೇಟರ್, ವೈಪರ್ ಸೇರಿದಂತೆ ಮಾರುಕಟ್ಟೆಲ್ಲಿರುವ ಅಟೋ ರಿಕ್ಷಾದಲ್ಲಿರುವ ಎಲ್ಲಾ ಸೌಲಭ್ಯಗಳು ಇದರಲ್ಲಿದೆ.
ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!
ನಿಟ್ರೋಲ್, ಫಾರ್ವರ್ಡ್ ಹಾಗೂ ರಿವರ್ಸ್ ಮೂರು ಗೇರ್‌ಗಳು ಈ ರಿಕ್ಷಾದಲ್ಲಿದೆ. ಇನ್ನು ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಕೂಡ ಅಳವಡಿಸಲಾಗಿದೆ. ಈ ಆಟೋ ರಿಕ್ಷಾಗೆ ಸುಂದರಿ ಅನ್ನೋ ಹೆಸರಿಟ್ಟಿದ್ದಾರೆ. ಅರುಣ್ ಕುಮಾರ್ ಸಾಧನೆಗೆ ಆಟೋಮೊಬೈಲ್ ದಿಗ್ಗಜರೂ ಶ್ಲಾಘಿಸಿದ್ದಾರೆ.