ವಾಹನ ಸವಾರರೇ ಎಚ್ಚರ: ದುಬಾರಿ ಟೋಲ್ ಕಟ್ಟೋ ಬದಲು ಫಾಸ್ಟ್ಯಾಗ್ ಬಳಸಿ!

By Web Desk  |  First Published Nov 30, 2019, 9:25 PM IST

ಡಿಸೆಂಬರ್ 1ರಿಂದ ಎಲ್ಲಾ ವಾಹನಗಳು ಟೋಲ್ ಪಾವತಿಯನ್ನು ಫಾಸ್ಟ್ಯಾಗ್ ಮೂಲಕವೇ ಮಾಡಬೇಕು, ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಮೊತ್ತ ಪಾವತಿಸೋ ಮೂಲಕ ದಂಡ ಕಟ್ಟಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿತ್ತು. ಇದೀಗ ಗಡುವು ವಿಸ್ತರಿಸಿದೆ. ಫಾಸ್ಟ್ಯಾಗ್ ಅಳವಡಿಕೆ ಹಾಗೂ ಬಳಕೆ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ(ನ.30): ಭಾರತದ ಎಲ್ಲಾ ಕ್ಷೇತ್ರಗಳು, ಎಲ್ಲಾ ವ್ಯವಹಾರಗಳು ಡಿಜಿಟಲೀಕರಣವಾಗುತ್ತಿದೆ. ಇದೀಗ ಟೋಲ್ ಸಂಗ್ರಹ ಕೂಡ ಡಿಜಿಟಲೀಕರಣವಾಗುತ್ತಿದೆ. ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಡಿಸೆಂಬರ್ 1ರಿಂದ ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿ ಹೊಂದಿರಲೇಬೇಕು ಎಂದಿತ್ತು. ಇದೀಗ ಫಾಸ್ಟ್ಯಾಗ್ ಗಡುವು ವಿಸ್ತರಿಸಿದೆ.

ಇದನ್ನೂ ಓದಿ: ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, ತಿಳಿದುಕೊಳ್ಳಿ ಮಾಹಿತಿ

Tap to resize

Latest Videos

ಹೆಚ್ಚಿನ ವಾಹನ ಸವಾರರು ಪ್ರತಿ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಹಣ ನೀಡಿ ರಶೀದಿ ಪಡೆದು ಚಲಿಸುತ್ತಿದ್ದರು. ಕೆಲವೇ ಕೆಲವು ಮಂದಿ ಫಾಸ್ಟ್ಯಾಗ್ ಮೂಲಕ ಹಣ ಪಾವತಿ ಮಾಡುತ್ತಿದ್ದರು. ಆದರೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಎಲ್ಲಾ ವಾಹನಗಳು ಕಡ್ಡಾಯವಾಗಿ ಫಾಸ್ಟ್ಯಾಗ್ ಹೊಂದಿರಲೇಬೇಕು ಎಂದಿತ್ತು. ಇದೀಗ ಡಿಸೆಂಬರ್ 1ರ ಗಡುವನ್ನು ಡಿಸೆಂಬರ್ 15 ದಿನಕ್ಕೆ ವಿಸ್ತರಿಸಿದೆ.

ಪ್ರಯಾಣಿಕರ ಸಮಯ ಉಳಿತಾಯ, ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಪಾರದರ್ಶಕ ವ್ಯವಹಾರಕ್ಕೆ ಫಾಸ್ಟ್‌ಟ್ಯಾಗ್ ಜಾರಿಗೆ ತರಲಾಗಿದೆ. ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಿಸಿದರೆ, ಟೋಲ್ ಸಂಗ್ರಹ ಕೇಂದ್ರಗಳಲ್ಲಿ ವಾಹನ  ಚಲಿಸುತ್ತಿದ್ದಂತೆ , ಫಾಸ್ಟ್ಯಾಗ್ ಖಾತೆಯಿಂದ ಹಣ ಪಾವತಿಯಾಗಲಿದೆ. ತಕ್ಷಣವೇ ಹಣ ಸಂದಾಯವಾದ ಮೆಸೇಜ್ ಮೊಬೈಲ್ ಹಾಗೂ ಇ ಮೇಲ್ ಮೂಲಕ ವಾಹನ ಮಾಲೀಕರಿಗೆ ರವಾನೆಯಾಗಲಿದೆ.

ಇದನ್ನೂ ಓದಿ: ಕೇಂದ್ರಕ್ಕೆ ಕೆಎಸ್ಸಾರ್ಟಿಸಿಯಿಂದ ಪತ್ರ...

ಡಿಸೆಂಬರ್ 1ರೊಳಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿತ್ತು. ಇದೀಗ ಡಿಸೆಂಬರ್ 15ಕ್ಕೆ ವಿಸ್ತರಣೆ ಮಾಡಲಾಗಿದೆ. ಸಮರ್ಪಕವಾಗಿ ಫಾಸ್ಟ್ಯಾಗ್ ಪೂರೈಕೆಯಾಗದ ಹಿನ್ನಲೆ ಹಾಗೂ ಕಾಲವಕಾಶ ಬೇಕು ಎಂಬ ಮನವಿ ಮೇರಿಗೆ ಗಡುವು ವಿಸ್ತರಿಸಲಾಗಿದೆ. 

ಫಾಸ್ಟ್ಯಾಗ್ ಅಳವಡಿಕೆ, ಬಳಕೆ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: 
 

click me!