ಗೋವಾ ಪ್ರವಾಸ ತೆರಳುವವರೇ ಎಚ್ಚರ ವಹಿಸಿ: ಕಾರಣ ಕೊರೋನಾ ಅಲ್ಲ ಪ್ರಯಾಣ!

By Suvarna News  |  First Published Sep 30, 2020, 7:30 PM IST

ಗೋವಾ ಎಂದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತೆ. ಭಾರತದ ಮಾತ್ರವಲ್ಲ ವಿಶ್ವದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಅದರಲ್ಲೂ ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಮನೆಯೊಳಗೆ ಬಂಧಿಯಾಗಿರುವ ಅನೇಕರು ಕೊರೋನಾ ತಗ್ಗಿದರೆ ಗೋವಾಗೆ ಪ್ರವಾಸಕ್ಕೆ ಸಜ್ಜಾಗುವುದು ಖಚಿತ. ಆದರೆ ಗೋವಾ ಪ್ರವಾಸ ತೆರಳುವವರು ಅತಿಯಾದ ಎಚ್ಚರ ವಹಿಸಬೇಕು, ಇದಕ್ಕೆ ಕಾರಣವೂ ಇದೆ.


ಬೆಂಗಳೂರು(ಸೆ.30):  ಸಮುದ್ರ ಕಿನಾರೆ, ಮನತಣಿಸುವ ಪ್ರಾಕೃತಿಕ ಸೌಂದರ್ಯ, ಜೊತೆ ಪಾರ್ಟಿ ಕಲ್ಚರ್‌ಗೆ ಗೋವಾ ಅತ್ಯಂತ ಸೂಕ್ತ ತಾಣ. ಪ್ರವಾಸಕ್ಕೆ ಯುವಕರ ಮೊದಲ ಆಯ್ಕೆ ಗೋವಾ. ಆದರೆ ಗೋವಾ ಪ್ರವಾಸ ತೆರಳುವವರು ಎಚ್ಚರ ವಹಿಸಲೇಬೇಕು. ಸದ್ಯ ಕೊರೋನಾ ವೈರಸ್ ಕಾರಣ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಅಗತ್ಯ. ಇದರ ಹೊರತಾಗಿ ಗೋವಾ ಪ್ರವಾಸಕ್ಕೆ ತೆರಳುವ ಮಂದಿ ಎಚ್ಚರದಿಂದ ವಾಹನ ಚಲಾಯಿಸುವುದು ಸೂಕ್ತ.

ಭಾರತದ ಶೇ.71 ರಷ್ಟು ರಸ್ತೆ ಅಪಘಾತಕ್ಕೆ ಒಂದೇ ಕಾರಣ; 2019ರ ವರದಿ ಬಹಿರಂಗ!

Tap to resize

Latest Videos

ಕೇಂದ್ರ ಮತ್ತು ರಸ್ತೆ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚು ಅಪಘಾತವಾಗುವ ಪ್ರವಾಸಿ ತಾಣದಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಗೋವಾಗೆ ತೆರಳುವ ಹೆದ್ದಾರಿಗಳಲ್ಲಿ ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಕಡಿದಾದ ರಸ್ತೆ, ತಿರುವುಗಳು , ಪ್ರಾಕೃತಿಕ ಸೌಂದರ್ಯ ಸವಿಯುತ್ತಾ ವಾಹನ ಚಾಲನೆ ಮಾಡುವವರಿಗೆ ಹೇಳಿ ಮಾಡಿಸಿದ ರಸ್ತೆಗಳು. ಹೀಗಾಗಿ ಇಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ.

ಭಾರತದ ಪ್ರವಾಸಿ ತಾಣಗಳಿಗೆ ತೆರುವ ಹೆದ್ದಾರಿಗಳ ಪೈಕಿ ಗೋವಾ ಹೆದ್ದಾರಿಗಳಲ್ಲಿ ಅತೀ ಹೆಚ್ಚು ಅಪಘಾತಗಳಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಗೋವಾದ 1 ಲಕ್ಷ ಮಂದಿಯಲ್ಲಿ 217 ಮಂದಿ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಅಪಘಾತಗಳು ಅತೀ ವೇಗದ ಚಾಲನೆ, ಓವರ್ ಟೇಕ್ ವೇಳೆ ಅಪಘಾತ, ಹೆಲ್ಮೆಟ್ ಇಲ್ಲದೆ ರೈಡಿಂಗ್ ಅಪಘಾತಗಳೇ ಹೆಚ್ಚಾಗಿದೆ.

ಬೈಕ್ ಮೂಲಕ, ಕಾರಿನ ಮೂಲಕ ಗೆಳೆಯರೊಂದಿಗೆ ಗೋವಾಗೆ ತೆರಳುವವರು ಹೆದ್ದಾರಿಯಲ್ಲಿ ಹಾಕಿರುವ ಸೂಚನೆಗಳನ್ನು ಗಮನಿಸಲೇಬೇಕು. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಸಿಬಾರದು. ಸುರಕ್ಷತೆ ಅತೀ ಅಗತ್ಯವಾಗಿದ್ದು, ಎಚ್ಚರದಿಂದ ಪ್ರಯಾಣ ಮಾಡುವುದು ಒಳಿತು.
 

click me!