ಫ್ಲಿಪ್ ಕಾರ್ಟ್ ಸಮೂಹ ಸಂಸ್ಥೆಗಳಾದ್ಯಂತ ಲಾಜಿಸ್ಟಿಕ್ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಮುಂದಾಗಿದೆ. ಚಾರ್ಜಿಂಗ್ ಮೂಲಸೌಕರ್ಯವನ್ನು ಸಂಯೋಜನೆ ಮಾಡುವುದು ಮತ್ತು ತನ್ನ ಸಿಬ್ಬಂದಿಯಿಂದ ಸ್ವೀಕಾರಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಫ್ಲಿಪ್‌ಕಾರ್ಟ್ ಘೋಷಿಸಿದೆ.
ಬೆಂಗಳೂರು(ಆ.25): ಭಾರತದಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್ ಕಾರ್ಟ್ ತನ್ನ ಇ-ಕಾಮರ್ಸ್ ಸಪ್ಲೈ ವ್ಯಾಲ್ಯೂ ಚೇನ್ ದೀರ್ಘಾವಧಿಯ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುುವಾಗಿ ಎಲ್ಲಾ ವ್ಯವಾಹರಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದಾಗಿ ಇಂದು ಘೋಷಣೆ ಮಾಡಿದೆ. ಜಾಗತಿಕ ಎಲೆಕ್ಟ್ರಿಕ್ ಸಾರಿಗೆ ಬಳಸಿಕೊಳ್ಳಲು ಫ್ಲಿಪ್ ಕಾರ್ಟ್ ದಿಟ್ಟ ಹೆಜ್ಜೆ ಇಟ್ಟಿದೆ. 2030ರ ವೇಳೆಗೆ ಫ್ಲಿಪ್‌ಕಾರ್ಟ್ ತನ್ನ ಎಲ್ಲಾ ವ್ಯವಹಾರಕ್ಕೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನ ಬಳಸಲಿದೆ ಎಂದಿದೆ.
ಮದ್ಯಪ್ರಿಯರಿಗಾಗಿ ಹಿಪ್ ಬಾರ್ ತೆರೆದ ಫ್ಲಿಪ್ ಕಾರ್ಟ್.. ಆನ್‌ಲೈನ್‌ನಲ್ಲೇ ಎಣ್ಣೆ!
undefined
ಈ ಬದ್ಧತೆ ಮತ್ತು ಎಲೆಕ್ಟ್ರಿಕ್ ವಾಹನಗಳ ವಿಸ್ತಾರವಾದ ಸೇರ್ಪಡೆಯೊಂದಿಗೆ ಫ್ಲಿಪ್ ಕಾರ್ಟ್ 2030 ರ ವೇಳೆಗೆ ತನ್ನ ಸಂಪೂರ್ಣ ಸಾಗಣೆ ವ್ಯವಸ್ಥೆಯಲ್ಲಿ (ನೇರ ಮಾಲೀಕತ್ವ ಅಥವಾ ಗುತ್ತಿಗೆ ಆಧಾರ) ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಗುರಿ ಹೊಂದಿದೆ. ಸೇವಾ ಕಾಂಟ್ರಾಕ್ಟ್ ಗಳಲ್ಲಿ ಅಗತ್ಯವಾದ ಮೂಲಸೌಕರ್ಯಗಳನ್ನು ಪೂರೈಸುವ ಮೂಲಕ ಇದನ್ನು ಜಾರಿಗೆ ತರಲಾಗುತ್ತದೆ, ತನ್ನ 1400 ಸಪ್ಲೈ ಚೈನ್ ಘಟಕಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಅಳವಡಿಸುವುದು. ಇದಲ್ಲದೇ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ಮತ್ತು ವಿತರಣಾ ಪ್ರತಿನಿಧಿಗಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ರೂಪಿಸಿದೆ. ಸಿಬ್ಬಂದಿ, ವಿತರಣಾ ಪಾಲುದಾರರು ಮತ್ತು ಕಾರ್ಮಿಕರ ಪರಿಸರ ವ್ಯವಸ್ಥೆಯ ವಿಸ್ತಾರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವುದು ಅಥವಾ ಬಳಕೆ ಮಾಡುವುದರೊಂದಿಗೆ ಫ್ಲಿಪ್ ಕಾರ್ಟ್ ಈ ಕ್ಷೇತ್ರದ ಸುಸ್ಥಿರ ಪರಿವರ್ತನೆಗೆ ಮುಂದಡಿ ಇಟ್ಟಿದೆ ಮತ್ತು 2030 ರ ವೇಳೆಗೆ ಶೇ.30 ರಷ್ಟು ವಿದ್ಯುತ್ ಚಾಲಿತ ಪ್ರಕ್ರಿಯೆಗಳನ್ನು ಖಾತರಿಪಡಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಬೆಂಬಲಿಸಲಿದೆ.
ವಾಲ್‌ಮಾರ್ಟ್ ಇಂಡಿಯಾ ಖರೀದಿಸಿದ ಇ ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್!.
ಭಾರತ ನೆಲದಲ್ಲಿ ಹುಟ್ಟಿ ಬೆಳೆಯುತ್ತಿರುವ ಕಂಪನಿಯಾಗಿರುವ ಫ್ಲಿಪ್ ಕಾರ್ಟ್ ನಲ್ಲಿ ನಾವು ನಮ್ಮ ಎಲ್ಲಾ ಪಾಲುದಾರರಿಗೆ ಪರಿಣಾಮಕಾರಿಯಾದ ಸೇವೆಯನ್ನು ನೀಡುವುದು ಮತ್ತು ಇ-ಕಾಮರ್ಸ್ ಅನ್ನು ಹೆಚ್ಚು ಹೆಚ್ಚು ಸೇರ್ಪಡೆ ಹಾಗೂ ಪ್ರಗತಿದಾಯಕವಾಗಿ ಕೊಂಡೊಯ್ಯಲು ಹೆಮ್ಮೆ ಪಡುತ್ತೇವೆ. ಇದರಲ್ಲಿ ಸಮುದಾಯಗಳು ಮತ್ತು ಪ್ಲಾನೆಟ್ ಸೇರಿದೆ. ನಾವು ನಮ್ಮ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಜವಾಬ್ದಾರಿಯುತವಾದ ಮತ್ತು ಪ್ರಜ್ಞಾಪೂರ್ವಕವಾದ ಸೇವೆಗಳನ್ನು ಪೂರೈಸಲು ನಾವು ಈ ನೀತಿಯನ್ನು ಸ್ಥಳೀಯ ಮಾರುಕಟ್ಟೆಗೆ ಅನ್ವಯ ಮಾಡುತ್ತಿದ್ದೇವೆ. ಹವಾಮಾನ ಗುಂಪು (ಕ್ಲೈಮೇಟ್ ಗ್ರೂಪ್)ನ ಇವಿ 100 ಉಪಕ್ರಮದೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಅದರನ್ವಯ ಸುಸ್ಥಿರ ಪರಿಸರ ಸೃಷ್ಟಿಯ ಪರಿಕಲ್ಪನೆ ಮತ್ತು ಇವಿ 100 ಪರಿಸರ ವ್ಯವಸ್ಥೆ ಬಗ್ಗೆ ಜಾಗತಿಕ ಮಟ್ಟದ ಉದ್ದೇಶಗಳನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗುತ್ತದೆ. ನಮ್ಮ ಮಟ್ಟ, ಆದ್ಯತೆ ಮತ್ತು ಸುಸ್ಥಿರತೆ ಕಾರ್ಯಸೂಚಿಯಲ್ಲಿ ಹೆಚ್ಚಿನ ಗಮನಹರಿಸುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವುದನ್ನು ತ್ವರಿತವಾಗಿ ಗುರುತಿಸುವುದಲ್ಲದೇ, ಶುದ್ಧ ಸಾರಿಗೆ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿಯೂ ನಾವು ಮಹತ್ವದ ಪಾತ್ರ ವಹಿಸಬಹುದು ಎಂಬುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.
ತನ್ನ ವ್ಯವಹಾರ ಚಟುವಟಿಕೆಗಳಲ್ಲಿ ಹಲವಾರು ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರತೆ ವಿಚಾರದಲ್ಲಿ ಫ್ಲಿಪ್ ಕಾರ್ಟ್ ಪ್ರಬಲವಾದ ದೂರದೃಷ್ಟಿಯನ್ನು ಹೊಂದಿದೆ ಮತ್ತು ಕ್ರಿಯಾಶೀಲವಾಗಿದೆ. ತನ್ನ ಇಡೀ ಲಾಜಿಸ್ಟಿಕ್ ಫ್ಲೀಟ್ ಅನ್ನು ವಿದ್ಯುದ್ದೀಕರಣಗೊಳಿಸಿರುವುದು ಫ್ಲಿಪ್ ಕಾರ್ಟ್ ನ ಬಹುದೊಡ್ಡ ಸುಸ್ಥಿರತೆಯ ಗುರಿಯ ಪ್ರಮುಖ ಭಾಗವಾಗಿದೆ ಹಾಗೂ ಇವಿ 100 ಬದ್ಧತೆಯು ಇದಕ್ಕೆ ಪೂರಕವಾಗಲಿದೆ. ಕಳೆದ ವರ್ಷದಲ್ಲಿ, ಫ್ಲಿಪ್ ಕಾರ್ಟ್ ವಿವಿಧ ಪ್ರದೇಶಗಳಲ್ಲಿರುವ ಚಾರ್ಜಿಂಗ್ ಪೂರೈಕೆದಾರರು, ರೆಗ್ಯುಲೇಟರ್ ಗಳು, ನೀತಿ ನಿರೂಪಕರು, ಕೌಶಲ್ಯಾಭಿವೃದ್ಧಿ ಏಜೆನ್ಸಿಗಳು, ಅಗ್ರಿಗೇಟರ್ ಗಳು ಹಾಗೂ ಒಇಎಂಗಳಲ್ಲಿ ವಿಸ್ಥಾರವಾದ ಪರಿಸರ ವ್ಯವಸ್ಥೆಯ ಪಾಲುದಾರಿಕೆಯನ್ನು ಸೃಷ್ಟಿ ಮಾಡಿದೆ. ಇವುಗಳಲ್ಲಿ ಪ್ರಮುಖವಾಗಿ ಚಲನಶೀಲತೆಯ ಪರಿಹಾರವಾಗಿ ಹೊರಹೊಮ್ಮಲು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯನ್ನು ಬೆಂಬಲಿಸುವ ಸಂದರ್ಭದಲ್ಲಿ ಇ-ಕಾಮರ್ಸ್ ಗೆ ಹೊಂದುವಂತೆ ಇವಿಗಳ ವಿನ್ಯಾಸ ಮತ್ತು ಉತ್ಪಾದನೆಗಳು ಇದರಲ್ಲಿ ಸೇರಿವೆ.
ಕ್ಲೈಮೇಟ್ ಗ್ರೂಪ್ ನ ಭಾರತದ ಕಾರ್ಯಕಾರಿ ನಿರ್ದೇಶಕರಾದ ದಿವ್ಯಾ ಶರ್ಮಾ ಅವರು ಮಾತನಾಡಿ, ``ಬಹುನಿರೀಕ್ಷಿತ ಇವಿ 100 ಕ್ಕೆ ಫ್ಲಿಪ್ ಕಾರ್ಟ್ ಸಹಿ ಹಾಕಿರುವುದಕ್ಕೆ ಮತ್ತು ಭಾರತದಲ್ಲಿನ ಇ-ಕಾಮರ್ಸ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಮಾಡಿಕೊಳ್ಳುವತ್ತ ಮುಂಚೂಣಿಯಲ್ಲಿರುವುದಕ್ಕೆ ನಮಗೆ ಅತೀವ ಸಂತಸವೆನಿಸುತ್ತಿದೆ. ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಮತ್ತು ನಮ್ಮ ಜಾಗತಿಕ ಜಾಲದೊಂದಿಗೆ ಇ-ಮೊಬಿಲಿಟಿ ಬಗೆಗಿನ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಫ್ಲಿಪ್ ಕಾರ್ಟ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಉಪಕ್ರಮವು ದೀರ್ಘಾವಧಿಯವರೆಗೆ ಮಾಲಿನ್ಯವನ್ನು ಕಡಿಮೆ ಮಾಡಲು ಹಾಗೂ ಗಾಳಿಯ ಗುಣಮಟ್ಟ ಹೆಚ್ಚಲು ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಇತರೆ ಕಂಪನಿಗಳೂ ಸಹ ಇಂತಹ ಉಪಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ’’ ಎಂದರು.
ಜಾಗತಿಕವಾಗಿ ಪ್ರಮಾಣೀಕೃತವಾದ ಇವಿ 100 ಉಪಕ್ರಮದಲ್ಲಿ ಸೇರ್ಪಡೆಯಾಗುತ್ತಿರುವ ಭಾರತದ ಮೊದಲ ಇ-ಕಾಮರ್ಸ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಫ್ಲಿಪ್ ಕಾರ್ಟ್ ಪಾತ್ರವಾಗಿದೆ.ಭಾರತದಲ್ಲಿನ ಎಲೆಕ್ಟ್ರಿಕ್ ವಾಹನಗಳ ಉನ್ನತಿ ಮಾಡುವ ನಿಟ್ಟಿನಲ್ಲಿ ಕಾರ್ಪೊರೇಟ್ ನಾಯಕತ್ವದ ವೇಗವನ್ನು ಹೆಚ್ಚಿಸುವ ಇವಿ100 ಗುರಿಯನ್ನು ಫ್ಲಿಪ್ ಕಾರ್ಟ್ ಅನನ್ಯವಾಗಿಸಿದೆ. ಜಗತ್ತಿನಾದ್ಯಂತದ 70 ಕ್ಕೂ ಹೆಚ್ಚು ಕಂಪನಿಗಳು ಈ ಉಪಕ್ರಮದಲ್ಲಿ ಭಾಗಿಯಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬದ್ಧತೆ ಹೊಂದಿವೆ.
ಫ್ಲಿಪ್ ಕಾರ್ಟ್ ತನ್ನ ವಾಣಿಜ್ಯ ಚಟುವಟಿಕೆಗಳು ಮತ್ತು ವ್ಯಾಲ್ಯೂ ಚೇನ್ ನಲ್ಲಿ ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡುತ್ತಿರುವ ಕಂಪನಿಯಾಗಿದೆ. ಈ ಸುಸ್ಥಿರ ಪ್ರಗತಿಯ ದೂರದೃಷ್ಟಿಯನ್ನಿಟ್ಟುಕೊಂಡೇ ಕಂಪನಿಯು ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಉತ್ಪನ್ನಗಳ ಪ್ಯಾಕಿಂಗ್ ಗೆ ಒಂದು ಬಳಸುವ ಪ್ಲಾಸ್ಟಿಕ್ ಅನ್ನು ಬಳಸುವ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದಿದೆ. ಈಗಾಗಲೇ ಶೇ.51 ರಷ್ಟು ಕಡಿಮೆ ಮಾಡಿದೆ. ಪ್ಯಾಕೇಜಿಂಗ್ ನಲ್ಲಿ ಬಳಸುವ ಉತ್ಪನ್ನಗಳನ್ನು ಸಂಪೂರ್ಣವಾಗಿ ಸಂಗ್ರಹಿಸುತ್ತಿದೆ. ಈ ಮೂಲಕ ಇಂತಹ ಉಪಕ್ರಮವನ್ನು ಜಾರಿಗೆ ತಂದಿರುವ ಭಾರತದ ಏಕೈಕ ಇ-ಕಾಮರ್ಸ್ ಕಂಪನಿ ಎನಿಸಿದೆ. ಇದಕ್ಕೆ ಇಪಿಆರ್ ಮಾನ್ಯತೆಯನ್ನೂ ನೀಡಲಾಗಿದೆ. ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ತನ್ನ ಕಾರ್ಯಾಚರಣೆಗಳಲ್ಲಿ ಪುನರ್ ನವೀಕರಿಸಬಹುದಾದ ಇಂಧನ ಬಳಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿದೆ. ಒಟ್ಟಾರೆ ವಿದ್ಯುತ್ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುವ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದೇ ರೀತಿ, ತನ್ನ ವೇರ್ ಹೌಸ್ ಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಪುನರ್ ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಕಂಪನಿಗೆ ಐಎಸ್ಒ 14001 ಪ್ರಮಾಣಪತ್ರವೂ ಲಭಿಸಿದೆ. ಇದಲ್ಲದೇ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದು ಕಂಪನಿಯ ನಿರ್ಣಾಯಕ ನಿರ್ಧಾರವಾಗಿದೆ. ಹೈದ್ರಾಬಾದ್ ನಲ್ಲಿರುವ ಫ್ಲಿಪ್ ಕಾರ್ಟ್ ನ ಡೇಟಾ ಸೆಂಟರ್ ಬಹುಪಾಲು ಪುನರ್ ನವೀಕರಿಸಬಹುದಾದ ಇಂಧನ ವ್ಯವಸ್ಥೆಯಿಂದಲೇ ಕಾರ್ಯನಿರ್ವಹಿಸುತ್ತಿದೆ ಮತ್ತು ಐಜಿಬಿಸಿಯ ಗ್ರೀನ್ ಬಿಲ್ಡಿಂಗ್ ಗೈಡ್ ಲೈನ್ಸ್ ಪ್ರಕಾರವೇ ತನ್ನೆಲ್ಲಾ ದೊಡ್ಡ ದೊಡ್ಡ ವೇರ್ ಹೌಸ್ ಗಳನ್ನು ನಿರ್ಮಾಣ ಮಾಡುತ್ತಿದೆ.