ಇತಿಹಾಸದಲ್ಲಿ ಇದೇ ಮೊದಲು; ಏಪ್ರಿಲ್ ತಿಂಗಳಲ್ಲಿ ಆಟೋಮೊಬೈಲ್ ಡಕೌಟ್!

Suvarna News   | Asianet News
Published : Apr 27, 2020, 07:50 PM IST
ಇತಿಹಾಸದಲ್ಲಿ ಇದೇ ಮೊದಲು; ಏಪ್ರಿಲ್ ತಿಂಗಳಲ್ಲಿ ಆಟೋಮೊಬೈಲ್ ಡಕೌಟ್!

ಸಾರಾಂಶ

ಕ್ರಿಕೆಟ್‌ನಲ್ಲಿ ಡಕೌಟ್ ಸಾಮಾನ್ಯ. ದಿಗ್ಗಜ ಬ್ಯಾಟ್ಸ್‌ಮನ್ ಕೂಡ ಡಕೌಟ್ ಆಗಿದ್ದಾರೆ. ಸತತ ಸೆಂಚುರಿ ಸಿಡಿಸಿ ಮರು ಪಂದ್ಯದಲ್ಲಿ ಶೂನ್ಯಕ್ಕೆ ಔಟಾದವರೂ ಇದ್ದಾರೆ. ಇದೀಗ ಮೊದಲ ಬಾರಿಗೆ ಆಟೋಮೊಬೈಲ್ ಕ್ಷೇತ್ರ ಡಕೌಟ್ ಆಗಿದೆ. ಆಟೋಮೊಬೈಲ್ ಇಂಡಸ್ಟ್ರಿ ಡಕೌಟ್ ಆಗಿದ್ದು ಹೇಗೆ? ಇಲ್ಲಿದೆ ವಿವರ.

ನವದೆಹಲಿ(ಏ.27): ಕ್ರಿಕೆಟ್‍ನಲ್ಲಿ ಸಾಮಾನ್ಯವಾಗಿರುವ ಡಕೌಟ್ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಭಾರತದಲ್ಲಿ ಆಟೋಮೊಬೈಲ್ ಇಂಡಸ್ಟ್ರಿ ಆರಂಭವಾದ ಬಳಿಕ ಯಾವತ್ತೂ ಡಕೌಟ್ ಆಗಿಲ್ಲ. ಇದೇ ಮೊದಲ ಬಾರಿಗೆ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಡಕೌಟ್ ಕುಖ್ಯಾತಿಗೆ ಗುರಿಯಾಗಿದೆ. ಇದಕ್ಕೆ ಕಾರಣ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್. ಮಾರ್ಚ್ 25 ರಿಂದ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಇದೀಗ ಈ ಲಾಕ್‌ಡೌನ್ ಮೇ. 3ರ ವರೆಗೆ ವಿಸ್ತರಣೆಯಾಗಲಿದೆ.

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ಕ್ರಾಸ್ಓವರ್ ಕಾರು; ಟಾಟಾ HBX ಮೇಲೆ ಎಲ್ಲರ ಚಿತ್ತ!

ಲಾಕ್‌ಡೌನ್ ಕೆಲಭಾಗದಲ್ಲಿ ಸಡಿಲಿಕೆಯಾದರೂ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಯಾವುದೇ ವಾಹನ ಮಾರಾಟವಾಗಿಲ್ಲ. ಇದೇ ಮೊದಲ ಬಾರಿಗೆ ತಿಂಗಳಲ್ಲಿ ಒಂದೇ ಒಂದು ವಾಹನ ಮಾರಾಟವಾಗದ ಅಪಖ್ಯಾತಿಗೆ ಗುರಿಯಾಗಿದೆ. ಈ ಮೂಲಕ ಆಟೋಮೊಬೈಲ್ ಕೂಡ ಮೊದಲ ಬಾರಿಗೆ ಡಕೌಟ್ ಆಗಿದೆ. ಮಾರಾಟ ಫಲಿಶಾಂತ್ ಶೂನ್ಯ.

 

ಪ್ರಧಾನಿ ನೇರಂದ್ರ ಮೋದಿ ಲಾಕ್‌ಡೌನ್ ಘೋಷಣೆಗೂ ಮೊದಲೇ ಆಟೋಮೊಬೈಲ್ ಉತ್ಪಾದನೆ ಸ್ಥಗಿತಗೊಂಡಿತ್ತು. ಮಾರ್ಚ್ ಆರಂಭಿಕ 2 ವಾರ ಭಾರತದಲ್ಲಿ ವಾಹನ ಮಾರಾಟ ಸರಾಗವಾಗಿ ನಡೆದಿತ್ತು. ಆದರೆ ಮಾರ್ಚ್ 3ನೇ ವಾರದಿಂದ ಕುಸಿತ ಕಂಡಿತು. ಮಾರ್ಚ್ 25 ರಿಂದ ಸಂಪೂರ್ಣ ಸ್ಥಗಿತಗೊಂಡಿತು. ಎಪ್ರಿಲ್ ತಿಂಗಳಲ್ಲಿ ಇದುವರೆಗೆ ಯಾವುದೇ ವಾಹನ ಮಾರಾಟವಾಗಿಲ್ಲ. 

ಲಾಕ್‌ಡೌನ್ ವೇಳೆ ನಿಮ್ಮ ಕಾರು ನಿರ್ವಹಣೆ ಹೇಗೆ? ಪಾಲಿಸಿ 5 ಸೂತ್ರ!

ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ಮಾರಾಟದ ಖಾತೆಯಲ್ಲಿ ತೆರೆಯಲು ವಿಫಲವಾಗಿದೆ. ಲಾಕ್‌ಡೌನ್ ಕಾರಣ ಯಾವ ವಾಹನಗಳು ಮಾರಾಟವಾಗಿಲ್ಲ. ಈ ರೀತಿ ಯಾವತ್ತೂ ಆಗಿಲ್ಲ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕ ಆಟೋಮೊಬೈಲ್ ಕ್ಷೇತ್ರ ಮತ್ತೆ ಪುಟಿದೇಳುವ ವಿಶ್ವಾಸವಿದೆ ಎಂದು ಮಾರುತಿ ಸುಜುಕಿ ಚೇರ್ಮೆನ್ ಆರ್‌ಸಿ ಭಾರ್ಗವ್ ಹೇಳಿದ್ದಾರೆ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ