ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!

By Suvarna News  |  First Published May 28, 2020, 4:19 PM IST

ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಭಾರತದ ಮುಖೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್ , ಲ್ಯಾಂಬೋರ್ಗಿನಿ ಅವೆಂಟಡೂರ್ ಸೇರಿದಂತೆ ಅತ್ಯಂತ ದುಬಾರಿ ಕಾರುಗಳು ಅಂಬಾನಿ ಬಳಿ ಇವೆ. ಇದೀಗ ಮತ್ತೆರೆಡು ದುಬಾರಿ ಕಾರು ಅಂಬಾನಿ ಮನ ಸೇರಿಕೊಂಡಿದೆ. 


ಮುಂಬೈ(ಮೇ.28): ಉದ್ಯಮಿ ಮುಖೇಶ್ ಅಂಬಾನಿಗೆ ದುಬಾರಿ ಕಾರುಗಳು ಹೊಸತಲ್ಲ. ಇಷ್ಟೇ ಅಲ್ಲ ಅಂಬಾನಿಗೆ ಈ ಕಾರುಗಳೆಲ್ಲಾ ದುಬಾರಿನೂ ಅಲ್ಲ. ಇದೀಗ ಅಂಬಾನಿ ಮತ್ತೆರಡು ಹೊಸ ಕಾರು ಖರೀದಿಸಿದ್ದಾರೆ. ಈ ಬಾರಿ 2 ಸೂಪರ್ ಕಾರು ಖರೀದಿಸಿದ್ದಾರೆ. ಫೆರಾರಿ 812 ಸೂಪರ್‌ಫಾಸ್ಟ್ ಹಾಗು ಮೆಕ್ಲೆರೆನ್ ಸ್ಪೈಡರ್ ಕಾರು ಖರೀದಿಸಿದ್ದಾರೆ. 

ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!

Tap to resize

Latest Videos

ಫೆರಾರಿ 812 ಸೂಪರ್‌ಫಾಸ್ಟ್ ಹಾಗೂ ಮೆಕ್ಲೆರೆನ್ ಸ್ಪೈಡರ್ ಕಾರುಗಳು ಅಂಬಾನಿ ಕಂಪನಿ ಹೆಸರಿನಲ್ಲಿ ರಿಜಿಸ್ಟ್ರೇಶನ್ ಮಾಡಲಾಗಿದೆ.  ನೂತನ ಕಾರುಗಳ ನಂಬರ್ 777. ಫೆರಾರಿ 812 ಕಾರು 6.5 ಲೀಟರ್, V12 ಎಂಜಿನ್ ಹೊಂದಿದ್ದು, 789 BHP ಪವರ್ ಹಾಗೂ 718NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

 

 
 
 
 
 
 
 
 
 
 
 
 
 

Almost A Year Old Mumbai's Only Ferrari 812 Superfast Finally Spotted Yday💣

A post shared by Ketan Mahadik (@ketanm01) on Aug 19, 2019 at 4:47am PDT

ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಈ ಕಾರಿನ ಗರಿಷ್ಠ ವೇಗ 340 ಕಿಲೋಮೀಟರ್ ಪ್ರತಿ ಗಂಟೆಗೆ. ಹೆಸರೇ ಹೇಳುವಂತೆ ಫೆರಾರಿ ಸೂಪರ್‌ಫಾಸ್ಟ್ ಕಾರು 0-100 ಕಿ.ಮೀ ವೇಗಕ್ಕೆ ತೆಗೆದುಕೊಳ್ಳುವ ಸಮಯ 2.9 ಸೆಕೆಂಡು ಮಾತ್ರ. ಇದರ ಬೆಲೆ 5.5 ಕೋಟಿ ರೂಪಾಯಿ(ಎಕ್ಸ್ ಶೋ ರೂಂ)

ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಮೆಕ್ಲೆರೆಡನ್ ಸ್ಪೈಡರ್ ಕಾರು 3.8 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ V8 ಎಂಜಿನ್ ಹೊಂದಿದ್ದು, 562 BHP ಪವರ್ ಹಾಗೂ 600 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 2 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).
 

click me!