ಸದ್ಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಸಮಯ ಹೆಚ್ಚು. ಸ್ಕೂಟರ್ ಅಥವಾ ಕಾರು ಶೇಕಡಾ 80 ರಷ್ಟು ಚಾರ್ಜ್ ಆಗಲು ಫಾಸ್ಟ್ ಚಾರ್ಜಿಂಗ್ ಮೂಲಕ 1 ಗಂಟೆ ತೆಗೆದುಕೊಳ್ಳುತ್ತದೆ. ಇನ್ನು ಸ್ಕೂಟರ್ ಹಾಗೂ ಬೈಕ್ ಮೈಲೇಜ್ 200 ದಾಟಿಲ್ಲ. ಇದೀಗ ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಇದು ಕೇವಲ 15ನಿಮಿಷದಲ್ಲಿ ಶೇಕಡ 80 ರಷ್ಟು ಚಾರ್ಜ್ ಆಗಲಿದೆ. ಇಷ್ಟೇ ಅಲ್ಲ 470 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಬೀಜಿಂಗ್(ಆ.06): ಎಲೆಕ್ಟ್ರಾನಿಕ್ ವಸ್ತುಗಳು, ತಂತ್ರಜ್ಞಾನಗಳು ಪ್ರತಿ ಕ್ಷಣ ಅಪ್‌ಡೇಟ್ ಆಗುತ್ತವೆ. ಇಂದು ಖರೀದಿಸಿದ ಮೊಬೈಲ್‌ಗಿಂತ ನಾಳೆ ಅದೆ ಬೆಲೆಗೆ ಮತ್ತಷ್ಟು ಫೀಚರ್ಸ್ ಹಾಗೂ ಆಕರ್ಷಕ ಮೊಬೈಲ್ ಲಭ್ಯವಾಗುತ್ತದೆ. ಇದೀಗ ಎಲೆಕ್ಟ್ರಿಕ್ ವಾಹನಗಳಲ್ಲು ಹೊಸ ಹೊಸ ತಂತ್ರಜ್ಞಾನ, ಅತ್ಯಾಧುನಿಕ ಫೀಚರ್ಸ್ ಸೇರಿಕೊಳ್ಳುತ್ತಿದೆ. ಹೀಗಾಗಿ ಗರಿಷ್ಠ ಮೈಲೇಜ್, ಕಡಿಮೆ ಚಾರ್ಜಿಂಗ್ ಸಮಯ ಸೇರಿದಂತೆ ಹಲವು ವಿಧಾನಗಳು ಬದಲಾಗಿದೆ. ಇದೀಗ ಚೀನಾದ ರಿವೋಕ್ ಮೋಟಾರ್‌ಸೈಕಲ್ ನೂತನ ರಿವೋಕ್ ಕ್ರೂಸರ್ ಬೈಕ್ ಬಿಡುಗಡೆ ಮಾಡುತ್ತಿದೆ.
2,999 ರೂ EMI ಸೇರಿದಂತೆ ಆಕರ್ಷಕ ಕೂಡುಗೆ; ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಇನ್ನೂ ಸುಲಭ!.
ಇವೋಕ್ 6061 ಕ್ರೂಸರ್ ಬೈಕ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಎಲ್ಲಾ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್‌ಗಳು ಶೇಕಡಾ 80 ರಷ್ಟು ಚಾರ್ಜ್ ಆಗಲು ಫಾಸ್ಟ್ ಚಾರ್ಜಿಂಗ್ ಮೂಲಕ ಕನಿಷ್ಠ 50 ನಿಮಿಷದಿಂದ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ರಿವೋಕ್ 6061 ಕ್ರೂಸರ್ ಬೈಕ್ ಕೇವಲ 15 ನಿಮಿಷ ತೆಗೆದುಕೊಳ್ಳಲಿದೆ.
ಫಾಸ್ಟ್ ಚಾರ್ಜಿಂಗ್ ಮಾತ್ರವಲ್ಲ, ಮೈಲೇಜ್‌ನಲ್ಲೂ ಇತರ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಹಿಂದಿಕ್ಕಿದೆ. ಸಂಪೂರ್ಣ ಚಾರ್ಜ್‌ಗೆ ಬರೋಬ್ಬರಿ 470 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ನೂತನ ರಿವೋಕ್ 6061 ಕ್ರೂಸರ್ ಬೈಕ್‌ನಲಲ್ಲಿ 120 kW ಲಿಕ್ವಿಡ್ ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. ಇದು 161 bhp ಪವರ್ ಸಾಮರ್ಥ್ಯ ಹೊಂದಿದೆ.
ಇವೋಕ್ 6061 ಕ್ರೂಸರ್ ಬೈಕ್ ಗರಿಷ್ಠ ಸ್ಪೀಡ್ 230 ಕಿ.ಮೀ ಪ್ರತಿ ಗಂಟೆಗೆ. ಇತರ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕಿಂತ ಹೆಚ್ಚಿನ ಮೈಲೇಜ್, ಫಾಸ್ಟ್ ಚಾರ್ಜಿಂಗ್ ಹಾಗೂ ಸ್ಪೀಡ್ ನೀಡಿರುವ ಇವೋಕ್ ಕ್ರೂಸರ್ ಬೈಕ್ ಬೆಲೆ 18.75 ಲಕ್ಷ ರೂಪಾಯಿ.