ಭಾರತದಲ್ಲಿ BS6 KTM 250 ಡ್ಯೂಕ್ ಬೈಕ್ ಬಿಡುಗಡೆ!

Published : Aug 05, 2020, 10:01 PM IST
ಭಾರತದಲ್ಲಿ BS6 KTM 250 ಡ್ಯೂಕ್ ಬೈಕ್ ಬಿಡುಗಡೆ!

ಸಾರಾಂಶ

BS6 ಎಂಜಿನ್ ಹಾಗೂ ಕೆಲ ಬದಲಾವಣೆಯೊಂದಿಗೆ KMT 250 ಡ್ಯೂಕ್ ಬೈಕ್ ಬಿಡುಗಡೆಯಾಗಿದೆ. KTM 1290 ಸೂಪರ್ ಡ್ಯೂಕ್ ಬೈಕ್‌ನಿಂದ ಮಾದರಿಯಾಗಿಟ್ಟಕೊಂಡು ನೂತನ 250 ಡ್ಯೂಕ್ ನಿರ್ಮಾಣ ಮಾಡಲಾಗಿದೆ. ಹೊಚ್ಚ ಹೊಸ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಆ.05): KMT ಭಾರತದಲ್ಲಿ ಹೊಸ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ. ಸ್ಪೋರ್ಟ್ಸ್ ಬೈಕ್‌ಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇದೀಗ BS6 KTM 250 ಡ್ಯೂಕ್ ಬೈಕ್ ಬಿಡುಗಡೆ ಮಾಡಲಾಗಿದೆ. ನೂತನ ಬೈಕ್ ಬೆಲೆ 2.09 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕೆಲ ಬದಲಾವಣೆ, ಹೆಚ್ಚುವರಿ ಫೀಚರ್ಸ್, ಗರಿಷ್ಠ ಸುರಕ್ಷತಾ ಫೀಚರ್ಸ್ ಸೇರಿದಂತೆ ಹಲವು ಫೀಚರ್ಸ್ ನೂತನ ಬೈಕ್‌ನಲ್ಲಿ ಲಭ್ಯವಿದೆ.

KTM 390 ಬೈಕ್ ಖರೀದಿ ಸುಲಭ, ಭರ್ಜರಿ ಆಫರ್ ಘೋಷಣೆ!.

LED ಹೆಡ್‌ಲೈಟ್ ಜೊತೆಗೆ ಡೇ ಟೈಮ್ ರನ್ನಿಂಗ್ ಲೈಟ್ BS6 KTM 250 ಡ್ಯೂಕ್ ಬೈಕ್‌ಗೆ ನೀಡಲಾಗಿದೆ. ಇನ್ನು ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ನೂತನ ಬೈಕ್ 5,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.

ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ ಮೇಡ್ ಇನ್ ಇಂಡಿಯಾ KTM ಡ್ಯೂಕ್ 200!

250 ಡ್ಯೂಕ್ BS6 ಎಂಜಿನ್ 248.8 cc ಸಿಲಿಂಗಲ್ ಸಿಲಿಂಡರ್ ಹೊಂದಿದೆ.  29.6 bhp ಪವರ್ ಹಾಗೂ  24 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಸುಜುಕಿ ಜಿಕ್ಸರ್ 250, ಹಸ್ಕವರ್ನಾ 240 ಟ್ವಿನ್ಸ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ