ಬಾಸ್ ಫೆರಾರಿ ಕಾರಿನ ಮೇಲೆ ಟ್ರಕ್ ಹತ್ತಿಸಿ ಸೇಡು ತೀರಿಸಿಕೊಂಡ ಉದ್ಯೋಗಿ!

By Suvarna News  |  First Published May 10, 2020, 6:25 PM IST

ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗ ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇನ್ನು ಉದ್ಯೋಗ ಗಿಟ್ಟಿಸಿಕೊಳ್ಳುವುದು ಅದಕ್ಕೂ ದೊಡ್ಡ ಸವಾಲು. ಹೀಗಿರುವಾಗ ಇಲ್ಲೊಬ್ಬ ರೊಚ್ಚಿಗೆದ್ದ ಉದ್ಯೋಗಿ ಕೆಲಸಕ್ಕೆ ಸೇರಿದ ನಾಲ್ಕೇ ದಿನದಲ್ಲಿ ಬಾಸ್ ಫೆರಾರಿ ಕಾರಿನ ಮೇಲೆ ಟ್ರಕ್ ಹತ್ತಿಸಿ ಸೇಡು ತೀರಿಸಿಕೊಂಡಿದ್ದಾನೆ.


ಚಿಕಾಗೋ(ಮೇ.10): ಕೆಲವೊಮ್ಮೆ ಉದ್ಯೋಗಿಗಳಿಗೆ ಬುದ್ದಿ ಹೇಳಿದರೆ ಅಥವಾ ತಪ್ಪನ್ನು ತೋರಿಸಿದರೆ ರೊಚ್ಚಿಗೆದ್ದುಬಿಡುತ್ತಾರೆ. ಹೀಗೆ ಚಿಕಾಗೋದ ಕಂಪನಿಯೊಂದರ ಉದ್ಯೋಗಿ, ಬಾಸ್ ಮಾತಿಗೆ ರೊಚ್ಚಿಗೆದ್ದು ಅವಾಂತರ ಸೃಷ್ಟಿಸಿದ್ದಾನೆ. ಈತನ ಆಟಾಟೋಪದಿಂದ ಇದೀಗ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

ಚಲಿಸುತ್ತಿದ್ದ ಮದುಮಗನ i20 ಕಾರಿನಲ್ಲಿ ಬೆಂಕಿ, ಪೊಲೀಸರ ನೆರವಿನಿಂದ ಮಂಟಪ ತಲುಪಿದ ವರ!.

Latest Videos

undefined

ಕಂಪನಿಗೆ ಚಾಲಕನ ಅವಶ್ಯಕೆ ಇತ್ತು. ಹೀಗಾಗಿ ಸಂದರ್ಶನದ ಮೂಲಕ ಒರ್ವ ವ್ಯಕ್ತಿಯನ್ನು ಆಯ್ಕೆ ಮಾಡಿತು. ಆತ ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಕೈಗೆ ಸಿಗದೆ ಹೆಚ್ಚಿನ ಸಮಯ ವಿಶ್ರಾಂತಿಯಲ್ಲೇ ಕಳೆಯಲು ಆರಂಭಿಸಿದೆ. 4 ದಿನದಲ್ಲಿ ಆತ ಕೇವಲ ಒಂದೇ ಒಂದು ಟ್ರಿಪ್ ಹೋಗಿದ್ದಾನೆ. ಇನ್ನು ಸೂಚಿಸಿರುವ ಟ್ರಿಪ್‌ಗಳೆಲ್ಲವನ್ನೂ ರದ್ದು ಮಾಡಿ ತಾನು ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಾ ಕಳೆದಿದ್ದಾನೆ.

ಚಾಲಕನ ಕುರಿತು ಅಸಮಧಾನ ವ್ಯಕ್ತಪಡಿಸಿದ ಕಂಪನಿ ಬಾಸ್ ನೇರವಾಗಿ ಚಾಲಕನ ಕರೆದು ಉದ್ಯೋಗದಿಂದ ಅಮಾನತು ಮಾಡಿದರು. ತನ್ನನ್ನು ಉದ್ಯೋಗದಿಂದ ಸಸ್ಪೆಂಡ್ ಮಾಡಿದ ಕಾರಣಕ್ಕೆ ರೊಚ್ಚಿಗೆದ್ದ ಚಾಲಕ, ನಿಮ್ಮ ನಿರ್ಧಾರ ಬದಲಿಸಿ ಇಲ್ಲದಿದ್ದರೆ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾನೆ.

ಭಾರತಕ್ಕೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!

ಕಂಪನಿ ತೊರೆಯುವಾಗ ಈತ ಬಾಸ್ ಬಳಿ ಬಂದು ಫೆರಾರಿ GTC4Lusso ಕಾರು ನಿಮ್ಮದಲ್ಲವೇ ಎಂದು ಕೇಳಿದ್ದಾನೆ. ಇದಕ್ಕೆ ಬಾಸ್ ಹೌದು, ಆದರೆ ಸಾಮಾನ್ಯ ಕಾರಿನಲ್ಲಿ ಒಂದು ಟ್ರಿಪ್ ತೆರಳಲು 4 ದಿನ ತೆಗೆದುಕೊಂಡರೆ ನಿನಗೆ ಫೆರಾರಿಯಾದರೇನು? ಇತರ ಕಾರಾದರೇನು? ನಿನ್ನ ಸೇವೆ ಸಾಕು ಎಂದಿದ್ದಾರೆ. ಕಂಪನಿಯಿಂದ ತೆರಳಿದ ಚಾಲಕ, ಕೆಲ ಹೊತ್ತಲ್ಲಿ ಟ್ರಕ್ ಚಾಲನೆ ಮಾಡಿಕೊಂಡು ವಾಪಾಸ್ಸಾಗಿದ್ದಾನೆ.

ಕಂಪನಿ ಬಾಸ್‌ಗೆ ಕರೆ ಮಾಡಿ ನಿಮ್ಮ ಫೆರಾರಿ ಕಾರಿನ ಪರಿಸ್ಥಿತಿ ನೋಡಿ ಎಂದು ಹೇಳಿ ನೇರವಾಗಿ ಟ್ರಕ್‌ನ್ನು ಫೆರಾರಿ ಕಾರಿನ ಮೇಲೆ ಹತ್ತಿಸಿದ್ದಾನೆ. ತಕ್ಷಣವೇ ಬಾಸ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಇತ್ತ ಪೊಲೀಸರು ಆಗಮಿಸಿ ಚಾಲಕನನ್ನು ಆರಸ್ಟ್ ಮಾಡಿದ್ದಾರೆ. 

click me!