ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡಲಿದೆ ಡುಕಾಟಿ ಇಂಡಿಯಾ!

By Web Desk  |  First Published Dec 14, 2018, 6:51 PM IST

ಡುಕಾಟಿ ಬೈಕ್ ಖರೀದಿಸಲು ತುದಿಗಾಲಲ್ಲಿ ನಿಂತಿರುವ ಹಲವರಿಗೆ ತಮ್ಮ ಕನಸು ನನಸು ಮಾಡಲು ಕಂಪೆನಿ ಮುಂದಾಗಿದೆ. ಕಂಪೆನಿ ಇದೀಗ ಡುಕಾಟಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡಲು ಡುಕಾಟಿ ಮುಂದಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
 


ನವದೆಹಲಿ(ಡಿ.14): ಡುಕಾಟಿ ಬೈಕ್ ಖರೀದಿಸಬೇಕು ಅನ್ನೋ ಹಲವರ ಕನಸು ನನಸಾಗಿಸಲು ಡುಕಾಟಿ ಇಂಡಿಯಾ ಮುಂದಾಗಿದೆ.  ಇದೀಗ ಡುಕಾಟಿ ಇಂಡಿಯಾ ಕಂಪೆನಿ ಸೆಕೆಂಡ್ ಹ್ಯಾಂಡ್ ಡುಕಾಟಿ  ಬೈಕ್ ಮಾರಾಟ ಮಾಡಲು ಮುಂದಾಗಿದೆ. 

Tap to resize

Latest Videos

undefined

ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!

ಡುಕಾಟಿ ಇಂಡಿಯಾ ಮೆಕಾನಿಕ್‌ಗಳು ಪರಿಶೀಲಿಸಿದ, 35 ಬಾರಿ ವಿವಿಧ ರೀತಿಯಲ್ಲಿ ಚೆಕ್ ಮಾಡಿ, ಯಾವುದೇ ಸಮಸ್ಯೆ ಇಲ್ಲದ ಬಳಕೆ ಮಾಡಿದ ಬೈಕ್‌ಗಳನ್ನ ಮಾರಾಟ ಮಾಡಲು ಮುಂದಾಗಿದೆ. ಇದು ಡುಕಾಟಿ ಕಂಪೆನಿಯ ಅಧೀಕೃತ ಸೆಕೆಂಡ್ ಮಾರಾಟ ಮಳಿಗೆಯಾಗಿದೆ.

ಇದನ್ನೂ ಓದಿ: ಕಾರಿನಲ್ಲಿ ಮಾಡಬೇಡಿ ಈ 6 ತಪ್ಪು- ಆಗಬಹುದು ಪ್ರಾಣಕ್ಕೆ ಕುತ್ತು!

50,000 ಕೀ.ಮಿ ಗಿಂತ ಕಡಿಮೆ ಓಡಿರುವ ಬೈಕ್‌ಗಳು ಇಲ್ಲಿ ಸಿಗಲಿದೆ. ಹೀಗಾಗಿ ಸೆಕೆಂಡ್ ಹ್ಯಾಂಡ್ ಡುಕಾಟಿ ಬೈಕ್ ಯಾವುದೇ ಸಮಸ್ಯೆ ಇಲ್ಲದೆ ಗ್ರಾಹಕರ ಕೈಸೇರಲಿದೆ. ಡುಕಾಟಿ ಸರ್ಟಿಫೈಡ್ ಮಾಡಿದ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವ ಗ್ರಾಹಕರಿಗೆ 12 ತಿಂಗಳು ವಾರೆಂಟಿ ಸೇರಿದಂತೆ ಎಲ್ಲಾ ಪೇಪರ್ ವರ್ಕ್‌ಗಳು ಡುಕಾಟಿ ನೀಡಲಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!