Dual Mode Vehicle: ರಸ್ತೆ ಮತ್ತು ರೈಲು ಹಳಿಗಳೆರಡರ ಮೇಲೂ ಓಡಲಿದೆ ಜಪಾನ್‌ನ ಮಿನಿ ಬಸ್!‌

By Suvarna News  |  First Published Dec 26, 2021, 3:15 PM IST

ಜಪಾನ್‌ನ  ಡ್ಯುಯಲ್ ಮೋಡ್ ವಾಹನದಲ್ಲಿ ಒಂದು ಬಾರಿಗೆ 21 ಪ್ರಯಾಣಿಕರು ಪ್ರಯಾಣಿಸಬಹುದು. ಇದು ರೈಲು ಹಳಿಗಳಲ್ಲಿ ಗಂಟೆಗೆ 60 ಕಿಮೀ ವೇಗವನ್ನು ನೀಡುತ್ತದೆ, ಆದರೆ ಆನ್-ರೋಡ್ ಈ ವಾಹನವು ಗಂಟೆಗೆ ಸುಮಾರು 100 ಕಿಮೀ ವೇಗವನ್ನು ನೀಡುತ್ತದೆ. 


Auto Desk: ಜಪಾನ್ ಹೊಸ ತಂತ್ರಜ್ಞಾನಕ್ಕೆ (Technology) ಹೆಸರುವಾಸಿಯಾಗಿದೆ. ಜಪಾನ್‌ನ ನೆರವಿನಿಂದ ಭಾರತದಲ್ಲಿ ಬುಲೆಟ್ ಟ್ರೈನ್‌ಗೆ ಅಡಿಪಾಯ ಹಾಕಲಾಗುತ್ತಿದೆ. ಅದೇ ಸಮಯದಲ್ಲಿ, ಈಗ ಈ ದೇಶವು ವಿಶ್ವದ ಮೊದಲ ಡ್ಯುಯಲ್ ಮೋಡ್ ವೆಹಿಕಲ್ (Dual Mode Vehicle) ಅನ್ನು ಸಿದ್ಧಪಡಿಸಿದೆ. ಈ ವಾಹನವನ್ನು ರಸ್ತೆ ಮತ್ತು ರೈಲು ಹಳಿಗಳೆರಡರಲ್ಲೂ ಓಡಿಸಬಹುದು. ಈ ರೈಲ್ಬಸ್ (Rail Bus) ಅನ್ನು ಡಿಸೆಂಬರ್ 25 ರ ಶನಿವಾರದಂದು ಬಿಡುಗಡೆ ಮಾಡಲಾಗಿದೆ. ಇದು ಮಿನಿಬಸ್‌ನ ಗಾತ್ರದಲ್ಲಿದ್ದು, ಈ ಬಸ್ ರಸ್ತೆಗಳಲ್ಲಿ ಓಡುವಾಗ, ಇದು ರಬ್ಬರ್ ಟೈರ್‌ಗಳನ್ನು ಬಳಸುತ್ತದೆ. ರೈಲ್ವೇ ಹಳಿಯಲ್ಲಿ ಈ ಬಸ್ ಸ್ಟೀಲ್ ಚಕ್ರ ಬಳಸಿ ಚಲಿಸಲಿದೆ. 

100 km/h ವೇಗ

Tap to resize

Latest Videos

undefined

ಸಾರಿಗೆ ಸಾಧನಗಳು ಕಡಿಮೆ ಇರುವ ಸ್ಥಳಗಳಲ್ಲಿ ಈ ವಾಹನವನ್ನು ಬಳಸಬಹುದು. ರಸ್ತೆಗಳು ಮತ್ತು ರೈಲು ಹಳಿಗಳನ್ನು ಸಮಾನಾಂತರವಾಗಿ ಹಾಕುವ ಸ್ಥಳಗಳಿಗೆ ಈ ಡ್ಯುಯಲ್ ಮೋಡ್ ವಾಹನವು ತುಂಬಾ ಸೂಕ್ತವಾಗಿದೆ. ಡ್ಯುಯಲ್ ಮೋಡ್ ವಾಹನವನ್ನು ನಿರ್ವಹಿಸುವ ಆಸಾ ಕೋಸ್ಟ್ ರೈಲ್ವೆ (Asa Coast) ಕಂಪನಿಯ ಮುಖ್ಯಸ್ಥರು, ರಸ್ತೆ ವ್ಯವಸ್ಥೆಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲದೆ ಬಳಸಲು ಸುಲಭವಾಗಿದೆ ಎಂದು ಹೇಳಿದ್ದಾರೆ. 

ಈ ಡ್ಯುಯಲ್ ಮೋಡ್ ವಾಹನದಲ್ಲಿ ಒಂದು ಬಾರಿಗೆ 21 ಪ್ರಯಾಣಿಕರು ಪ್ರಯಾಣಿಸಬಹುದು. ಇದು ರೈಲು ಹಳಿಗಳಲ್ಲಿ ಗಂಟೆಗೆ 60 ಕಿಮೀ ವೇಗವನ್ನು ನೀಡುತ್ತದೆ, ಆದರೆ ಆನ್-ರೋಡ್ (On Road) ಈ ವಾಹನವು ಗಂಟೆಗೆ ಸುಮಾರು 100 ಕಿಮೀ ವೇಗವನ್ನು ನೀಡುತ್ತದೆ. 

ಜಪಾನ್‌ನ ಸಣ್ಣ ಪಟ್ಟಣಗಳನ್ನು ಸಂಪರ್ಕಿಸುತ್ತದೆ!

ಡ್ಯುಯಲ್ ಮೋಡ್ ವೆಹಿಕಲ್ ಮಿನಿ ಬಸ್ ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಈ ಮಿನಿ ಬಸ್‌ಗಳು ಡೀಸೆಲ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಕಂಪನಿಯು ಇದನ್ನು ದಕ್ಷಿಣ ಜಪಾನ್‌ನ ಶಿಕೋಕು ದ್ವೀಪದ ಕರಾವಳಿಯಲ್ಲಿ ನಿರ್ವಹಿಸುತ್ತಿದೆ. ಈ ಮಿನಿಬಸ್ ಕಮ್ ರೈಲುಗಳು‌ (Mini Bus Cum Railway)  ಇಲ್ಲಿನ ಅನೇಕ ಸಣ್ಣ ಪಟ್ಟಣಗಳನ್ನು ಸಂಪರ್ಕಿಸುತ್ತವೆ. ಇದೆ. ಈ ಯೋಜನೆಯು ಜಪಾನ್‌ನ ಟೊಕುಶಿಮಾ ಪ್ರದೇಶದ ಜನರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಕಂಪನಿಯ ಸಿಇಒ ಭರವಸೆ ವ್ಯಕ್ತಪಡಿಸಿದ್ದಾರೆ. ಜಪಾನ್‌ನ ಈ ಹೊಸ ಮಿನಿಬಸ್‌ಗಳು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿವೆ. 

"ಇದು (DMV) ಸ್ಥಳೀಯರನ್ನು ಬಸ್ ಆಗ ತಲುಪಬಹುದು ಮತ್ತು ಅವರನ್ನು ರೈಲ್ವೆಗೆ ಕೊಂಡೊಯ್ಯಬಹುದು" ಎಂದು ಸಿಇಒ ಶಿಗೆಕಿ ಮಿಯುರಾ (Shigeki Miura) ಶುಕ್ರವಾರ ತಿಳಿಸಿದ್ದಾರೆ. "ವಿಶೇಷವಾಗಿ ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ (Rural Areas) , ಇದು ಸಾರ್ವಜನಿಕ ಸಾರಿಗೆಯ ಉತ್ತಮ ರೂಪವಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಜತೆಗೆ ಈ ಯೋಜನೆಯು ಜಪಾನ್‌ನ ಸುತ್ತಮುತ್ತಲಿನ ರೈಲ್ವೆ ಅಭಿಮಾನಿಗಳನ್ನು ಜಪಾನ್ ಭೇಟಿ ಮಾಡಲು ಉತ್ತೇಜಿಸುತ್ತಿದೆ ಎಂದು ಮಿಯುರಾ ತಿಳಿಸಿದ್ದಾರೆ

ಇದನ್ನೂ ಓದಿ:

1) Flex Fuel Engines: ದೇಶವನ್ನು ಪೆಟ್ರೋಲ್‌, ಡೀಸೆಲ್ ಬಳಕೆಯಿಂದ ಮುಕ್ತ ಮಾಡಲು ಗಡ್ಕರಿ‌ ಹೊಸ ಪ್ಲ್ಯಾನ್!

2) Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

3) Ioniq EVs acceleration issue ಐಯೋನಿಕ್ ಇವಿಯಲ್ಲಿ ಸಮಸ್ಯೆ, 2,500 ಕಾರು ಹಿಂಪಡೆದ ಹ್ಯುಂಡೈ!

click me!