ಮಗಳ ಮದುವೆಗೆ ಸಗಣಿ ಪೈಂಟ್ ಕಾರು; ಸಮಾರಂಭದಲ್ಲಿ ಅಪ್ಪ ರಾಕಿಂಗ್!

By Suvarna News  |  First Published Jan 9, 2020, 3:43 PM IST

ಮದುವೆ ಸ್ಮರಣೀಯವಾಗಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಾರೆ. ಅದರಲ್ಲೂ ಅಪ್ಪಂದಿರು ತಮ್ಮ ಮಗಳ ಮದುವೆಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅತ್ಯಂತ ದುಬಾರಿ ಕಾರಿನ ಮೂಲಕ, ಹೆಲಿಕಾಪ್ಟರ್ ಮೂಲಕ, ಆನೆ, ಕುದುರೆ ಮೂಲಕ ಮಗಳನ್ನು ಮಂಟಪಕ್ಕೆ ಕರೆತಂದ ಊದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ತನ್ನ ಮಗಳನ್ನು ಸಗಣಿ ಮೆತ್ತಿದ ಕಾರಿನಲ್ಲಿ ಮಂಟಪಕ್ಕೆ ಕರೆ ತಂದ ಘಟನೆ ನಡೆದಿದೆ. ಇದರ ಕಾರಣವೂ ಅಷ್ಟೇ ಇಂಟ್ರೆಸ್ಟಿಂಗ್.


ಮುಂಬೈ(ಜ.09): ಭಾರತದಲ್ಲಿ ಮದುವೆ ಸಮಾರಂಭಕ್ಕೆ ಸಾಲ ಮಾಡಿಯಾದರೂ ಖರ್ಚು ಮಾಡುತ್ತಾರೆ. ತನ್ನ ಆದಾಯಕ್ಕಿಂತ ದುಪ್ಪಟ್ಟು ಹಣವನ್ನು ಖರ್ಚು ಮಾಡಿ ಮದುವೆ ಮಾಡಿದ ಸಾಕಷ್ಟು ಊದಾಹರಣೆಗಳಿವೆ. ಇಷ್ಟೇ ಅಲ್ಲ ಕಡಿಮೆ ಖರ್ಚಿನಲ್ಲಿ ಮದುವೆಯನ್ನು ಸ್ಮರಣೀಯವಾಗಿಸಿದವರು ಇದ್ದಾರೆ. ಇದೇ ರೀತಿ ತನ್ನ ಮಗಳ ಮದುವೆಯನ್ನು ದೇಶದಲ್ಲೇ ಗಮನಸೆಳೆದಿರುವಂತೆ ಮಾಡಿದ ಘಟನೆ ನಡೆದಿದೆ.

ಇದನ್ನೂ ಓದಿ: ಮಾಲೀಕನ ಹೊಸ ಐಡಿಯಾ-ಟೊಯೊಟಾ ಕಾರಿಗೆ ಸೆಗಣಿ ಪೈಂಟ್!

Tap to resize

Latest Videos

ಕೋಲ್ಹಾಪುರದ ವೈದ್ಯ ನವನಾಥ್ ದುಧಾಲ್ ತನ್ನ ಮಗಳ ಮದುವೆಗೆ ಹೊಸ ಐಡಿಯಾ ಮಾಡಿದ್ದಾರೆ. ಮಗಳನ್ನು ಮಂಟಪಕ್ಕೆ ಕರೆ ತರಲು ನವನಾಥ್ ಇನೋವಾ ಕಾರಿಗೆ ಸಂಪೂರ್ಣ ಸಗಣಿ ಮೆತ್ತಿದ್ದಾರೆ. ಸೆಗಣಿಯಿಂದ ಇನೋವಾ ಕಾರಿನ ಲುಕ್ ಬದಲಾಗಿದೆ. ಸಗಣಿ ಪೈಂಟ್ ಬಳಿಕ ಕಾರಿಗೆ ಅಲಂಕಾರ ಮಾಡಲಾಗಿದೆ. ಇದೇ ಕಾರಿನಲ್ಲಿ ಪುತ್ರಿಯನ್ನು ಮಂಟಪಕ್ಕೆ ಕರೆತರಲಾಗಿದೆ.

ಇದನ್ನೂ ಓದಿ: ಮಾಲೀಕನ ಹೊಸ ಐಡಿಯಾ-ಟೊಯೊಟಾ ಕಾರಿಗೆ ಸೆಗಣಿ ಪೈಂಟ್!

ನವನಾಥ್ ಹೊಸ ಐಡಿಯಾ ಮದುವೆ ಸಮಾರಂಭದಲ್ಲಿ ಎಲ್ಲರ ಗಮನಸೆಳೆದಿದೆ. ಇಷ್ಟೇ ಅಲ್ಲ ನವನಾಥ್ ಇದಕ್ಕೆ ಕಾರಣವನ್ನೂ ಬಹಿರಂಗ ಪಡಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ನವನಾಥ್ ಸಗಣಿ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಅನ್ನೋದನ್ನು ಅರಿತಿದ್ದಾರೆ. ಸೆಗಣಿಯಿಂದ ಕ್ಯಾನ್ಸರ್ ಕೂಡ ಗುಣವಾಗಲಿದೆ ಅನ್ನೋದು ನವನಾಥ್ ಅವರ ಅಭಿಪ್ರಾಯ.

 

ಇದನ್ನೂ ಓದಿ:ಫಾಸ್ಟ್ ಟ್ಯಾಗ್ ಖಾತೆಯಿಂದ ಹೋಯ್ತು 600 ರೂ; ಯಾರಿಗೆ ಹೇಳೋಣ ಪ್ಲಾಬ್ಲೆಮ್?

ಗ್ಲೋಬಲ್ ವಾರ್ಮಿಂಗ್ ಪರಿಣಾಮ ಸೆಗಣಿ ಪೈಂಟ್ ಕಾರು ಹೆಚ್ಚು ಪರಿಣಾಮಕಾರಿಯಾಗಲಿದೆ. ಈ ಕಾರಿನೊಳಗೆ ತಾಪಮಾನ ಕಡಿಮೆ ಇರಲಿದೆ. ಬೇಕಾಬಿಟ್ಟಿ ಕಾರಿನಲ್ಲಿ ಎಸಿ ಬಳಸಬೇಕಿಲ್ಲ. ಇದರಿಂದ ಪರಿಸರಕ್ಕೆ ಪೂರಕವಾಗಿದೆ. ಸಗಣಿ ಪೈಂಟ್ ಕಾರಿಗೆ ಮೆತ್ತಿಸುವುದರಿಂದ ಕಾರನ್ನು ಪದೇ ಪದೇ ತೊಳೆದು ನೀರು ಪೋಲು ಮಾಡುವುದು ತಪ್ಪುತ್ತದೆ ಎಂದು ನವನಾಥ್ ಹೇಳಿದ್ದಾರೆ. 
 

click me!