ಚಲಿಸುತ್ತಿದ್ದ ಮದುಮಗನ i20 ಕಾರಿನಲ್ಲಿ ಬೆಂಕಿ, ಪೊಲೀಸರ ನೆರವಿನಿಂದ ಮಂಟಪ ತಲುಪಿದ ವರ!

Suvarna News   | Asianet News
Published : May 04, 2020, 03:47 PM IST
ಚಲಿಸುತ್ತಿದ್ದ ಮದುಮಗನ  i20 ಕಾರಿನಲ್ಲಿ ಬೆಂಕಿ, ಪೊಲೀಸರ ನೆರವಿನಿಂದ ಮಂಟಪ ತಲುಪಿದ ವರ!

ಸಾರಾಂಶ

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬಹುತೇಕ ಮದುವೆ ಸಮಾರಂಭ ರದ್ದಾಗಿದ್ದರೆ, ಇನ್ನೂ ಕೆಲವು ಮದುವೆ ಕಾರ್ಯಕ್ರಮಗಳು ಸರ್ಕಾರದ ನಿಯಮದಂತೆ ಅತ್ಯಂತ ಸರಳವಾಗಿ ಆಯೋಜಿಸಲಾಗುತ್ತಿದೆ. ಹೀಗೆ ಸರಳ ವಿವಾಹಕ್ಕೆ ತೆರಳುತ್ತಿದ್ದ ಮದುಮಗನ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಆದರೆ ಪೊಲೀಸರ ನೆರವಿನಿಂದ ಪ್ರಾಣಾಪಾಯದಿಂದ ವರ ಪಾರಾಗಿದ್ದಾನೆ. ಮಹೂರ್ತ ಸಮಯ ಹಾಗೂ ಕಾರಿನ ಬೆಂಕಿ ಕುರಿತ ರೋಚಕ ಮಾಹಿತಿ ಇಲ್ಲಿದೆ.  

ದೆಹಲಿ(ಮೇ.04):  ಪೋಷಕರು ಮಗನ ಮದುವೆಗೆ ಹರಸಾಹಸ ಪಟ್ಟಿದ್ದರು. ಎಲ್ಲವೂ ಕೂಡಿ ಬಂದಿತ್ತು. ದಿನಾಂಕ ಫಿಕ್ಸ್ ಮಾಡಿದರು. ಎಲ್ಲವೂ ಅಂತಿಮವಾಗಿತ್ತು. ಆದರೆ ಕೊರೋನಾ ವೈರಸ್ ಕಾರಣ ಸಮಾರಂಭಕ್ಕೆ ಬ್ರೇಕ್ ಹಾಕಲು ಸರ್ಕಾರ ಸೂಚಿಸಿತ್ತು. ಆದರೆ ಮುಹೂರ್ತ ಸಮಯ ತಪ್ಪಿದರೆ ಮತ್ತೆ ಮದುವೆ ಭಾಗ್ಯ  ತಡವಾಗಿದೆ ಅನ್ನೋ ಮಾತಿನಿಂದ ನಿಗದಿತ ದಿನಾಂಕದಲ್ಲೇ ಮದುವೆ ಮಾಡಲು ಎರಡು ಮನೆಯವರು ಒಪ್ಪಿದರು. ಇದಕ್ಕಾಗಿ ಪೊಲೀಸರ ಬಳಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ಪರವಾನಗಿಯನ್ನು ಪಡೆದಿದ್ದರು. ಮದುವೆ ದಿನ ವರ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾಗಿದೆ. 

ನೌಕರರಿಗೆ ಸಂಪೂರ್ಣ ವೇತನ, ಯಾವುದೇ ಕಡಿತವಿಲ್ಲ ಎಂದ ಬಜಾಜ್!...

ದೆಹಲಿಯ ಸಿತಾರ ವಲಯದ ವರ ಭೂಪೇಂದ್ರ ತನ್ನ ಐ20 ಕಾರಿನಲ್ಲಿ ಮತ್ತೊಬ್ಬನ ಜೊತೆ ಮಂಟಪಕ್ಕೆ ತೆರಳುತ್ತಿದ್ದ. ಲಾಕ್‌ಡೌನ್ ಕಾರಣ ಹೆಚ್ಚಿನವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಂತಿಲ್ಲ. ಇಷ್ಟೇ ಅಲ್ಲ ವಿವಾಹದಲ್ಲೂ ಹೆಚ್ಚಿನ ಜನರು ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ಇಬ್ಬರೇ ತೆರಳುತ್ತಿದ್ದರು. ಲಾಕ್‌ಡೌನ್ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರು ಕಾರಿನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಕಾರನ್ನು ಫಾಲೋ ಮಾಡಿ ನಿಲ್ಲಿಸಿದ್ದಾರೆ.

ಹೊತ್ತಿ ಉರಿದ ಬೆಂಗಳೂರಿನ ಬೈಕ್ ಶೋ ರೂಂ; ಕೋಟಿ ಕೋಟಿ ನಷ್ಟ!.

ಬಳಿಕ ಇಬ್ಬರನ್ನು ಕಾರಿನಿಂದ ಕೆಳಿಗಿಳಿಸಿದ ಬೆನ್ನಲ್ಲೇ ಕಾರು ಧಗ್‌ನೇ ಹೊತ್ತಿಕೊಂಡಿದೆ. ಎರಡು ನಿಮಿಷ ತಡವಾಗಿದ್ದರೂ ಇಬ್ಬರ ಪ್ರಾಣಕ್ಕೆ ಅಪಾಯವಿತ್ತು. ಆದರೆ ರಸ್ತೆಯಲ್ಲಿ ವಾಹನ ಓಡಾಟ ಇಲ್ಲದ ಕಾರಣ ಕಾರಿನಿಂದ ಹೊಗೆ ಬರುತ್ತಿರುವುದನ್ನು ಪೊಲೀಸರ ಪತ್ತೆ ಹಚ್ಚಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಹೀಗಾಗಿ ಭೋಪೇಂದ್ರ ಹಾಗೂ ಮತ್ತೋರ್ವ ಪ್ರಾಣ ಉಳಿದಿದೆ. ಆದರೆ ಕಾರು ಬಹುತೇಕ ಸುಟ್ಟು ಕರಕಲಾಗಿದೆ. ಇತ್ತ ಪೊಲೀಸರು ಚೇಸಿಂಗ್ ವೇಳೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಹೀಗಾಗಿ ಕೆಲ ನಿಮಿಷಗಳಲ್ಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ.

 

ಪೊಲೀಸರ ಭೂಪೇಂದ್ರನ ಡ್ರೆಸ್ ಗಮನಿಸಿ ವಿಚಾರಿಸಿದ್ದಾರೆ. ಈ ವೇಳೆ ಭೂಪೇಂದ್ರ ಮದುವೆ ಇರುವುದಾಗಿ ಹೇಳಿದ್ದಾರೆ. ಲಾಕ್‌ಡೌನ್ ಕಾರಣ ಯಾವ ಕಾರುಗಳು ಲಭ್ಯವಿಲ್ಲ. ಹೀಗಾಗಿ ಪೊಲೀಸರು ತಮ್ಮ ಜೀಪ್‌ನಲ್ಲಿ ಮದುಮಗನನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಿದ್ದಾರೆ. ಮುಹೂರ್ತ ಸಮಯಕ್ಕೆ ಪೊಲೀಸರು ಮದುಮಗನನ್ನು ಮಂಟಪಕ್ಕೆ ತಲುಪಿಸಿದ್ದಾರೆ. ಈ ವೇಳೆ ಮದುವೆ ಆಗಮಿಸಿದ್ದ ಆಪ್ತ ಕುಟುಂಬಸ್ಥರಿಗೆ ಅಚ್ಚರಿಯಾಗಿದೆ. ಕಾರಣ ಪೊಲೀಸರೊಂದಿಗೆ ಮದುಮಗ ಆಗಮಿಸುತ್ತಿರುವುದನ್ನು ನೋಡಿದ ಹುಡುಗಿಯ ಸಂಬಂಧಿಕರು ಬೆಚ್ಚಿ ಬಿದ್ದಿದ್ದಾರೆ.  ಮದುವೆ ನಿಲ್ಲಿಸುವ ಪ್ರಯತ್ನಕ್ಕೆ ಹುಡುಗನೇ ಕೈಹಾಕಿದ್ದಾನೇ ಎಂದು ಭಾವಿಸಿದ್ದಾರೆ. ಆದರೆ ವಧುವಿಗೆ ಫೋನ್ ಮೂಲಕ ವಿಚಾರ ತಿಳಿಸಿದ್ದರಿಂದ ಹುಡಗಿ ನಿರಾಳರಾಗಿದ್ದಳು. ಬಳಿಕ ಪೊಲೀಸರ ಸಮಕ್ಷತೆಯಲ್ಲಿ ಮದುವೆ ಮುಗಿಸಿದ್ದಾರೆ.

PREV
click me!

Recommended Stories

ಇದು ಬರೀ ಡಿಸೆಂಬರ್‌ ಅಲ್ಲ, ಕಾರ್‌ ಡಿಸ್ಕೌಂಟ್‌ ಡಿಸೆಂಬರ್‌; ಈ ಐದು ಕಾರ್‌ಗಳಿಗೆ ಇದೆ ಭರ್ಜರಿ ಆಫರ್‌!
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ