ವಿಶೇಷ ಕಾರು ರ್ಯಾಲಿಯಲ್ಲಿ ಹಲವು ಕಾರುಗಳು ಪಾಲ್ಗೊಂಡಿತ್ತು. ದುಬಾರಿ ಮೌಲ್ಯ, ರೇಸ್ ಕಾರು, ವಿಶೇಷ ಅಲಂಕೃತ ಕಾರುಗಳು ರ್ಯಾಲಿಯಲ್ಲಿ ಭಾಗಿಯಾಗಿತ್ತು. ಆದರೆ ಈ ರ್ಯಾಲಿಯಲ್ಲಿ ಮೊದಲ ಬಹುಮಾನ ಪಡೆದಿದ್ದು, ಸಗಣಿ ಮೆತ್ತಿದ ಮಾರುತಿ ಇಗ್ನಿಸ್ ಕಾರಿಗೆ. ಈ ಕಾರು ರ್ಯಾಲಿ ಹಾಗೂ ಬಹುಮಾನ ಕುರಿತ ವಿವರ ಇಲ್ಲಿದೆ.
ರಾಯ್‌ಪುರ್(ಫೆ.12): ಕಳೆದ ವರ್ಷದ ಬೇಸಿಗೆಯಲ್ಲಿ ಉರಿ ಬಿಸಿಲ ಬೇಗೆ ತಡೆಯಲು ತಮ್ಮ ತಮ್ಮ ಕಾರುಗಳಿಗೆ ಸೆಗಣಿ ಮತ್ತಿ ಚಲಾಯಿಸಿದ್ದರು. ಸೆಗಣಿ ಪೈಂಟ್ ಕಾರು ಕಳೆದ ವರ್ಷ ಟ್ರೆಂಡ್ ಆಗಿತ್ತು. ಗುಜರಾತ್‌ನಲ್ಲಿ ಮಹಳೆಯೊಬ್ಬರು ತಮ್ಮ ಟೊಯೊಟಾ ಕೋರೊಲಾ ಕಾರಿಗೆ ಸಗಣಿ ಮೆತ್ತಿ ಮೊದಲ ಬಾರಿಗೆ ವಿಶ್ವಮಟ್ಟದಲ್ಲೇ ಸದ್ದು ಮಾಡಿದ್ದರು. ಈ ವರ್ಷದ ಕಾರು ರ್ಯಾಲಿಯಲ್ಲಿ ಸಗಣಿ ಮತ್ತಿದ ಕಾರು ಮೊದಲ ಬಹುಮಾನ ಪಡೆದಿದೆ.
ಇದನ್ನೂ ಓದಿ: ಮಾಲೀಕನ ಹೊಸ ಐಡಿಯಾ-ಟೊಯೊಟಾ ಕಾರಿಗೆ ಸೆಗಣಿ ಪೈಂಟ್!
undefined
ಚತ್ತೀಸ್‌ಘಡದ ರಾಯ್‌ಪುರ್‌ನಲ್ಲಿ ವಿಶೇಷ ಕಾರು ರ್ಯಾಲಿ ಆಯೋಜಿಸಲಾಗಿತ್ತು. ಹಲವು ಪರಿಕಲ್ಪನೆಗಳು, ಸಾಮಾಜಿಕ ಕಳಕಳಿ, ಸಮಾಜಕ್ಕೆ ಸಂದೇಶ ನೀಡುವ ಕಾರು ರ್ಯಾಲಿ ಇದಾಗಿತ್ತು. ಹಲವರು ಮಹಿಳಾ ಸಬಲೀಕರಣ, ಡ್ರಗ್ಸ್ ಮುಕ್ತ ಸಮಾಜ, ಹಸಿರೀಕರಣ, ಡ್ರಂಕ್ ಅಂಡ್ ಡ್ರೈವ್ ಸೇರಿದಂತೆ ಹಲವು ಪರಿಕಲ್ವನೆಗಳನ್ನು ಈ ರ್ಯಾಲಿಯಲ್ಲಿ ಅನಾವರಣ ಮಾಡಿದ್ದರು.
ಇದನ್ನೂ ಓದಿ: ಮಗಳ ಮದುವೆಗೆ ಸಗಣಿ ಪೈಂಟ್ ಕಾರು; ಸಮಾರಂಭದಲ್ಲಿ ಅಪ್ಪ ರಾಕಿಂಗ್!
ಮಾರುತಿ ಇಗ್ನಿಸಿ ಮಾಲೀಕ ರಾಜೇಶ್, ತನ್ನ ಕಾರಿಗೆ 21 ಕೆಜಿ ಸಗಣಿಯನ್ನು ಮೆತ್ತಿ ಈ ರ್ಯಾಲಿಯಲ್ಲಿ ಪಾಲ್ಗೊಂಡ. ವಿಶೇಷ ಕಾರು ರ್ಯಾಲಿಯಲ್ಲಿ ಶೋ ಆರಂಭವಾದಾಗ ಎಲ್ಲರ ಕಣ್ಣು ಸೆಗಣಿ ಮೆತ್ತಿದ ಕಾರಿಮ ಮೇಲಿತ್ತು. ಮಾರುತಿ ಇಗ್ನಿಸ್ ಕಾರು ಮರುಬಳಕೆ, ನೈಸರ್ಗಿಕ, ಆರೋಗ್ಯದಾಯಕ ಸೇರಿದಂತೆ ಹಲವು ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆಯಿತು. ಇಷ್ಟೇ ಅಲ್ಲ ರ್ಯಾಲಿಯಲ್ಲಿ ಮೊದಲ ಬಹುಮಾನ ಗೆದ್ದುಕೊಂಡಿತು.
ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!