ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ, ಇತ್ತ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಲಾಕ್‌ಡೌನ್ ವಿಸ್ತರಣೆಯಾದರೂ ಮತ್ತೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ನವದೆಹಲಿ(ಏ.19): ದೇಶದಲ್ಲಿ ಕೊರೋನಾ ಮಹಾಮಾರಿ ಹರಡಲು ಆರಂಭಿಸುತ್ತಿದ್ದಂತೆ ಲಾಕ್‌ಡೌನ್ ಮಾಡಲಾಯಿತು. ಇದರೊಂದಿಗೆ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ಕೂಡ ನಿಲ್ಲಿಸಲಾಯಿತು. ಮಾರ್ಚ್ 25ರಿಂದ ದೇಶದ ಎಲ್ಲಾ ಟ್ರೋಲ್ ಗೇಟ್‌ಗಳಲ್ಲಿ ಟೋಲ್ ಸಂಗ್ರಹ ನಿಲ್ಲಿಸಲಾಗಿದೆ. ಇತ್ತ ಕೊರೋನಾ ಹತೋಟಿಗೆ ಬರದ ಕಾರಣ ಏಪ್ರಿಲ್ 14ಕ್ಕೆ ಅಂತ್ಯವಾಗಬೇಕಿದ್ದ ಲಾಕ್‌ಡೌನ್ ಇದೀಗ ಮೇ.3ರ ವರೆಗೆ ವಿಸ್ತರಿಸಲಾಗಿದೆ. ಆದರೆ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ಮತ್ತೆ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಮುಂದಾಗಿದೆ.
ಕಳೆದ 20 ದಿನದಿಂದ ನಿಸಾನ್ ಮೈಕ್ರಾ ಕಾರಿನಲ್ಲೇ ದ.ಕ ಜಿಲ್ಲೆಯ ಇಬ್ಬರ ಜೀವನ!
undefined
ಏಪ್ರಿಲ್ 20 ರಿಂದ ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಟೋಲ್ ಗೇಟ್‌ಗಳಲ್ಲಿ ಹಣ ಸಂಗ್ರಹ ಆರಂಭವಾಗಲಿದೆ ಎಂದು NHAI ಹೇಳಿದೆ. ಕೇಂದ್ರ ಗೃಹ ಇಲಾಖೆ ಏಪ್ರಿಲ್ 20ರ ಬಳಿಕ ನಿರ್ಮಾಣ ಕಾರ್ಯ ಸೇರಿದಂತೆ ಕೆಲ ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗುತ್ತಿದೆ. ಹೀಗಾಗಿ ಸರಕು ಸಾಮಾಗ್ರಿಗಳ ಸಾಗಾಣಿಕೆ ಸೇರಿದಂತೆ ವಾಹನಗಳ ಓಡಾಟ ಎಪ್ರಿಲ್ 20 ರಿಂದ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಪ್ರಾಧಿಕಾರ ಮುಂದಾಗಿದೆ.
2020ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಕಾರು, ಇಲ್ಲಿದೆ ಲಿಸ್ಟ್!
NHAI ಟೋಲ್ ಸಂಗ್ರಹ ಪುನರ್ ಆರಂಭದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಖಲ ಭಾರತ ಸಾರಿಗೆ ಸಂಘ(AIMTC) ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಲಾಕ್‌ಡೌನ್ ವೇಳೆ ತುರ್ತು ವಾಹನ, ಪೊಲೀಸ್ ವಾಹನ, ಆಸ್ಪತ್ರೆ ಸಂಬಂದ ಪಟ್ಟ ವಾಹನ ಹೊರತು ಪಡಿಸಿ ಇನ್ಯಾವ ವಾಹನ ಕೂಡ ಟೋಲ್ ಮೂಲಕ ಸಾಗಿಲ್ಲ. ಮೊದಲೇ ಎಲ್ಲಾ ಕ್ಷೇತ್ರಗಳು ಸಂಕಷ್ಟದಲ್ಲಿದೆ. ಹೀಗಾಗಿ ಇದೀಗ ಟೋಲ್ ಸಂಗ್ರಹ ಆರಂಭಿಸಿದರೆ ಮತ್ತೆ ಸಾರಿಗೆ ನೆಚ್ಚಿಕೊಂಡಿರುವ ಹಲವು ಕುಟುಂಬಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು AIMTC ಹೇಳಿದೆ.
ಏಪ್ರಿಲ್ 20ರಿಂದ ಟೋಲ್ ಸಂಗ್ರಹ ಆದೇಶ ಹಿಂಪಡಯಬೇಕು. ಇಷ್ಟೇ ಅಲ್ಲ ಲಾಕ್‌ಡೌನ್ ಮುಗಿಯುವ ವರೆಗೆ ಟೋಲ್ ಸಂಗ್ರಹ ಉಚಿತವಲ್ಲ ಎಂದು AIMTC ಹೇಳಿದೆ. ಆದರೆ ವಿರೋಧಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.