ಕಾರು, ಬೈಕ್‌ಗಳನ್ನ ಮಾಡಿಫೈ ಮಾಡಿದರೆ ಅದರ ಲುಕ್ ಬದಲಾಗುತ್ತೆ. ಈ ವೇಳೆ ಲುಕ್‌ಗೆ ಅನುಗುಣವಾಗಿ ಹೈ-ಪವರ್ ಹೆಡ್‌ಲೈಟ್ ಬಳಕೆ ಮಾಡುತ್ತಾರೆ. ಹೈ-ಇಂಟೆನ್ಸಿಟಿ ಹೆಡ್‌ಲೈಟ್ ಮಾಡಿಫೈ ಮಾಡಿದರೆ ಎಚ್ಚರ. ಯಾಕೆ? ಇಲ್ಲಿದೆ ಉತ್ತರ.
ಕೊಚ್ಚಿ(ನ.06): ಕಾರು, ಜೀಪ್ ಬೈಕ್‌ಗಳನ್ನ ಖರೀದಿಸಿ ಅದನ್ನ ಮಾಡಿಫೈ ಮಾಡಿ ಸ್ಪೋರ್ಟ್ ಲುಕ್, ಅಗ್ರೆಸ್ಸಿವ್ ಲುಕ್ ನೀಡೋದು ಕಾಮನ್. ಹೀಗೆ ಮಾಡಿಫೈ ಮಾಡುವಾಗಿ ವಾಹನದ ಹೆಡ್‌ಲೈಟ್ ಕೂಡ ಬದಲಾಯಿಸುತ್ತಾರೆ. ಕಾರಿನ ಲುಕ್‌ಗೆ ಅನುಗುಣವಾಗಿ LED ಹೆಡ್‌ಲೈಡ್,ಸೇರಿದಂತೆ ಬಣ್ಣಬಣ್ಣದ ಹೆಡ್‌ಲೈಟ್ ಅಳವಡಿಸುತ್ತಾರೆ. ಇದೀಗ ಈ ರೀತಿ ಹೆಡ್‌ಲೈಡ್ ಮಾಡಿಫೈ ಮಾಡಿದರೆ ಸಂಕಷ್ಟಕ್ಕೆ ಸಿಲುಕುವುದು ಖಚಿತ.
undefined
ಹೈ ಪವರ್ ಲೈಟ್‌ಗಳಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನ ತಡೆಗಟ್ಟಲು ಇದೀಗ ಪೊಲೀಸರ ಕೈಗೆ ಲೈಟ್ ಮೀಟರ್ ಪರೀಕ್ಷಾ ಸಾಧನ ಸಿಕ್ಕಿದೆ. ಕೇರಳದ ಮೋಟಾರ್ ವಾಹನ ವಿಭಾಗ ನೂತನ ಲೈಟ್ ಮೀಟಕ್ ಚೆಕ್ ಮಶಿನ್‌ಗಳನ್ನ 14 ಜಿಲ್ಲೆಗಳ ಪೊಲೀಸರಿಗೆ ನೀಡಲಾಗಿದೆ.
ರಾತ್ರಿ ವೇಳೆ ಡ್ರಿಂಕ್ ಅಂಡ್ ಡ್ರೈವ್ ಚೆಕ್ ರೀತಿಯಲ್ಲೇ ಇದೀಗ ವಾಹನಗಳನ್ನ ನಿಲ್ಲಿಸಿ ಪೊಲೀಸರು ಲೈಟ್ ಇಂಟೆನ್ಸಿಟಿ ಪರೀಕ್ಷೆ ಮಾಡಲಿದ್ದಾರೆ. ಹೆಡ್‌ಲೈಡ್ ಇಂಟೆನ್ಸಿಟಿ ಲೆವೆಲ್ ಹೆಚ್ಚಿದ್ದರೆ, 1000 ರೂಪಾಯಿ ದಂಡ ಪಾವತಿಸಬೇಕು. ಜೊತೆಗೊಂದು ಕೇಸ್ ಕೂಡ ದಾಖಲಾಗುತ್ತೆ.
ಈ ಲೈಟ್ ಮೀಟರ್ ಮಶಿನ್ ಇತರ ರಾಜ್ಯಗಳಿಗೂ ಕಾಲಿಡಲಿದೆ. ಹೀಗಾಗಿ ಹೈ ಪವರ್ ಹೆಡ್‌ಲೈಟ್ ಮಾಡಿಫೈ ಮಾಡಿದರೆ ದಂಡದ ಜೊತೆ ಕೇಸ್ ಕೂಡ ದಾಖಲಾಗುತ್ತೆ. ವಾಹನಗಳನ್ನ ಮಾಡಿಫೈ ಮಾಡುವಾಗ ಹೆಡ್‌ಲೈಟ್ ಕುರಿತು ಎಚ್ಚರವಿರಲಿ.