ರಾಯಲ್ ಎನ್‌ಫೀಲ್ಡ್ ಬೊಬರ್ ಬೈಕ್ ಟೀಸರ್ ಬಿಡುಗಡೆ-ಹೇಗಿದೆ ಬೈಕ್?

By Web DeskFirst Published Nov 6, 2018, 5:24 PM IST
Highlights

ರಾಯಲ್ ಎನ್‌ಫೀಲ್ಡ್ ನೂತನ ಬೈಕ್ ಬಿಡುಗಡೆಗೆ ಸಜ್ಜಾಗಿದೆ. 830 ಸಿಸಿ ಎಂಜಿನ್ ಹೊಂದಿರುವ ಹೊಸ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ. ನೂತನ ಬೈಕ್ ವಿಶೇಷತೆ ಏನು? ಈ ಬೈಕ್ ವಿನ್ಯಾಸ ಹೇಗಿದೆ? ಇಲ್ಲಿದೆ ಹೆಚ್ಚಿನ ವಿವರ.
 

ಮುಂಬೈ(ನ.06): ರಾಯಲ್ ಎನ್‌ಫೀಲ್ಡ್ ಬೈಕ್ ಸಂಸ್ಥೆಯ ಬಹುನಿರೀಕ್ಷಿತ ಬೊಬರ್ 830 ಬೈಕ್ ಟೀಸರ್ ಬಿಡುಗಡೆಯಾಗಿದೆ. 830 ಸಿಸಿ , ವಿ ಟ್ವಿನ್ 4 ಸ್ಟ್ರೋಕ್ ಎಂಜಿನ್ ಹೊಂದಿರು ನೂತನ ರಾಯಲ್ ಎನ್‌ಫೀಲ್ಡ್ ಬೊಬರ್ 930 ಬೈಕ್, ಹಾರ್ಲೆ ಡೇವಿಡ್ಸನ್ ಸೇರಿದಂತೆ ಇತರ ಮಿಡ್ ಸೆಗ್ಮೆಂಟ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

ಬಾಬರ್ 830 ಟೀಸರ್‌ನಲ್ಲಿ ಸಿಂಗಲ್ ಸೀಟ್, ಎಲ್ಇಡಿ ಹೆಡ್‌ಲೈಟ್ ಹಾಗೂ ಲಾರ್ಜ್ ಎಂಜಿನ್ , ಟ್ವಿನ್ ಡಿಸ್ಕ್ ಬ್ರೇಕ್, ಆಲೋಯ್ ವೀಲ್ಹ್ಸ್ ಜೊತೆಗೆ ಶೂಟರ್ ಸ್ಟೈಲ್ ಸ್ಪಷ್ಟವಾಗಿ ಗೋಚರಿಸುತ್ತಿದೆ. 2019ರಲ್ಲಿ ಈ ಬೈಕ್ ಬಿಡುಗಡೆಯಾಗಲಿದೆ.

830 ಎಂಜಿನ್‌ ಬೊಬರ್ ಬೈಕ್ ಲಿಕ್ವಿಡ್ ಕೂಲಿಂಗ್, ಫ್ಯುಯೆಲ್ ಇಂಜೆಕ್ಷನ್ ಜೊತೆಗೆ 80bhp ಪೀಕ್ ಪವರ್ ಹೊಂದಿರಲಿದೆ. ಇನ್ನು ಎಮಿಶನ್ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಲಿದೆ ಎಂದು ಕಂಪೆನಿ ಹೇಳಿದೆ.  ಆಕರ್ಷಕ ವಿನ್ಯಾಸ ನೂತನ ಬೈಕ್‌ನ ವಿಶೇಷತೆಯಾಗಿದೆ. ಸ್ಕ್ರಾಂಬ್ಲರ್ ಶೈಲಿಯ ಈ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ.

ರಾಯಲ್ ಎನ್‌ಪೀಲ್ಡ್ ನೂತನ ಬೊಬರ್ ಬೈಕ್ ಬೆಲೆ ಕುರಿತು ಕಂಪೆನಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಶೀಘ್ರದಲ್ಲೇ ಬೈಕ್‌ನ ಟಾರ್ಕ್, ಸ್ಪೆಷಾಲಿಟಿ ಹಾಗೂ ಬೆಲೆ ಕುರಿತು ಮಾಹಿತಿ ಪ್ರಕಟಿಸಲಿದೆ.

click me!