ಒಂದೆಡೆರು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಕಟ್ಟಿರೋದು ನಾವು ನೋಡಿದ್ದೇವೆ. ಇದೀಗ ಬರೋಬ್ಬರಿ 135 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಈತನ ಬೈಕ್ ಕೂಡ ಸೀಝ್ ಆಗಿದೆ. ಇಲ್ಲಿದೆ ಹೆಚ್ಚಿನ ವಿವರ.
ಹೈದರಬಾದ್(ನ.06): ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 135 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಲಾಗಿದೆ. ಈ ಮೂಲಕ ಗರಿಷ್ಠ ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ದಾಖಲೆ ಬರೆಯಲಾಗಿದೆ. ಇಷ್ಟೇ ಅಲ್ಲ 31,556 ರೂಪಾಯಿ ದಂಡ ಹಾಕಲಾಗಿದೆ.
ಹೀಗೆ ಗರಿಷ್ಠ ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಮಹಾನುಭಾವ ಹೈದರಾಬಾದ್‌ನ ಕೃಷ್ಣ ಪ್ರಕಾಶ್. ಸಿಗ್ನಲ್ ಜಂಪ್, ಒನ್ ವೇ ಪ್ರಯಾಣ, ಹೆಲ್ಮೆಟ್ ಇಲ್ಲದೆ ರೈಡಿಂಗ್ ಸೇರಿದಂತೆ ಟ್ರಾಫಿಕ್‌ನ ಬಹುತೇಕ ಎಲ್ಲಾ ನಿಯಮಗಳನ್ನ ಉಲ್ಲಂಘಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.
undefined
ಪೊಲೀಸರು ರೂಟಿನ್ ಚೆಕ್ ಅಪ್ ಮಾಡುತ್ತಿರುವಾಗ ಈತ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ. ತಕ್ಷಣವೇ ಅಡ್ಡಗಟ್ಟಿದ ಪೊಲೀಸರು ಬೈಕ್ ನಿಲ್ಲಿಸಿ ಬೈಕ್ ನಂಬರ್ ತಮ್ಮ ನಿಯಮ ಉಲ್ಲಂಘನೆ ಪರೀಕ್ಷಿಸೋ ಎಲೆಕ್ಟ್ರಿಕಲ್ ಮಶಿನ್‌ನಲ್ಲಿ ಪರೀಕ್ಷಿಸಿದ್ದಾರೆ. ಅಷ್ಟರಲ್ಲೇ ಪೊಲೀಸರ ಮಶಿನ್ ಹ್ಯಾಂಗ್ ಆಗಿದೆ.
ಪೊಲೀಸರು ಪ್ರಿಂಟ್ ಕೊಟ್ಟಿದ್ದೇ ತಂಡ ಮಶಿನ್‌ನಲ್ಲಿದ್ದ ಪೂರ್ತಿ ಕಾಗದ ಈತನ ನಿಯಮ ಉಲ್ಲಂಘನೆಯ ವಿವರಕ್ಕೆ ಬೇಕಾಗಿ ಬಂತು. 135 ಕೇಸ್ ದಾಖಲಾಗಿತ್ತು. ಇದರ ಒಟ್ಟು ಮೊತ್ತ 31,556 ರೂಪಾಯಿ. ಇಷ್ಟೇ ಅಲ್ಲ ಬೈಕ್ ಕೂಡ ವಶಪಡಿಸಿಕೊಳ್ಳಲಾಗಿದೆ. ಇದೀಗ ಈತ ದಂಡ ಪಾವತಿಸಿ ಕೋರ್ಟ್‌ನಲ್ಲಿ ಕೇಸ್ ಇತ್ಯರ್ಥಪಡಿಸಬೇಕಾದ ಅನಿವಾರ್ಯತೆಯಲ್ಲಿದ್ದಾನೆ.