2019ರ ಅಕ್ಟೋಬರ್‌ನಿಂದ ಆಟೋ ರಿಕ್ಷಾಗಳಿಗೆ ಹೊಸ ನೀತಿ ಜಾರಿಯಾಗಲಿದೆ. ಹೊಸ ನೀತಿ ಆಟೋ ಮಾಲೀಕರ ನಿದ್ದೆಗೆಡಿಸಿದೆ. ಅಷ್ಟಕ್ಕೂ ಹೊಸ ಆಟೋ ರಿಕ್ಷಾ ನೀತಿಯೇನು? ಇಲ್ಲಿದೆ ವಿವರ.
ಬೆಂಗಳೂರು(ಡಿ.10): ಭಾರತದಲ್ಲಿ ವಾಹನಗಳ ಸುರಕ್ಷತೆ ಹೆಚ್ಚಿಸಲು ಈಗಾಗಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದೀಗ ಆಟೋ ರಿಕ್ಷಾಗಳಿಗೂ ಹೊಸ ನೀತಿ ತರಲು ಮುಂದಾಗಿದೆ. 2019ರ ಅಕ್ಟೋಬರ್‌ನಿಂದ ಆಟೋ ರಿಕ್ಷಾಗಳಿಗೂ ಹೊಸ ನೀತಿ ಜಾರಿಯಾಗುತ್ತಿದೆ.
ಆಟೋ ರಿಕ್ಷಾ ಅಪಘಾತಗಳು ಹೆಚ್ಚುತ್ತಿದೆ. 2017ರಲ್ಲಿ 29,351 ಆಟೋ ರಿಕ್ಷಾಗಳು ಅಪಘಾತಕ್ಕೀಡಾಗಿದೆ. ಹೀಗಾಗಿ ಇದೀಗ ಆಟೋ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೂತನ ನಿಯದ ಪ್ರಕಾರ ಕಾರಿನಂತೆ ಆಟೋಗಳಿಗೂ ಸೀಟ್ ಬೆಲ್ಟ್ ಖಡ್ಡಾಯವಾಗಲಿದೆ. ಇಷ್ಟೇ ಅಲ್ಲ ಆಟೋಗಳಿಗೂ ಡೋರ್ ಅಳವಡಿಸಬೇಕು.
undefined
ಇನ್ನು ಎರಡು ಹೆಡ್‌ಲ್ಯಾಂಪ್ ಖಡ್ಡಾಯವಾಗಿದೆ. ಸದ್ಯ ಒಂದೇ ಹೆಡ್‌ಲ್ಯಾಂಪ್ಸ್ ಇದೆ. ಸದ್ಯ ಇರೋ ಆಟೋಗಳಿಗೆ ಸೀಟ್ ಬೆಲ್ಟ್, ಡೋರ್, ಹೆಡ್‌ಲ್ಯಾಂಪ್ ಅಳವಡಿಕೆ ದುಬಾರಿಯಾಗಲಿದೆ. ಹೀಗಾಗಿ ಹೊಸ ಆಟೋ ಖರೀದಿಸಬೇಕಾದ ಅನಿವಾರ್ಯತೆ ಮಾಲೀಕರದ್ದಾಗಿದೆ.
ಸದ್ಯ ಪೆಟ್ರೋ, ಡೀಸೆಲ್ ಹಾಗೂ ಗ್ಯಾಸ್ ಆಟೋಗಳು ಮಾರುಕಟ್ಟೆಯಲ್ಲಿವೆ. ಇದೀಗ ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ ಮುಂದಾಗಿದೆ. ಹೀಗಾಗಿ ಶೀಘ್ರದಲ್ಲೇ ಆಟೋ ರಿಕ್ಷಾ ಕ್ಷೇತ್ರ ಎಲೆಕ್ಟ್ರಿಕ್ ಮಯವಾಗಲಿದೆ.