5 ವರ್ಷದಲ್ಲಿ ಮಹಾರಾಷ್ಟ್ರದ 6 ಜಿಲ್ಲೆ ಡೀಸೆಲ್‌ ಮುಕ್ತಕ್ಕೆ ಗಡ್ಕರಿ ಸ್ಕೀಂ!

By Web Desk  |  First Published Jun 16, 2019, 10:20 AM IST

5 ವರ್ಷದಲ್ಲಿ ಮಹಾರಾಷ್ಟ್ರದ 6 ಜಿಲ್ಲೆ ಡೀಸೆಲ್‌ ಮುಕ್ತ: ಗಡ್ಕರಿ ಭಾರಿ ಯೋಜನೆ


ನವದೆಹಲಿ[ಜೂ.16]: ಮಹಾರಾಷ್ಟ್ರದ ಆಯ್ದ ಆರು ಜಿಲ್ಲೆಗಳನ್ನು 5 ವರ್ಷಗಳ ಕಾಲ ಡೀಸೆಲ್‌ ಮುಕ್ತಗೊಳಿಸುವ ಯೋಜನೆಯೊಂದನ್ನು ಕೈಗೆತ್ತಿಕೊಂಡಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಜಿಲ್ಲೆಗಳಲ್ಲಿ 5 ವರ್ಷಗಳ ಕಾಲ ಒಂದು ಹನಿ ಡೀಸೆಲ್‌ ಕೂಡ ಬಳಕೆ ಆಗಬಾರದು ಎಂದು ನಾನು ನಿರ್ಧರಿಸಿದ್ದೇನೆ. ಇದಕ್ಕಾಗಿ ಪರ್ಯಾಯ ಹಣಕಾಸು ಮೂಲದ ಹಡುಕಾಟದಲ್ಲಿದ್ದೇವೆ. ಬಯೋ ಸಿಎನ್‌ಜಿಯನ್ನು ಟ್ರಕ್‌ ಮತ್ತು ಬಸ್‌ಗಳಿಗೆ ಬಳಸಲು ನಾನು ಈಗಾಗಲೇ ಆರು ಫ್ಯಾಕ್ಟರಿಗಳನ್ನು ಸ್ಥಾಪಿಸಿದ್ದೇನೆ. ಸದ್ಯ 50 ಬಸ್‌ಗಳು ಬಯೋ ಡೀಸೆಲ್‌ ಮೇಲೆ ಚಾಲನೆಯಾಗುತ್ತಿವೆ ಎಂದಿದ್ದಾರೆ

Tap to resize

Latest Videos

ಅಲ್ಲದೇ ಕಳೆದ 5 ವರ್ಷಗಳಲ್ಲಿ ರಸ್ತೆ ಸಾರಿಗೆಗೆ 17 ಲಕ್ಷ ಕೋಟಿ ರು.ಗಳನ್ನು ವಿನಿಯೋಗಿಸಲಾಗಿದೆ ಎಂದು ಹೇಳಿದ್ದಾರೆ.

click me!