ಭಾರತೀಯ ಆಟೋಮೊಬೈಲ್‌ಗೆ ಮತ್ತೊಂದು ಹೊಡೆತ, ಮೋದಿ ಸರ್ಕಾರಕ್ಕೆ ಆತಂಕ!

Suvarna News   | Asianet News
Published : Feb 13, 2020, 12:27 PM ISTUpdated : Feb 13, 2020, 05:02 PM IST
ಭಾರತೀಯ ಆಟೋಮೊಬೈಲ್‌ಗೆ ಮತ್ತೊಂದು ಹೊಡೆತ, ಮೋದಿ ಸರ್ಕಾರಕ್ಕೆ ಆತಂಕ!

ಸಾರಾಂಶ

ಕಳೆದ ವರ್ಷ ವಾಹನ ಮಾರಾಟ ಕುಸಿತದಿಂದ ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇದು ಮೋದಿ ಸರ್ಕಾರಕ್ಕೆ ಇನ್ನಿಲ್ಲದ ತಲೆನೋವಾಗಿ ಪರಿಣಮಿಸಿತ್ತು. ಇದೀಗ ವರ್ಷದ ಆರಂಭದಲ್ಲೇ ಭಾರತೀಯ ಆಟೋಮೊಬೈಲ್ ಕಂಪನಿಗೆ ಬಿದ್ದಿರುವ ಹೊಡೆತ ಕೇಂದ್ರ ಸರ್ಕಾರದ ಆತಂಕ ಹೆಚ್ಚಿಸಿದೆ.

ನವದೆಹಲಿ(ಫೆ13);  ಕೊರೋನಾ ವೈರಸ್ ಸೃಷ್ಟಿಸಿದ ಆವಾಂತರಕ್ಕೆ ಚೀನಾ ಬೆಚ್ಚಿಬಿದ್ದಿದೆ.  ಪುಟ್ಟ ಮಗುವಿನಿಂದ ಹಿಡಿದು ವೃದ್ಧರ ವರೆಗೂ ಕೊರೋನಾ ವೈರಸ್ ವ್ಯಾಪಿಸಿದೆ. ಚೀನಾದಲ್ಲಿ ಮರಣಮೃದಂಗ ಭಾರಿಸಿದ ಕೊರೋನಾ ವೈರಸ್ ಭಾರತದ ಕಾರು ಉತ್ಪಾದನೆ ತೀವ್ರ ಹೊಡೆತ ನೀಡಿದೆ. 

ಇದನ್ನೂ ಓದಿ: ಕೊರೊನಾ ವೈರಸ್ ಬೆನ್ನಲ್ಲೇ ಚೀನಾಗೆ ಮತ್ತೊಂದು ಹೊಡೆತ; ಹೊಂಡಾ ಘಟಕ ಸ್ಥಗಿತ!

2019ರಲ್ಲಿ ವಾಹನ ಮಾರಾಟ ಕುಸಿತಗೊಂಡ ಆಟೋಮೊಬೈಲ್ ಕಂಪನಿಗಳು ತೀವ್ರ ನಷ್ಟ ಅನುಭವಿಸಿತ್ತು. ಇದು ಭಾರತದ ಆರ್ಥಿಕತೆ ಮೇಲೂ ಪರಿಣಾಮ ಬೀರಿತ್ತು. ಇದೀಗ 2020ರ ಆರಂಭದಲ್ಲೇ ಚೇತರಿಕೆ ಕಂಡಿದ್ದ ಭಾರತೀಯ ಆಟೋಮೊಬೈಲ್ ಎರಡನೇ ತಿಂಗಳಿಗೆ  ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಚೀನಾದ ಕೊರೋನಾ ವೈರಸ್‌ನಿಂದ ವಾಹನ ಬಿಡಿ ಭಾಗ ಕಂಪನಿಗಳು ಮುಚ್ಚಿವೆ. ಹೀಗಾಗಿ ಭಾರತಕ್ಕೆ ವಾಹನ ಬಿಡಿಭಾಗ ಅಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಕೊರೊನಾ ವೈರಸ್‌ನಿಂದ ಭಾರತದಲ್ಲಿ MG ಹೆಕ್ಟರ್ ಕಾರು ಮಾರಾಟ ಕುಸಿತ?

ವಾಹನ ಕಂಪನಿಗಳ ಬಿಡಿಭಾಗ ತಯಾರಿಸುವ ಬಹುತೇಕ ಕಂಪನಿಗಳು ಚೀನಾದಲ್ಲಿವೆ. ಈ ಕಂಪನಿಗಳು ಕೊರೋನಾ ವೈರಸ್‌ನಿಂದ ತಾತ್ಕಾಲಿಕ ಸ್ಥಗಿತಿಗೊಂಡಿದೆ. ಇದರಿಂದಾಗಿ ಭಾರತದ ವಾಹನ ಉತ್ಪಾದನೆಯಲ್ಲಿ ಶೇಕಡಾ 8.3 ರಷ್ಟು ಕುಸಿತವಾಗಲಿದೆ ಎಂದು ಫಿಚ್ ಸೊಲ್ಯುಶನ್ ಆಟೋಮೊಬೈಲ್ ರಿಸರ್ಚ್ ಹೇಳಿದೆ. 

ಚೀನಾದಲ್ಲಿ ಬಿಡಿ ಭಾಗ ತಯಾರಿಕಾ ಕಂಪನಿ ಮಾತ್ರವಲ್ಲ, ಬಹುುತೇಕ ಕಾರು ಘಟಗಳು ಸ್ಥಗಿತಗೊಂಡಿದೆ. ವಿಶ್ವದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆಯಾದ ದಕ್ಷಿಣ ಕೊರಿಯಾದ ಹ್ಯುಂಡೈಗೂ ತಟ್ಟಿದೆ. ಚೀನಾದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಹುತೇಕ ಉದ್ಯಮಗಳನ್ನು ಬಂದ್‌ ಮಾಡಲಾಗಿದೆ. ಇದರ ಪರಿಣಾಮ ಕಾರು ಉತ್ಪಾದನೆಗೆ ಬೇಕಿರುವ ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿಲ್ಲ. ಹೀಗಾಗಿ, ದಕ್ಷಿಣ ಕೊರಿಯಾದ ಉಲ್ಸಾನ್‌ ಆವರಣದಲ್ಲಿರುವ ಬೃಹತ್‌ ಕಾರು ಉತ್ಪಾದನಾ ಘಟಕದಲ್ಲಿ ಕಾರುಗಳ ಉತ್ಪಾದನೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ. 

ಚೀನಾದಿಂದ ಬಿಡಿ ಭಾಗ ಆಮದು ಮಾಡಿಕೊಳ್ಳುವ ಸೌತ್ ಕೋರಿಯಾದ ಕಿಯಾ, ಫ್ರಾನ್ಸ್ ಮೂಲದ ರೆನಾಲ್ಟ್ ಕಂಪನಿ ಸೇರಿದಂತೆ ಹಲವು ವಾಹನ ಘಟಕಘಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಚೀನಾದಲ್ಲಿರು ಹೊಂಡಾ ಕಾರು ಘಟಕವೂ ಸ್ಥಗಿತಗೊಂಡಿದೆ. ಜನರು ಉದ್ಯೋಗವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷದ ಆರ್ಥಿಕ ಹೊಡೆತ, ಕೇಂದ್ರ ಸರ್ಕಾರಕ್ಕೆ ಹೊಡೆತ ನೀಡೀದೆ. ಇದೀಗ ಮತ್ತೆ ಭಾರತದ ಆಟೋ ಇಂಡಸ್ಟ್ರಿ ಸಂಕಷ್ಟಕ್ಕೆ ಸಿಲುಕಿರುವುದು ಮೋದಿ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.

ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ