ರಾಂಗ್ ಸೈಡ್ ಪಾರ್ಕ್- ಸ್ಕೂಟರ್ ಪುಡಿ ಮಾಡಿದ ಚೆನ್ನೈ ಪೊಲೀಸ್!

By Web Desk  |  First Published Apr 1, 2019, 8:32 PM IST

ರಾಂಗ್ ಸೈಡ್ ಪಾರ್ಕ್ ಮಾಡಿದರೆ ಎಚ್ಚರ. ದಂಡದ ಜೊತೆ ವಾಹನ ರೀಪೇರಿ ಕೂಡ ಮಾಡಬೇಕಾದ ಪರಿಸ್ಥಿತಿ ಬಂದೊದಗಬಹುದು. ಇದೀಗ ಚೆನ್ನೈನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ. ಪೊಲೀಸರ ದರ್ಪಕ್ಕೆ ಸ್ಕೂಟರ್ ಪುಡಿ ಪುಡಿಯಾಗಿದೆ.


ಚೆನ್ನೈ(ಏ.01): ಪೊಲೀಸರು ವರ್ತನೆ ಹಲವು ಬಾರಿ ಟೀಕೆಗೆ ಒಳಾಗದ ಉದಾಹರಣೆಗಳಿವೆ. ಇದೀಗ ಚೆನ್ನೈನಲ್ಲಿ ಇದಕ್ಕೆ ಪೂರಕವಾದ ಘಟನೆಯೊಂದು ನಡೆದಿದೆ. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಹೊಂಡಾ ಡಿಯೋ ಸ್ಕೂಟರ್ ನೋಡಿದ ಪೊಲೀಸರು ಸ್ಕೂಟರನ್ನು ಪುಡಿ ಮಾಡಿ ದರ್ಪ ಮೆರೆದಿದ್ದಾರೆ. ಇದು ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ನಾವಿಬ್ಬರು-ನಮಗಿಬ್ಬರು;ಕಾರಿಗೂ ಬರಲಿದೆ ಫ್ಯಾಮಿಲಿ ಪ್ಲಾನಿಂಗ್!

Latest Videos

ಚೆನ್ನೈನ ವಾರ್ ಮೆಮೊರಿಯಲ್ ಬಳಿಯ ರಸ್ತೆಯಲ್ಲಿ ಯುವಕನೋರ್ವ ಸ್ಕೂಟರ್ ಪಾರ್ಕ್ ಮಾಡಿದ್ದ. ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಕೂಟರ್ ರಾಂಗ್ ಸೈಡ್ ಪಾರ್ಕಿಂಗ್‌ನಲ್ಲಿರುವುದು ಗಮನಸಿದ್ದಾರೆ. ತಕ್ಷಣವೇ ಗಸ್ತು ವಾಹ ನಿಲ್ಲಿಸಿದ ಪೊಲೀಸರು ಪೊಲೀಸ ಬೆತ್ತದಿಂದ ಸ್ಕೂಟರ್ ಮೇಲೆ ಮನಬಂದಂತೆ ಹೊಡೆದಿದ್ದಾರೆ. ಇದರಿಂದ ಸ್ಕೂಟರ್‌ನ ಹೆಡ್ ಲೈಟ್, ಮೀಟರ್ ಬೋರ್ಡ್ ಸೇರಿದಂತೆ ಬಹುತೇಕ ಭಾಗಗಳು ಪುಡಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬೆದರಿಕೆಯಿಂದ ಕಿಯಾ ಮೋಟಾರ್ಸ್ ಆಂಧ್ರಕ್ಕೆ- ಚಂದ್ರಬಾಬು ನಾಯ್ಡು!

ಪೊಲೀಸರ ಈ ದರ್ಪ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿತ್ತು.  ಇಷ್ಟೇ ಅಲ್ಲ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋ ಚೆನ್ನೈ ನಗರದಲ್ಲೆಡೆ ಪಸರಿಸುತ್ತಿದ್ದಂತೆ ಪೊಲೀಸ್ ಇಲಾಖೆ ತಪ್ಪಿತಸ್ಥ ಪೊಲೀಸರನ್ನು ಪತ್ತೆ ಹಚ್ಚಿ ಅಮಾನತು ಮಾಡಿದೆ.  ನಿಯಮದ ಪ್ರಕಾರ ರಾಂಗ್ ಸೈಡ್ ಪಾರ್ಕ್ ಮಾಡಿದ್ದಲ್ಲಿ ಈ ವಾಹನಕ್ಕೆ ದಂಡ ವಿದಿಸಬೇಕು. ವಾಹವನ್ನು ವಶಕ್ಕೆ ಪಡೆಯುವ ಅಧಿಕಾರ ಕೂಡ ಪೊಲೀಸರಿಗಿದೆ. ಆದರೆ ಯಾವುದೇ ಕಾರಣಕ್ಕೂ ವಾಹನವನ್ನು ಹಾನಿ ಮಾಡುವ ಅಧಿಕಾರವಿಲ್ಲ.

click me!