ಈ ಊರಲ್ಲಿ ಇನ್ಮುಂದೆ ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳ ಕಾರುಬಾರು; ಪೆಟ್ರೋಲ್‌ ವೆಹಿಕಲ್ಸ್ ನೋಂದಣಿ ನಿಷೇಧ

By BK Ashwin  |  First Published Feb 12, 2023, 3:45 PM IST

ಫೆಬ್ರವರಿ 10 ರಿಂದ ಚಂಡೀಗಢದಲ್ಲಿ ಎಲೆಕ್ಟ್ರಿಕ್ ಇಲ್ಲದ ದ್ವಿಚಕ್ರ ವಾಹನಗಳನ್ನು ನೋಂದಾಯಿಸಲಾಗುವುದಿಲ್ಲ. ನಗರದಲ್ಲಿ ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.


ಚಂಡೀಗಢ (ಫೆಬ್ರವರಿ 12, 2023): ಕೇಂದ್ರ ಸರ್ಕಾರ ಕೆಲ ವರ್ಷಗಳಿಂದ ಎಲೆಕ್ಟ್ರಿಕ್‌ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಡೀಸೆಲ್‌ ರೈಲು ಎಂಜಿನ್‌ಗಳನ್ನು ಕ್ರಮೇಣವಾಗಿ ನಿಷೇಧ ಮಾಡುವ ಗುರಿಯನ್ನೂ ಹೊಂದಿದೆ. ಇನ್ನು, ಕೆಲವು ದೇಶಗಳಂತೂ ಪೆಟ್ರೋಲ್‌, ಡೀಸೆಲ್‌ ವಾಹನಗಳನ್ನು ನಿಷೇಧ ಮಾಡುವ ಪ್ರಕ್ರಿಯೆಯನ್ನೇ ಆರಂಭಿಸಿದೆ. ಅದೇ ರೀತಿ, ಚಂಡೀಗಢವೂ ಅದೇ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೌದು, ಚಂಡೀಗಢ ಆಡಳಿತವು ಪೆಟ್ರೋಲ್‌ನಿಂದ ಚಲಿಸುವ ಪವರ್ ಟ್ರೈನ್ ದ್ವಿಚಕ್ರ ವಾಹನಗಳ ನೋಂದಣಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. 

ಇದರರ್ಥ ಫೆಬ್ರವರಿ 10 ರಿಂದ ಚಂಡೀಗಢದಲ್ಲಿ ಎಲೆಕ್ಟ್ರಿಕ್ ಇಲ್ಲದ ದ್ವಿಚಕ್ರ ವಾಹನಗಳನ್ನು ನೋಂದಾಯಿಸಲಾಗುವುದಿಲ್ಲ. ನಗರದಲ್ಲಿ ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್‌ನಲ್ಲಿ, ಚಂಡೀಗಢ ಆಡಳಿತವು ತನ್ನ ಎಲೆಕ್ಟ್ರಿಕ್ ವೆಹಿಕಲ್ ನೀತಿಯನ್ನು ಪ್ರಕಟಿಸಿದ್ದು, ಆ ನೀತಿಯಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. 

Tap to resize

Latest Videos

undefined

ಇದನ್ನು ಓದಿ: ಸಗಣಿ ಗ್ಯಾಸ್‌ ಬಳಸಿ ಓಡಬಲ್ಲ ಕಾರು ನಿರ್ಮಾಣಕ್ಕೆ ಮಾರು​ತಿ ರೆಡಿ..!

ಎಲೆಕ್ಟ್ರಿಕ್ ಅಲ್ಲದ ವಾಹನಗಳನ್ನು ಮಿತಿಗೊಳಿಸುವ ಮತ್ತು ನಿರುತ್ಸಾಹಗೊಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಚಂಡೀಗಢ ಆಡಳಿತವು ತನ್ನ ಆದೇಶದಲ್ಲಿ ತಿಳಿಸಿದೆ. ಅದನ್ನು ಮಾಡುವ ಒಂದು ಮಾರ್ಗವೆಂದರೆ ಎಲೆಕ್ಟ್ರಿಕ್ ಅಲ್ಲದ ವಾಹನಗಳ ನೋಂದಣಿಯನ್ನು ಮಿತಿಗೊಳಿಸುವುದು. ಈ ನೀತಿಯು ಶೇಕಡಾ 10 ರಷ್ಟು ನಾಲ್ಕು ಚಕ್ರಗಳ ವಾಹನ ಹಾಗೂ ಶೇಕಡಾ 35 ರಷ್ಟು ದ್ವಿಚಕ್ರ ವಾಹನಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಆರ್ಥಿಕ ವರ್ಷಕ್ಕೆ ಎಲೆಕ್ಟ್ರಿಕ್‌ ಅಲ್ಲದ ವಾಹನಗಳ ನೋಂದಣಿಯ ಗುರಿ ಈಗಾಗಲೇ ಈಡೇರಿದ ಕಾರಣ ಮಾರ್ಚ್‌ 31 ರವರೆಗೆ ಹೊಸ ವಾಹನಗಳ ರಿಜಿಸ್ಟ್ರೇಷನ್‌ ಅನ್ನೇ ನಿಲ್ಲಿಸಲಾಗಿದೆ. ಇವಿ ನೀತಿಯನ್ನು ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.

ಫೆಬ್ರವರಿ 10 ರಂದು ಅಥವಾ ನಂತರ ಮಾರಾಟವಾದ ದ್ವಿಚಕ್ರ ವಾಹನಗಳನ್ನು ಮಾರ್ಚ್ 31 ರವರೆಗೆ ಚಂಡೀಗಢದಲ್ಲಿ ನೋಂದಾಯಿಸಲಾಗುವುದಿಲ್ಲ ಎಂದು ಚಂಡೀಗಢ ಆಡಳಿತ ಹೇಳಿದೆ, ಅಂದರೆ ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳುತ್ತದೆ. ಮತ್ತೆ, ಎಲೆಕ್ಟ್ರಿಕ್ ಅಲ್ಲದ ದ್ವಿಚಕ್ರ ವಾಹನಗಳ ನೋಂದಣಿ ಏಪ್ರಿಲ್ 1 ರಿಂದ ಪುನಾರಂಭವಾಗಲಿದೆ. ಇನ್ನು, ಏಪ್ರಿಲ್‌ 1 ರಿಂದ ಪುನಾರಂಭವಾಗುತ್ತಿದ್ರೂ, ಇದು ಸಹ ಇವಿ ನೀತಿಯ ಅಡಿಯಲ್ಲಿ ಮುಂದಿನ ಹಣಕಾಸು ವರ್ಷದ ಮಿತಿಗಳನ್ನು ಪೂರೈಸುವವರೆಗೆ ಅವುಗಳನ್ನು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾರು ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಇಂದಿನಿಂದ ಮಾರುತಿ ಸುಜುಕಿಯ ಎಲ್ಲ ಮಾಡೆಲ್‌ ಕಾರುಗಳ ಬೆಲೆ ಹೆಚ್ಚಳ..!

ಇನ್ನು, ಏಪ್ರಿಲ್‌ ನಂತರದಲ್ಲಿ ಸಹ ಚಂಡೀಗಢದಲ್ಲಿ ಇಂಧನ ಆಧಾರಿತ ದ್ವಿಚಕ್ರ ವಾಹನಗಳನ್ನು ಖರೀದಿಸುವವರು ತಮ್ಮ ವಾಹನಗಳನ್ನು ಬೇರೆಡೆ ನೋಂದಾಯಿಸಿಕೊಳ್ಳಬೇಕಾಗಬಹುದು. ಏಕೆಂದರೆ ಈ ಗುರಿಯ ಶೇ. 65 ವಾಹನಗಳ  ಸಾಧಿಸಿದ ನಂತರ ಅವರ ನೋಂದಣಿ ಸ್ಥಗಿತಗೊಳ್ಳುತ್ತದೆ ಎಂದು ತಿಳಿದುಬಂದಿದೆ.

ಇದಿಷ್ಟೇ ಅಲ್ಲ, 2024 ರಿಂದ ಇಂಧನ ಬಳಕೆ ಆಧಾರಿತ ದ್ವಿ ಚಕ್ರ ವಾಹನಗಳು ಹಾಗೂ ಆಟೋಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು ಎಂದೂ ತಿಳಿದುಬಂದಿದೆ. ಅಲ್ಲದೆ, ಇಂಧನ ಆಧಾರಿತ ಬಸ್‌ಗಳ ನೋಂದಣಿಯನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಿದ್ದು, ಎಲೆಕ್ಟ್ರಿಕ್‌ ಬಸ್‌ಗಳಿಗೆ ಮಾತ್ರ ನೋಂದಣಿ ನೀಡಲಾಗುತ್ತದೆ. 

ಇದನ್ನೂ ಓದಿ: ಜಾಗತಿಕ ಎನ್ಸಿಎಪಿ ಪರೀಕ್ಷೆಯಲ್ಲಿ ಕೇವಲ 1 ಸ್ವಾರ್ ರೇಟಿಂಗ್ ಪಡೆದ ಮಾರುತಿ ಸ್ವಿಫ್ಟ್, ಎಸ್-ಪ್ರೆಸ್ಸೋ, ಇಗ್ನಿಸ್

ಈ ಮಧ್ಯೆ, ವೈಯಕ್ತಿಕ ಇ-ಕಾರುಗಳಿಗೆ ಕ್ರಮವಾಗಿ 2024, 2025 ಮತ್ತು 2026 ಕ್ಕೆ 30%, 40% ಮತ್ತು 50% ನಷ್ಟು ನೋಂದಣಿ ಮಾಡಲು ನಿರ್ಧರಿಸಿದೆ. ಅಂದರೆ, 2026ರಲ್ಲಿ ಅರ್ಧದಷ್ಟು ಮಾತ್ರ ಇಂಧನ ಆಧಾರಿತ ವಾಹನಗಳಿಗೆ ಅವಕಾಶ ಸಿಗಲಿದೆ. ಇದರಿಂದ 2024, 2025, 2026 ಕ್ಕೆ, ಇಂಧನ ಆಧಾರಿತ ವೈಯಕ್ತಿಕ ಕಾರುಗಳು 30, 40 ಮತ್ತು 50 ಪ್ರತಿಶತದಷ್ಟು ಕಡಿಮೆಯಾಗಲಿವೆ ಎಂದು ವರದಿಯಾಗಿದೆ. 

ಹಾಗೆ, ಇ-ಬಸ್‌ಗಳಿಗೂ, ಐದನೇ ವರ್ಷಕ್ಕೆ 100% ಗುರಿಯನ್ನು ನಿಗದಿಪಡಿಸಲಾಗಿದೆ. ಅಂದರೆ ಎಲ್ಲಾ ಇಂಧನ ಆಧಾರಿತ ಬಸ್‌ಗಳ ನೋಂದಣಿಯನ್ನು 2026ರ ವೇಳೆಗೆ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ. 

click me!