ಕಾರು ಹಾಗೂ ಬೈಕ್ ನಂಬರ್ ಪ್ಲೇಟ್ ಬಹಳ ಮುಖ್ಯ. ಅವು ಹಾಳಾದ್ರೆ ರಿಪ್ಲೇಸ್ ಮಾಡ್ಬೇಕು. ವಾಹನ ಸವಾರರಿಗೆ ಈ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಬಗ್ಗೆ ಮಾಹಿತಿ ತಿಳಿದಿರಬೇಕು.
ನಿಮ್ಮ ಬಳಿ ದ್ವಿಚಕ್ರ ವಾಹನ (Two wheeler) ಅಥವಾ ಕಾರಿದ್ರೆ ನಿಮಗೆ ನಂಬರ್ ಪ್ಲೇಟ್ ಬಗ್ಗೆ ತಿಳಿದಿರುತ್ತೆ. ಅದನ್ನು ಹೈ ಸೆಕ್ಯೂರಿಟಿ ನೋಂದಣಿ ಫಲಕ (High security registration panel) ಅಂತ ಕರೀತಾರೆ. ರಸ್ತೆಯಲ್ಲಿ ವಾಹನ ಚಲಾಯಿಸ್ತೀರಿ ಎಂದಾದ್ರೆ ನೀವು ಸಾರಿಗೆ ನಿಯಮ ಪಾಲಿಸ್ಬೇಕು. ಅದ್ರಲ್ಲಿ ಈ ನಂಬರ್ ಪ್ಲೇಟ್ ಕೂಡ ಸೇರಿದೆ. ಅನೇಕರು ಈ ನಂಬರ್ ಪ್ಲೇಟ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ. ವಾಹನ ಖರೀದಿ ಮಾಡಿದಾಗ ಬಂದ ನಂಬರ್ ಪ್ಲೇಟ್ ಹಾಳಾಗಿದ್ರೆ, ತುಂಡಾಗಿದ್ರೂ ಅದನ್ನೇ ಹಾಕಿಕೊಂಡು ಓಡಾಡ್ತಾರೆ. ಆದ್ರೆ ಇದು ನಿಯಮಕ್ಕೆ ವಿರುದ್ಧ. ನಿಮ್ಮ ವಾಹನದ ನಂಬರ್ ಪ್ಲೇಟ್ ಹಾಳಾಗಿದ್ದರೆ ಅಥವಾ ಬಿದ್ದಿದ್ರೆ ಆದಷ್ಟು ಬೇಗ ಹೊಸ ಪ್ಲೇಟ್ ಅಳವಡಿಸಿಕೊಳ್ಳಿ. ಇಲ್ಲ ಅಂದ್ರೆ ಭಾರಿ ದಂಡ ತೆರಬೇಕು. ಕೆಲವೊಮ್ಮೆ ನಿಮ್ಮ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೈ ಸೆಕ್ಯುರಿಟಿ ನೋಂದಣಿ ಫಲಕ ಎಂದರೇನು, ಅದ್ರ ಅಗತ್ಯ ಏನು ಎಂಬ ಮಾಹಿತಿ ಇಲ್ಲಿದೆ.
ಹೈ ಸೆಕ್ಯುರಿಟಿ ನೋಂದಣಿ ಫಲಕ ಎಂದರೇನು? : ಹೈ ಸೆಕ್ಯುರಿಟಿ ನೋಂದಣಿ ಫಲಕ, ಅಲ್ಯೂಮಿನಿಯಂ ನಂಬರ್ ಪ್ಲೇಟ್ ಆಗಿದೆ. ಇದನ್ನು ರೋಸ್ಮೆರ್ಟಾ ಟೆಕ್ನಾಲಜೀಸ್ ತಯಾರಿಸುತ್ತದೆ. ಕನಿಷ್ಠ ಒಂದು ಬಾರಿ ಬಳಸಿದ ಸ್ನ್ಯಾಪ್-ಆನ್ ಲಾಕ್‌ಗಳನ್ನು ಬಳಸಿಕೊಂಡು ವಾಹನದ ಮುಂದೆ ಮತ್ತು ಹಿಂದಿನ ನಂಬರ್ ಪ್ಲೇಟ್ ತಯಾರಿಸಲಾಗುತ್ತದೆ. ಸ್ನ್ಯಾಪ್-ಆನ್ ಲಾಕನ್ನು ವಾಹನದಿಂದ ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ನಂಬರ್ ಪ್ಲೇಟ್ ತೆಗೆದ ನಂತರ ಇನ್ನೊಂದು ನಂಬರ್ ಪ್ಲೇಟ್ ಹಾಕೋದು ಕೂಡ ಸುಲಭ ಅಲ್ಲ.
ರೋಡ್ ಟ್ಯಾಕ್ಸ್ ಸೇರಿ ರೂಲ್ಸ್ ಉಲ್ಲಂಘಿಸಿದ ಹೊರ ರಾಜ್ಯ ವಾಹನ ಸೀಝ್, ಕರ್ನಾಟಕ ನಡೆಗೆ ಹಲವರು
ಬೇರೆ ಬೇರೆ ವಾಹನಗಳು ವಿಭಿನ್ನ ಗಾತ್ರದ ನಂಬರ್ ಪ್ಲೇಟ್‌ಗಳನ್ನು ಹೊಂದಿರುತ್ತವೆ. ವಾಹನವನ್ನು ಅವಲಂಬಿಸಿ, ಪ್ಲೇಟ್ ಗಾತ್ರ ಬದಲಾಗುತ್ತದೆ. 280×45, 200×100, 340×200 ಮತ್ತು 500×120 ಅಳತೆಯಲ್ಲಿ ನಂಬರ್ ಪ್ಲೇಟ್ ಇರುತ್ತದೆ. ವಾಹನದ ಮುಂಭಾಗ ಮತ್ತು ಹಿಂಭಾಗದ ಪ್ಲೇಟ್‌ಗಳ ಗಾತ್ರ ಕೂಡ ವಿಭಿನ್ನವಾಗಿರಬಹುದು. ಇದರ ದಪ್ಪ 1 ಮಿಮೀಯಾಗಿದೆ. ಅಷ್ಟೇ ಅಲ್ಲ, ವಾಹನದ ಕೆಟಗರಿಗೆ ತಕ್ಕಂತೆ ನಂಬರ್ ಪ್ಲೇಟ್ ಬಣ್ಣ ಕೂಡ ಬದಲಾಗುತ್ತದೆ. ಬಿಳಿ, ಹಳದಿ ಮತ್ತು ಹಸಿರು ಬಣ್ಣದ ನಂಬರ್ ಪ್ಲೇಟ್ ಗಳನ್ನು ನೀವು ಕಾಣ್ಬಹುದು.
ನಂಬರ್ ಪ್ಲೇಟ್ ಏಕೆ ಅಗತ್ಯ? : ಕೇಂದ್ರ ಮೋಟಾರು ವಾಹನ ನಿಯಮ 50ರಲ್ಲಿ, ವಾಹನದ ನೋಂದಣಿ ಪ್ಲೇಟ್ ದಪ್ಪ, ಗಾತ್ರ ಮತ್ತು ಫಾಂಟ್‌ಗೆ ಸಂಬಂಧಿಸಿದ ನಿಯಮಗಳನ್ನು ನಿಗದಿಪಡಿಸಲಾಗಿದೆ. ಆದ್ರೆ ಸರ್ಕಾರದ ನಿಯಮದ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ, ಜನರು ತಮ್ಮ ವಾಹನಗಳಿಗೆ HSRP ಅಳವಡಿಸಿಕೊಳ್ಳುತ್ತಿಲ್ಲ. ವಾಹನವು ಕಳುವಾಗಿದ್ದರೆ ಮತ್ತು ಅದರಲ್ಲಿ HSRP ಇಲ್ಲದಿದ್ದರೆ, ಅದನ್ನು ಟ್ರ್ಯಾಕ್ ಮಾಡುವುದು ಕಷ್ಟ. ಅಪರಾಧ ಚಟುವಟಿಕೆಗಳಿಗೆ HSRP ಇಲ್ಲದ ವಾಹನವನ್ನು ಬಳಸುವುದು ಸುಲಭ. ಆದ್ದರಿಂದ, ಯಾವುದೇ ವಾಹನವಾಗಿದ್ದರೂ, ಅದರ ಮೇಲೆ HSRP ಇರುವುದು ಅವಶ್ಯಕ.
ವಾಹನಗಳ ಪ್ರಮುಖ ಬಿಡಿಭಾಗಗಳಿಗೆ ಟ್ರಂಪ್ ಶೇ.25ರಷ್ಟು ತೆರಿಗೆ: ಹಲವು ಭಾರತೀಯ ಕಂಪನಿಗಳಿಗೆ ಸಂಕಷ್ಟ
ಈ ನಂಬರ್ ಪ್ಲೇಟ್ ಬೆಲೆ ಎಷ್ಟು? : ಹೊಸ ವಾಹನ ಖರೀದಿಸುವಾಗ ಡೀಲರ್‌ಗಳು ಹೈ ಸೆಕ್ಯುರಿಟಿ ನೋಂದಣಿ ಫಲಕದ (HSRP) ಬೆಲೆಯನ್ನು ನೀಡುತ್ತಾರೆ. ವಾಹನದ ವರ್ಗ ಮತ್ತು ಬ್ರ್ಯಾಂಡ್ ಅನ್ನು ಅವಲಂಬಿಸಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಇದರ ಬೆಲೆ 400 ರಿಂದ 500 ರೂಪಾಯಿ. ನಾಲ್ಕು ಚಕ್ರದ ವಾಹನಗಳಿಗೆ ಇದರ ಬೆಲೆ 1100 ರಿಂದ 1200 ರೂಪಾಯಿ ಇರುತ್ತದೆ. ಅಧಿಕೃತ ಮಾರಾಟಗಾರರಿಂದ ಮಾತ್ರ HSRP ಅಳವಡಿಸಿಕೊಳ್ಳುವುದು ಅಗತ್ಯ. ನೀವು SIAM ಮತ್ತು Bookmyhsrp.com ನಿಂದ HSRP ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ನೀವು ಅಧಿಕೃತ ವೆಬ್‌ಸೈಟ್ bookmyhsrp.com ಗೆ ಹೋಗಿ, ಅಲ್ಲಿಂದ ನಂಬರ್ ಪ್ಲೇಟ್ ಆರ್ಡರ್ ಮಾಡಬಹುದು.