ಬ್ರೆಜಾ, ವೆನ್ಯೂಗೆ ಪೈಪೋಟಿ, ಬರುತ್ತಿದೆ ಟೊಯೊಟಾ ರೈಝ್ ಕಾರು!

By Web Desk  |  First Published Oct 30, 2019, 7:45 PM IST

ಟೊಯೊಟಾ ಕಂಪನಿ ಇದೀಗ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಸೇರಿದಂತೆ ಇತರ ಕಾರುಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ. ನೂತನ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
 


ನವದೆಹಲಿ(ಅ.29): ಭಾರತದಲ್ಲಿ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಸಬ್ ಕಾಂಪಾಕ್ಟ್ ಕಾರು ದಾಖಲೆ ಮಾರಾಟವಾಗಿದೆ. ಹೀಗಾಗಿ ಪ್ರತಿ ಆಟೋಮೊಬೈಲ್ ಕಂಪನಿಗಳು ಸಬ್ ಕಾಂಪಾಕ್ಟ್ SUV ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಮಾರುತಿ ಬ್ರೆಜಾ ಅತ್ಯಂತ ಯಶಸ್ವಿ ಕಾರಾಗಿ ಗುರುತಿಸಿಕೊಂಡಿದೆ. ಇದಕ್ಕೆ ಪೈಪೋಟಿಯಾಗಿ ಹ್ಯುಂಡೈ ವೆನ್ಯೂ ಸೇರಿದಂತೆ ಹಲವು ಕಾರುಗಳು ಮಾರುಕಟ್ಟೆಯಲ್ಲಿದೆ. ಇದೀಗ ಟೊಯೊಟಾ ಕೂಡ ಪೈಪೋಟಿಗೆ ರೆಡಿಯಾಗಿದೆ.

Latest Videos

ಇದನ್ನೂ ಓದಿ: ಬ್ರಿಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬಿಡುಗಡೆಯಾಗುತ್ತಿದೆ ಜೀಪ್ ಕಂಪಾಸ್!.

ಟೊಕಿಯೋ ಮೋಟಾರು ಶೋನಲ್ಲಿ ಟೊಯೊಟಾ ನೂತನ ರೈಝ್ suv ಕಾರನ್ನು ಪರಚಯಿಸಿದೆ. ಸದ್ಯ ಮಾರುಕಟ್ಟೆಯಲ್ಲಿರುವ suv ಕಾರುಗಳಿಗಿಂತ ಭಿನ್ನ ಶೈಲಿ, ಆಕರ್ಷಕ ಲುಕ್ ಹಾಗೂ ಎಂಜಿನ್, ತಂತ್ರಜ್ಞಾನದಲ್ಲೂ ಆಧುನಿಕತೆಯನ್ನು ಒಳಗೊಂಡಿದೆ. 

ಇದನ್ನೂ ಓದಿ: ದೀಪಾವಳಿಗೆ ಖರೀದಿಸಹುದಾದ 10 ಲಕ್ಷ ರೂ ಒಳಗಿನ ಟಾಪ್ 5 ಕಾರು!

ನೂತನ ರೈಝ್ ಕಾರು  3,995mm ಉದ್ದ, 1,695mm ಎತ್ತರ, 1,620mm ಅಗಲ ಹಾಗೂ 2,525mm ವ್ಹೀಲ್ ಬೇಸ್ ಹೊಂದಿದೆ.  1.0-ಲೀಟರ್, 3-ಸಿಲಿಂಡರ್, 12-ವೇಲ್ವ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 98hp ಪವರ್ ಹಾಗೂ 140.2Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:  ಮಾರುತಿ ಎರ್ಟಿಗಾ ಟೂರ್ M ಡೀಸೆಲ್ ಕಾರು ಬಿಡುಗಡೆ!

ನವೆಂಬರ್ 4 ರಂದು ಭಾರತದಲ್ಲಿ ನೂತನ ರೈಝ್ ಕಾರು ಅನಾವರಣಗೊಳ್ಳಲಿದೆ. ಈ ಕಾರು ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ, ಮಹೀಂದ್ರ xuv300, ಫೋರ್ಡ್ ಇಕೋಸ್ಪ್ರೋರ್ಟ್, ಟಾಟಾ ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ suv ಕಾರುಗಳಿಗೆ ಪೈಪೋಟಿ ನೀಡಲಿದೆ.

click me!