ಶೀಘ್ರದಲ್ಲೇ ಹೆಚ್ಚಾಗಲಿದೆ ಬೆಂಗಳೂರು ಆಟೋ ಪ್ರಯಾಣ ದರ!

By Web Desk  |  First Published Jan 6, 2019, 8:42 PM IST

ಶೀಘ್ರದಲ್ಲೇ ಬೆಂಗಳೂರಿನ ಆಟೋ ಪ್ರಯಾಣ ದರ ಹೆಚ್ಚಾಗಲಿದೆ. 2013ರಿಂದ ದರ ಪರಿಷ್ಕರಣೆಯಾಗದೇ ಉಳಿದ್ದ ಆಟೋ ದರ ಹೊಸ ವರ್ಷದ ಆರಂಭದಲ್ಲೇ ಜಾರಿಯಾಗುವ ಸಾಧ್ಯತೆ ಇದೆ. ನೂತನ ದರ ಎಷ್ಟು? ಇಲ್ಲಿದೆ ವಿವರ.


ಬೆಂಗಳೂರು(ಜ.06): ನಗರಗಳಲ್ಲಿ ಆನ್‌ಲೈನ್ ಕ್ಯಾಬ್‌ಗಳು ಹೆಚ್ಚು ಜನಪ್ರಿಯವಾಗುತ್ತಿದ್ದರೂ, ಆಟೋ ರಿಕ್ಷಾ ಸೇವೆ ತುಂಬಾನೇ  ಮುಖ್ಯವಾಗಿದೆ. ಇದೀಗ ಉದ್ಯಾನ ನಗರಿಯಲ್ಲಿ ಆಟೋ ರಿಕ್ಷಾ ಪ್ರಯಾಣ ದುಬಾರಿಯಾಗಲಿದೆ. 25 ರೂಪಾಯಿ ಇರುವ ಕನಿಷ್ಠ ಬೆಲೆ ಇನ್ಮುಂದೆ 30 ರೂಪಾಯಿಗೆ ಏರಿಕೆಯಾಗಲಿದೆ.

ಇದನ್ನೂ ಓದಿ: ಬಜಾಜ್-ಮಹೀಂದ್ರಾಗೆ ಪೈಪೋಟಿ- ಶೀಘ್ರದಲ್ಲೇ ಬರಲಿದೆ ಕೆಟೋ ಆಟೋ ರಿಕ್ಷಾ!

Latest Videos

undefined

ರೋಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ(RTA) ಇದೀಗ ಆಟೋ ರಿಕ್ಷಾ ಕನಿಷ್ಠ ದರ ಹೆಚ್ಚಿಸಲು ಮುಂದಾಗಿದೆ. ಸದ್ಯ 1.9 ಕಿ.ಮೀ ಪ್ರಯಾಣಕ್ಕೆ 25 ರೂಪಾಯಿ(ಮಿನಿಮಮ್ ಫೇರ್) ಹಾಗೂ ಹೆಚ್ಚುವರಿ ಪ್ರತಿ ಕಿ.ಮೀಗೆ 13 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಆದರೆ ನೂತನ ದರ ಜಾರಿಯಾದರೆ ಕನಿಷ್ಠ ಬೆಲೆ 30 ಹಾಗೂ ಹೆಚ್ಚುವರಿ ಪ್ರತಿ ಕಿ.ಮೀಗೆ 15 ರೂಪಾಯಿ ಮಾಡಲು RTA ನಿರ್ಧರಿಸಿದೆ.

ಇದನ್ನೂ ಓದಿ: 2019 ರಿಂದ ಆಟೋ ರಿಕ್ಷಾಗೆ ಹೊಸ ನೀತಿ- ಸಂಕಷ್ಟದಲ್ಲಿ ಮಾಲೀಕರು!

2013ರಿಂದ ಇಲ್ಲೀವರೆಗೂ ಆಟೋ ರಿಕ್ಷಾ ಕನಿಷ್ಠ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. 2013ರ ಬಳಿಕ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಬೆಲೆ ಪರಿಷ್ಕರಿಸಲು ಟ್ಯಾಕ್ಸಿ ಡ್ರೈವರ್ ಯೂನಿಯನ್ , RTA ಬಳಿ ಮನವಿ ಮಾಡಿದೆ.
 

click me!