ನೆಚ್ಚಿನ ಕಾರು ಬಳಸುವ ಮೊದಲೇ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್!

By Suvarna News  |  First Published Apr 29, 2020, 2:53 PM IST

ಹೆಸರು, ಯಶಸ್ಸು, ಆದಾಯ ಇದೆಲ್ಲವನ್ನೂ ಅನುಭವಿಸುವ ಮೊದಲೇ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದಾರೆ. ಬಾಲ್ಯದಿಂದಲೇ ಉತ್ತಮ ಜೀವನಕ್ಕಾಗಿ ಹೋರಾಟ ಮಾಡಿಕೊಂಡ ಬಂದ ಇರ್ಫಾನ್ ಶ್ರೀಮಂತನಾದ ಮೇಲೆ ಆರೋಗ್ಯಕ್ಕಾಗಿ ಹೋರಾಡಬೇಕಾಯಿತು. ಇತ್ತ ತಮಗಿಷ್ಟವಾದ ಕಾರು ಖರೀದಿಸಿದ್ದರೂ ಅದನ್ನೂ ಬಳಸಿ ಆನಂದಿಸುವ ಮೊದಲೇ ಇರ್ಫಾನ್ ಇಹಲೋಕ ತ್ಯಜಿಸಿದ್ದಾರೆ. ಇರ್ಫಾನ್ ಹಾಗೂ ಕಾರಿನ ಕುರಿತ ಮಾಹಿತಿ ಇಲ್ಲಿದೆ. 


ಮುಂಬೈ(ಏ.29): ಬಾಲಿವುಡ್‌ನ ಪ್ರತಿಭಾನ್ವಿತ ನಟರಲ್ಲಿ ಇರ್ಫಾನ್ ಖಾನ್‌ಗೆ ಅಗ್ರಸ್ಥಾನ. ನೈಜ ಅಭಿನಯ, ಪಾತ್ರದೊಳಗೆ ತಲ್ಲೀನನಾಗುವ ವಿಶೇಷ ಕಲೆ ಕರಗತ ಮಾಡಿಕೊಂಡಿದ್ದ ಇರ್ಫಾನ್, ಬಾಲಿವುಡ್, ಹಾಲಿವುಡ್ ಸಿನಿಮಾ ಇಂಡಸ್ಟ್ರಿಗಳಲ್ಲಿ ಯಶಸ್ಸು ಕಂಡಿದ್ದಾರೆ. ಇರ್ಫಾನ್ ಸತತ ಪರಿಶ್ರಮದಿಂದ ಯಸಸ್ಸು ಸಾಧಿಸಿದ ನಟ. ಆದರೆ ತಮ್ಮ ಯಶಸ್ಸನ್ನು ಅನುಭವಿಸುವ ಮೊದಲೇ ಕೇವಲ 54ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.  ನೆಚ್ಚಿನ ಕಾರುಗಳ ವಿಚಾರದಲ್ಲೂ ಇರ್ಫಾನ್ ಪಯಣ ಇದಕ್ಕಿಂತ ಭಿನ್ನವಾಗಿಲ್ಲ.

ನಾನ್ ಹೆಂಡತಿಗೋಸ್ಕರನಾದ್ರೂ ಬದುಕಬೇಕು: ಇರ್ಫಾನ್ ಖಾನ್

Tap to resize

Latest Videos

undefined

ಹೋರಾಟ, ಕಠಿಣ ಪರಿಶ್ರಮದಿಂದ ಬಡತನ ಬೇಗೆಯಿಂದ ಹೊರಬಂದ ಇರ್ಫಾನ್ ಶ್ರೀಮಂತ ಬಾಲಿವುಡ್ ನಟರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಗಳಿಕೆ, ಆದಾಯಕ್ಕೆ ತಕ್ಕಂತೆ ಇರ್ಫಾನ್ ಕಾರು ಖರೀದಿಸಿದ್ದಾರೆ. ಆದರೆ ಈ ಕಾರಿನಲ್ಲಿ ನೆಮ್ಮೆದಿಯಾಗಿ ಪ್ರಯಾಣ ಮಾಡುವ ಮೊದಲೇ ಇರ್ಫಾನ್ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತಿದ್ದ ಇರ್ಫಾನ್ ಕೊಲೊನ್ ಇನ್‌ಫೆಕ್ಷನ್‌ನಿಂದ ಇಂದು(ಏ.29) ಸಾವನ್ನಪ್ಪಿದ್ದಾರೆ.

ಬಾಲ್ಯದಲ್ಲಿ ಕ್ರಿಕೆಟರ್ ಆಗಬೇಕು ಎಂದುಕೊಂಡಿಡ್ಡ ಇರ್ಫಾನ್, ಅತ್ಯುತ್ತಮ ಬ್ಯಾಟ್ಸಮನ್ ಕೂಡ ಆಗಿದ್ದರು. ಆದರೆ ದೇಸಿ ಟೂರ್ನಿಗಾಗಿ ತಂಡಕ್ಕೆ ಆಯ್ಕೆಯಾದಾಗ ಶೂ, ಸೇರಿದಂತೆ ಕ್ರಿಕೆಟ್ ವಸ್ತುಗಳ ಖರೀದಿಗೆ ಇರ್ಫಾನ್ ಬಳಿ ಹಣವಿರಲಿಲ್ಲ. ಬಳಿಕ ಕ್ರಿಕೆಟ್ ಆಸೆ ಕೈಬಿಟ್ಟ ಇರ್ಫಾನ್ ನಟನಾಗಬೇಕೆಂಬ ಕನಸು ಕಟ್ಟಿ ನನಸು ಮಾಡಿಸಿದರು. ಯಶಸ್ಸಿಗೆ ತಕ್ಕಂತೆ ಇರ್ಫಾನ್ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸಿದ್ದರು. ಇರ್ಫಾನ್ ಕಾರುಗಳ ಪೈಕಿ ಮರ್ಸಡೀಸ್ ಬೆಂಝ್ S ಕ್ಲಾಸ್ 350 ನೆಚ್ಚಿನ ಕಾರು.

54ನೇ ವಯಸ್ಸಿಗೇ ಕೊನೆ ವಿದಾಯ ಹೇಳಿದ ಅದ್ಭುತ ನಟ ಇರ್ಫಾನ್‌ ಖಾನ್‌

ಇರ್ಫಾನ್ ಅವಾರ್ಡ್ ಸೆರಮನಿ, ಸಿನಿಮಾ ಕಾರ್ಯಕ್ರಗಳಿಗೆ ತಮ್ಮ ಬೆಂಝ್ S ಕ್ಲಾಸ್ 350 ಕಾರನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಇದರ ಜೊತೆಗೆ ಇರ್ಫಾನ್ BMW x3, ಆಡಿ, ಮೆಸರಾತಿ ಕ್ವಾರ್ಟ್ರೋಪೊರ್ಟ್ ಹಾಗೂ ಟೊಯೋಟಾ ಸೆಲಿಕಾ ಕಾರು ಹೊಂದಿದ್ದರು. ನೆಚ್ಚಿನ ಕಾರಿನಲ್ಲಿ ಲಾಂಗ್ ಡ್ರೈವ್ ಇಷ್ಟಪಟ್ಟಿದ್ದ ಇರ್ಫಾನ್‌ಗೆ ಅದು ಈಡೇರಲೇ ಇಲ್ಲ. ಅಷ್ಟರಲ್ಲೇ ಆರೋಗ್ಯ ಹದಗೆಟ್ಟಿತ್ತು. ಇನ್ನೇನು ಚೇತರಿಕೆ ಕಾಣುತ್ತಾರೆ ಅಂದುಕೊಳ್ಳುವಷ್ಟರಲ್ಲೇ ನಿಧನರಾಗಿದ್ದಾರೆ.

ಕಳೆದೊಂದು ವರ್ಷದಿಂದ ಇರ್ಫಾನ್ ಹೆಚ್ಚಾಗಿ ಕಾರು ಬಳಸಿಲ್ಲ. ವಿದೇಶದಲ್ಲಿ ಚಿಕಿತ್ಸೆಗೆ ತೆರಳುವ ಸಂದರ್ಭದಲ್ಲಿ ಏರ್‌ಪೋರ್ಟ್ ವರೆಗೆ ಹಾಗೂ ಮರಳಿ ಬಂದಾಗ ಏರ್‌ಪೋರ್ಟ್‌ನಿಂದ ಮನೆಗೆ, ಇನ್ನೂ ಮುಂಬೈನಲ್ಲಿ ಆರೋಗ್ಯ ಚೆಕ್‌ಅಪ್‌ಗೆ ತೆರಳು ಬಳಲಿಸಿದ್ದಾರೆ. ವಿದೇಶದಿಂದ ಚಿಕಿತ್ಸೆ ಪಡೆದ ವಾಪಸ್ ಆದ ಬಳಿಕ ನಟನೆಯಲ್ಲಿ ತೊಡಗಿಸಿಕೊಂಡಿದ್ದ ಇರ್ಫಾನ್ ಕಾರು ಪ್ರಯಾಣ ಆನಂದಿಸುವಷ್ಟರ ಮಟ್ಟಿಗೆ ಚೇತರಿಕೆ ಕಂಡಿರಲಿಲ್ಲ. 

ಬಾಲ್ಯದಲ್ಲಿ ಬಡತನದಲ್ಲೇ ಬೆಳೆದ ಇರ್ಫಾನ್ ಸ್ವಂತ ಪರಿಶ್ರಮದಿಂದ ಯಶಸ್ಸು, ಹೆಸರು, ಆದಾಯ ಗಳಿಸಿದ್ದರು. ಇಷ್ಟಾದರೂ ಇರ್ಫಾನ್ ಹೋರಾಟ ಮುಂದವರಿದಿತ್ತು. ಆರೋಗ್ಯಕ್ಕಾಗಿ ಇರ್ಫಾನ್ ಹೆಜ್ಜೆ ಹೆಜ್ಜೆಗೂ ಹೋರಾಟ ಮಾಡುತ್ತಿದ್ದರು. ತಮ್ಮ ಬದುಕಿನ ಬಹುತೇಕ ಅವಧಿ ಹೋರಾಟದಲ್ಲಿ ಮುಳುಗಿದ ಇರ್ಫಾನ್‌ಗೆ ನೆಚ್ಚಿನ ಕಾರಿನಲ್ಲಿ ಸುಂದರ ಪಯಣ ಅನುಭವಿಸಲು ಕಾಲ ಅವಕಾಶವೇ ನೀಡಲಿಲ್ಲ.

click me!