3 ತಿಂಗಳಲ್ಲಿ ಎಲ್ಲಾ ಕಾರು ಬುಕ್; ದಾಖಲೆ ಬರೆದ BMW x7

By Web Desk  |  First Published Oct 31, 2019, 1:16 PM IST

ಕಾರು ಮಾರಾಟ ಕುಸಿತದಲ್ಲೂ ಐಷಾರಾಮಿ ಹಾಗೂ ದುಬಾರಿ ಕಾರುಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗೋ ಮೂಲಕ ಅಚ್ಚರಿ ಮೂಡಿಸಿಸಿದೆ. ಮರ್ಸಡೀಸ್ ಬೆಂಜ್ ಬೆನ್ನಲ್ಲೇ ಇದೀಗ BMW ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.


ನವದೆಹಲಿ(ಅ.31): ಮೊನ್ನೆ ಮೊನ್ನೆಯಷ್ಟೇ ಮರ್ಸಿಡಿಸ್‌ ಬೆಂಜ್‌ 600 ಕಾರುಗಳನ್ನು ಮಾರಾಟ ಮಾಡಿ ದಾಖಲೆಯ ಬರೆದಿತ್ತು. ಕಾರುಗಳ ಮಾರಾಟ ಕುಸಿದಿರುವ ಹೊತ್ತಲ್ಲಿ, ಆಟೋ ಮೊಬೈಲ್‌ ಉದ್ಯಮ ನೆಲಕಚ್ಚಿರುವ ಸಂದರ್ಭದಲ್ಲಿ ಲಕ್ಷುರಿ ಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿ ದಾಖಲೆ ಬರೆದಿರುವುದು, ಉದ್ಯಮದ ಪಾಲಿಗೆ ಒಳ್ಳೆಯ ಸುದ್ದಿಯೆಂದೇ ಹೇಳಲಾಗುತ್ತಿದೆ.

Latest Videos

undefined

ಇದನ್ನೂ ಓದಿ: ಆಕರ್ಷಕ ಫೀಚರ್ಸ್, ಐಷಾರಾಮಿ ಸ್ಪೋರ್ಟ್ ಸೆಡಾನ್ BMW 3 ಸೀರಿಸ್ ಕಾರು ಲಾಂಚ್!

ಇದೀಗ ಬಿಎಂಡಬ್ಲ್ಯು ಅಂಥದ್ದೇ ಒಂದು ರೋಚಕ ಸುದ್ದಿಯನ್ನು ಮುಂದಿಟ್ಟಿದೆ. ಮೂರು ತಿಂಗಳ ಹಿಂದಷ್ಟೇ ಬಿಎಂಡಬ್ಲ್ಯು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಎಕ್ಸ್‌7 ತಾನು ನಿರ್ಮಿಸಿದ ಎಲ್ಲಾ ಕಾರುಗಳನ್ನೂ ಮಾರಾಟಮಾಡಿ ದಾಖಲೆ ಬರೆದಿದೆ. ಅತ್ಯುತ್ತಮ ತಂತ್ರಜ್ಞಾನ, ಹೊಸ ತಲೆಮಾರಿನ ಅಗತ್ಯಗಳನ್ನು ಅರಿತು ರೂಪಿಸುವ ನೈಪುಣ್ಯ, ನಾಳೆಯ ಕಾರು ಎಂದು ಕರೆಸಿಕೊಳ್ಳುವ ಕಾರುಗಳ ನಿರ್ಮಾಣ, ನಾಳಿನ ಭಾರತವನ್ನು ರೂಪಿಸುವ ಸಂಸ್ಥೆ ಎಂದೇ ತನ್ನನ್ನು ಕರೆದುಕೊಳ್ಳುವ ಬಿಎಂಡಬ್ಲ್ಯು ಈ ಮಾರಾಟದಿಂದ ಮತ್ತಷ್ಟುಹುರುಪುಗೊಂಡಿದೆ.

ಇದನ್ನೂ ಓದಿ: BMW ಕಾರು ಗಿಫ್ಟ್ ನೀಡಿದ್ರೂ ಪೋಷಕರಿಗೆ ತಪ್ಪಲಿಲ್ಲ ತಲೆನೋವು!

ಬಿಎಂಡಬ್ಲ್ಯು ಅಧ್ಯಕ್ಷ ಮತ್ತು ಮುಖ್ಯ ಎಕ್ಸಿಕ್ಯೂಟಿವ್‌ ಆಫೀಸರ್‌ ರುದ್ರತೇಜ್‌ ಸಿಂಗ್‌ ಹೇಳುವಂತೆ ನಮ್ಮ ಕಾರುಗಳಲ್ಲೇ ಅತ್ಯುತ್ತಮ ಎನ್ನಬಹುದಾದ ಎಕ್ಸ್‌7, ತಾನು ಸೆಗ್‌ಮೆಂಟ್‌ ಲೀಡರ್‌ ಅನ್ನುವುದನ್ನು ತೋರಿಸಿಕೊಟ್ಟಿದೆ. ಅದಕ್ಕೆ ಬಂದ ಪ್ರತಿಕ್ರಿಯೆಯಿಂದ ನಾವು ದಂಗಾಗಿದ್ದೇವೆ. ಲಾಂಚ್‌ ಆದ ಮೂರೇ ತಿಂಗಳಲ್ಲಿ ಮೊದಲ ನಿರ್ಮಾಣದ ಅಷ್ಟೂಕಾರುಗಳೂ ಬುಕ್‌ ಆಗಿವೆ. ಒಳ್ಳೆಯ ಕಾರುಗಳಿಗೆ ಮಾರುಕಟ್ಟೆಕುಸಿದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಮಾರುಕಟ್ಟೆಹೇಗೆ ಇದ್ದರೂ ಸದೃಢವಾದ ಅತ್ಯುತ್ತಮ ನೈಪುಣ್ಯದಲ್ಲಿ ತಯಾರಾದ ಕಾರುಗಳಿಗೆ ಮಾರುಕಟ್ಟೆಇದ್ದೇ ಇರುತ್ತದೆ. ಎಕ್ಸ್‌7 ಕೇವಲ ಆರಂಭ ಮಾತ್ರ. ಮತ್ತಷ್ಟುಲಕ್ಷುರಿ ಕಾರುಗಳನ್ನು ನಿರ್ಮಾಣ ಮಾಡಲು ಬಿಎಂಡಬ್ಲ್ಯು ಮುಂದಾಗಲಿದೆ.

ಬಿಎಂಡಬ್ಲ್ಯು ಎಕ್ಸ್‌7 ಡೀಸಲ್‌ ಮತ್ತು ಪೆಟ್ರೋಲ್‌ ವೇರಿಯಂಟ್‌ಗಳಲ್ಲಿ ಲಭ್ಯವಿದೆ.
 

click me!