ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ನೀಡಿದ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್‌ಡೌನ್ ಸಡಿಲೆಕೆಯಾದರೂ ಕಂಪನಿಗಳ ಆರ್ಥಿಕತೆ ಸುಧಾರಿಸಿಲ್ಲ. ಇದೀಗ BMW ಕಂಪನಿ ಆರ್ಥಿಕ ನಷ್ಟ ಸರಿದೂಗಿಸಲು ಬರೋಬ್ಬರಿ 10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಜರ್ಮನಿ(ಜೂ.21): ಲಕ್ಸುರಿ ಕಾರುಗಳ ಪೈಕಿ BMW ಭಾರತದಲ್ಲಿ ಪ್ರಸಿದ್ದವಾಗಿದೆ. ಐಷಾರಾಮಿ ಕಾರು BMW ಇದೀಗ ಆರ್ಥಿಕ ಸಂಕಷ್ಟ ಸರಿದೂಗಿಸಲು 10,000 ಉದ್ಯೋಗ ಕಡಿತ ಮಾಡುತ್ತಿದೆ. ಒಪ್ಪಂದದಲ್ಲಿ ಕೆಲಸ ನಿರ್ವಹಿಸುತ್ತಿದ್ದ 10 ಸಾವಿರ ಉದ್ಯೋಗಿಗಳ ಒಪ್ಪಂದ ನವೀಕರಿಸಲು BMW ಹಿಂದೆ ಸರಿದಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಆರ್ಥಿಕ ಹಿನ್ನಡೆ ಅನುಭವಿಸಿದೆ. ಹೀಗಾಗಿ ನಿರ್ಧಾರ ಕೈಗೊಂಡಿದ್ದೇವೆ ಎಂದು BMW ಹೇಳಿದೆ.
ಮೆಸರಾತಿ, BMW ಒಡತಿ ಸನ್ನಿ ಲಿಯೋನ್‌ಗೆ ಬೇಕಂತೆ ಈ ಕಾರು!...
undefined
BMW ನಿರ್ವಹಣಾ ವೆಚ್ಚ ಸರಿದೂಗಿಸಲು ಉದ್ಯೋಗ ಕಡಿತ ಮಾಡುತ್ತಿದೆ. ಈ ಮೂಲಕ ಉದ್ಯೋಗ ಕಡಿತ ಮಾಡಿದ ಹಲವು ಕಂಪನಿಗಳ ಸಾಲಿಗೆ BMW ಸೇರಿಕೊಂಡಿದೆ. ಈಗಾಗಲೇ BMW ಮುಂದಿನ ಪೀಳಿಗೆ ಕಾರುಗಳಲ್ಲಿ ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆ ಮಾಡಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಮರ್ಸಿಡೀಸ್ ಬೆಂಜ್, ಆಡಿ ಸೇರಿದಂತೆ ಇತರ ಲಕ್ಸುರಿ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.
ಮಾರುಕಟ್ಟೆಯಲ್ಲಿ ಹೊಸ ಕಾರು ಬಾರು; ನಿಮ್ಮ ಆಯ್ಕೆ ಯಾವುದು?
BMW ಕಾರು ಕಂಪನಿ ಈ ನಿರ್ಧಾರ ಒಪ್ಪಂದದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉದ್ಯೋಗಿಗಳಲ್ಲಿ ಆತಂಕ ತಂದಿದೆ. ಒಪ್ಪಂದ ನವೀಕರಿಸುವ ವಿಶ್ವಾಸದಲ್ಲಿದ್ದ BMW ಕಂಪನಿ ಇದೀಗ ಈ ನಿರ್ಧಾರ ತೆಗೆದುಕೊಂಡಿರುವುದು ಒಪ್ಪಂದ ಉದ್ಯೋಗಿಗಳ ಚಿಂತೆಗೆ ಕಾರಣವಾಗಿದೆ. ಸದ್ಯ ಆಟೋಮೊಬೈಲ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಹೀಗಾಗಿ ಇತರ ಕೆಲಸ ಗಿಟ್ಟಿಸಿಕೊಳ್ಳುವುದು ಅಸಾಧ್ಯ ಎಂದು ಒಪ್ಪಂದ ಕಾರ್ಮಿಕರು ಹೇಳುತ್ತಿದ್ದಾರೆ.